RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಮುಖ್ಯಮಂತ್ರಿಗಳ ಮೇಲೆ ಪಂಚಮಸಾಲಿ ಸಮಾಜದ ಋಣವಿದೆ. ಕೂಡಲೇ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು : ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹ

ಗೋಕಾಕ:ಮುಖ್ಯಮಂತ್ರಿಗಳ ಮೇಲೆ ಪಂಚಮಸಾಲಿ ಸಮಾಜದ ಋಣವಿದೆ. ಕೂಡಲೇ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು : ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹ 

ಮುಖ್ಯಮಂತ್ರಿಗಳ  ಮೇಲೆ ಪಂಚಮಸಾಲಿ  ಸಮಾಜದ ಋಣವಿದೆ. ಕೂಡಲೇ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು : ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 13 :

ಮುಖ್ಯಮಂತ್ರಿಗಳ ಮೇಲೆ ಸಮಾಜದ ಋಣವಿದೆ. ಕೂಡಲೇ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮಿಗಳು ಹೇಳಿದರು ‌.

ರವಿವಾರದಂದು ನಗರದ ನ್ಯೂ ಇಂಗ್ಲಿಷ್ ಶಾಲಾ ಆವರಣದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿ ಹಾಗೂ ತಾಲೂಕು ಘಟಕ ಗೋಕಾಕ ವತಿಯಿಂದ  ಹಮ್ಮಿಕೊಂಡ  2 ಎ ಮೀಸಲಾತಿಗಾಗಿ ಆಗ್ರಹಿಸಿ ನಡೆದ ಲಿಂಗಾಯತ ಪಂಚಮಸಾಲಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಳೆದ  ಎರಡು ವರ್ಷಗಳ  ಕಾಲ ಮಠವನ್ನು ಬಿಟ್ಟು ನಿರಂತರ ಸಮುದಾಯಕ್ಕೆ 2 ಎ ಮೀಸಲಾತಿ ಸಂಬಂಧ  ಹೋರಾಟಮಾಡುತ್ತಿದ್ದೇನೆ

ಮೀಸಲಾತಿ ಹೋರಾಟ ನ್ಯಾಯಾಲಯದಲ್ಲಿ ಇದೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ.  ಮರಾಠ ಸಮಾಜವರು ಮಹಾರಾಷ್ಟ್ರದಲ್ಲಿ  ಪ್ರತ್ಯೇಕ ಮಿಸಲಾತಿ ಕೇಳಿದ ಹಾಗೆ ನಾವು ಮೀಸಲಾತಿ  ಕೇಳುತ್ತಿಲ್ಲ, ಬೇರೆ ಸಮಾಜದವರಿಗೆ ಮೀಸಲಾತಿ ನೀಡಿದ ಹಾಗೆ ನಮ್ಮ ಸಮಾಜಕ್ಕೂ ಸಹ ಮೀಸಲಾತಿ ನೀಡಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ಈ ಹೋರಾಟ ಸಮಿಪೈನಲ್ ವಾಗಿದ್ದು  ಕೊನೆಯ ಹೋರಾಟ ಡಿಸೆಂಬರ್ 12 ರಂದು 25 ಲಕ್ಷ ಪಂಚಮಸಾಲಿಗಳು ಸೇರಿ ಹೋರಾಟ ಮಾಡುತ್ತೇವೆ. ಅಲ್ಲಿಯ ವರೆಗೆ ಮೀಸಲಾತಿ ಘೋಷಿಸಬೇಕು  ಮಾಡದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದ ಅವರು ಅರಬಾವಿ ಮತ್ತು ಗೋಕಾಕದಲ್ಲಿ ಸಭೆಮಾಡಲು ಅಂಜಿಕೆಯಾಗುತ್ತಿತ್ತು. ಆದರೆ ಈರಣ್ಣ ಕಡಾಡಿ ಅವರ ಸಹಕಾರದಿಂದ ಅದು ಸಾಧ್ಯವಾಗಿದೆ.  ನಿರ್ಭಯವಾಗಿ ಗೋಕಾಕ ಮತ್ತು ಅರಬಾವಿ ಕ್ಷೇತ್ರಗಳಲ್ಲಿ ಪಂಚಮಸಾಲಿ ಸಮಾಜದವರು ಸಂಘಟನೆ ಮಾಡಿ ಸಮಾವೇಶವನ್ನು ಸಂಘಟಿಸಲಾಗಿದ್ದು, ಕರ್ನಾಟಕದಲ್ಲಿ ಮೀಸಲಾತಿ ಹೋರಾಟಕ್ಕೆ  5 ಜಿ  ಶಕ್ತಿ ಗೋಕಾಕ ತಂದು ಕೊಟ್ಟಿದೆ. 
ಮೊನ್ನೆ ನಡೆದ ಘಟನೆಯಲ್ಲಿ ಮುಗ್ದ ಸಮಾಜದವರನ್ನು ಪ್ರಚೋದಿಸಿ ಈರಣ್ಣ  ಕಡಾಡಿ ಅವರಿಗೆ ಅಸೂಯೆ ಮಾಡಲಾಗಿದೆ ಇದು ಒಳ್ಳೆಯ ಬೆಳೆವಣಿಗೆ ಅಲ್ಲ, ಇದನ್ನು 1 ಕೋಟಿ ಪಂಚಮಸಾಲಿ ಸಮಾಜದವರು ಖಂಡಿಸುತ್ತೇವೆ ಎಂದು ಸತೀಶ ಜಾರಕಿಹೊಳಿ ಅವರ ಪರ ನಡೆದ ಹೋರಾಟವನ್ನು  ಶ್ರೀಗಳು  ಖಂಡಸಿದರು.
ಪಂಚಮಸಾಲಿ ಸಮಾಜದ ನಾಯಕರು ಮಾತನಾಡಿದರೆ ಕೆಲವರು ಅವರ ಮೇಲೆ ಹರಿಹಾಯುತ್ತಿದ್ದಾರೆ. ಪಂಚಮಸಾಲಿಗಳು ಒಂದಾಗುತ್ತಿದ್ದರೆ ಬೇರೆ ಅವರಿಗೆ ತೊಂದರೆಯಾಗುತ್ತಿದೆ. ಈ ಹೋರಾಟ ಕಾಂಗ್ರೆಸ್ ,ಬಿಜೆಪಿದಲ್ಲ ಸಮುದಾಯದ ಹೋರಾಟ ಪಕ್ಷದ ಶಾಲನ್ನು ಬದಿಗೋತ್ತಿ ಈ ಹೋರಾಟ ನಡೆಸುತ್ತಿದ್ದೇವೆ  ಡಿಸೆಂಬರ್ 12 ಒಳಗೆ ಮೀಸಲಾತಿಯನ್ನು ಪಡದೆ ತೀರುತ್ತೇವೆ ಎಂದು ಹೇಳಿದರು.

