ಗೋಕಾಕ:ದಿನಾಂಕ 21 ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಧರಣಿ ಸತ್ಯಾಗ್ರಹ : ಮಾರುತಿ ಮರ್ಡಿ ಮೌರ್ಯ
ದಿನಾಂಕ 21 ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಧರಣಿ ಸತ್ಯಾಗ್ರಹ : ಮಾರುತಿ ಮರ್ಡಿ ಮೌರ್ಯ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 18 :
ಕರ್ನಾಟಕ ರಾಜ್ಯದಲ್ಲಿರುವ ಕುರುಬ ಸಮುದಾಯಕ್ಕೆ ಎಸ್.ಟಿ. ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದ್ದು, . ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ (ಎಸ್.ಟಿ.) ಮೀಸಲಾತಿ ಪಟ್ಟಿಯಲ್ಲಿ ಕುರುಬರಿಗೆ ಸಂಬಂಧಪಟ್ಟ ಗೊಂಡ, ರಾಜಗೊಂಡ, ಜೇನುಕುರುಬ, ಕಾಡುಕುರುಬ, ಕಾಟ್ಟುನಾಯಕನ್, ಕುರುಮನ್ಸ್ ಮತ್ತು ಕ್ರಮ ಸಂಖ್ಯೆ 28 ರಲ್ಲಿ “ಕುರುಬ” ಎಂಬ ಜಾತಿಗಳು ಇದ್ದರೂ ಸಹ ರಾಜ್ಯವ್ಯಾಪಿ ವಿಸ್ತಾರ ಮಾಡಿಲ್ಲ. ಈ ಅನ್ಯಾಯವನ್ನು ಸರಿಪಡಿಸಲು ಸರ್ಕಾರಗಳಿಗೆ ಮನವಿ ಮಾಡಲಾಗಿದ್ದು, ಪೂರಕವಾಗಿ 2018ರ ಸಮ್ಮಿಶ್ರ ಸರ್ಕಾರದಲ್ಲಿ ಎಸ್. ಟಿ. ಮೀಸಲಾತಿಗಾಗಿ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೊಧನಾ ಕೇಂದ್ರ, ಮೈಸೂರು ಇವರಿಂದ “ಕುಲಶಾಸ್ರ್ತೀಯ ಅಧ್ಯಯನಕ್ಕೆ ಆದೇಶಿಸಿ, ಅಧ್ಯಯನವೂ ಸಂಪೂರ್ಣವಾಗಿ ಮುಗಿದಿದ್ದು, ಸರ್ಕಾರವು ಅಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಹಾಲುಮತ ಮಹಾಸಭಾ ರಾಜ್ಯ ಸಂಚಾಲಕ ಮಾರುತಿ ಮರ್