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬಸವನಗೌಡ ಯತ್ನಾಳ  ವಾಲ್ಮೀಕಿ, ಪರಿಶಿಷ್ಟ , ತಳವಾರ, ಮರಾಠ ಸಮಾಜದ ಬಗ್ಗೆ ವಿಧಾನಸಬೆಯಲ್ಲಿ ಮಾತನಾಡಿದವನ್ನು ನಾನು ಯಾವುದೇ ಸಮಾಜದ ವಿರೋಧಿಯಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಅವರು ಹಿಂದು ಧರ್ಮದ ಬಗ್ಗೆ ಮಾತನಾಡಿಲ್ಲ, ಆದರೆ ಇಂದು ಕೆಲವರು ಅದನ್ನು ಹಿಂದೂ ಧರ್ಮದ ಬಗ್ಗೆ ಮಾತನಾಡಿ ಅವರ ಭಾವನೆಗಳಿಗೆ ದಕ್ಕೆ ತಂದಿದ್ದಾರೆ.  ಲಿಂಗಾಯತರು 11 ರೂ ಪಟ್ಟಿ ಕೊಟ್ಟವರು  ಎಂದು ಸಮುದಾಯವನ್ನು ಟೀಕಿಸಿದ್ದವರಿಗೆ  ಲಿಂಗಾಯತರು ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದರು. ಪರೋಕ್ಷವಾಗಿ ಸತೀಶ ಜಾರಕಿಹೊಳಿ ವಿರುದ್ಧ ಹರಿಹಾಯ್ದರು.

ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ನಮ್ಮ ಸಮುದಾಯದವರೆ ಅನ್ಯಾಯ ಮಾಡಿದಾಗ ಅವರ ಪರವಾಗಿ ಮಾತನಾಡಿದ್ದು ನಾನೇ ಎಂದ ಅವರು ಯಮಕನಮರಡಿ ಸಾಮಾನ್ಯ ಕ್ಷೇತ್ರವಾಗಿದ್ದರೆ  ನಾನೇ ಚುನಾವಣೆಗೆ ನಿಲ್ಲುತ್ತಿದೆ ಎಂದು ಸತೀಶ ಜಾರಕಿಹೊಳಿ ಅವರಿಗೆ ಟಾಂಗ್ ನೀಡಿದ ಯತ್ನಾಳ  ರಾಣಿ , ಚನ್ನಮ್ಮ, ರಾಯಣ್ಣ, ಛತ್ರಪತಿ ಶಿವಾಜಿ, ಸಂಭಾಜಿ  ಬಗ್ಗೆ ಹಗುರವಾಗಿ ಮಾತನಾಡಬ್ಯಾಡರಿ ಎಂದ ಅವರು ಹಿಂದು  ಧರ್ಮದ ಬಗ್ಗೆ ಹಿಂದುತ್ವದ ಬಗ್ಗೆ ಮಾತನಾಡಿ ಕ್ಷೇಮೆ ಕೇಳಿದ್ದಿರಿ , ಹಿಂದೂ ಸಮಾಜದವರು ಕ್ಷಮಿಸಿದ್ದಾರೆ. ಆದರೆ ಮುಂದೆ ಮಾತನಾಡಿದರೆ ಕ್ಷಮಿಸಲು ಸಾಧ್ಯವಿಲ್ಲ ಎಂದು ಸತೀಶ ಜಾರಕಿಹೊಳಿ ಅವರ ವಿರುದ್ಧ ಗುಡುಗಿದರು.
ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಮಾತನಾಡಿ ಪೊಲೀಸರ ಸರ್ಪಗಾವಲಿನಲ್ಲಿ ಪಂಚಮಸಾಲಿ ಸಮಾಜದ ನಡೆಯುತ್ತಿರುವದು ವಿಷಾದವೆನಿ‌ಸುತ್ತದೆ. ನಮ್ಮ ಸಮಾಜಕ್ಕೆ ಪೊಲೀಸರ ಅವಶ್ಯಕತೆ ಇಲ್ಲಾ , ನಮ್ಮ ಪಂಚಮಸಾಲಿ ಸಮಾಜ ಗಟ್ಟಿಯಾಗಿದೆ ಎಂದು ಪೊಲೀಸರು ಸಮಾವೇಶಕ್ಕೆ ನೀಡಿದ ಬಂದೋಬಸ್ತ್ ವನ್ನು ಖಂಡಿಸಿದ ಅವರು ಈ ಸಮಾವೇಶ ರಾಜಕೀಯ ಬದಲಾವಣೆಗೆ ಕಾರಣವಾಗಿದೆ. ಸತೀಶ ಜಾರಕಿಹೊಳಿ ಅವರು ತಮ್ಮ ನಿಲುವನ್ನು ಪ್ರಸ್ತಾಪಿಸಿದ್ದಾರೆ ಅದಕ್ಕೆ ಯತ್ನಾಳ ಅವರು ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ಕೆಲವರು ಅದನ್ನು ವೈಯುಕ್ತಿಕವಾಗಿ ತಗೆದುಕೊಂಡು ಯತ್ನಾಳ ಗೋಕಾಕ ಸಮಾವೇಶಕ್ಕೆ ಬಂದರೆ ನೋಡಿಕೊಳ್ಳುತ್ತೇನೆ ಎಂದು ಕೆಲವರು ಹೇಳಿದ್ದು ಕೇಳಿದ್ದೇನೆ ಯತ್ನಾಳ ಸಮಾವೇಶಕ್ಕೆ ಬಂದಿದ್ದಾರೆ ಎಲ್ಲಿದ್ದಿರಪ್ಪಾ ಎಂದು ಸತೀಶ ಜಾರಕಿಹೊಳಿ ಅವರ ಅಭಿಮಾನಿಗಳನ್ನು ಕೆಣಕಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಚಿವ ವಿನಯ ಕುಲಕರ್ಣಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ,  , ವಿಜಯಾನಂದ ಕಾಶಪ್ಪನವರ, ಅರವಿಂದ ಬೆಲ್ಲದ್ ಅವರು ಮಾತನಾಡಿ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿಯನ್ನು ಸರಕಾರ ಡಿಸೆಂಬರ್ 12 ಒಳಗೆ ನೀಡಬೇಕು ಇಲ್ಲದಿದ್ದರೆ ಮುಂದಿನ ನಿಲುವನ್ನು ಪ್ರಕಟಿಸಬೇಕಾಗುತ್ತದೆ ಎಂದು ಸರಕಾರವನ್ನು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.

Related posts: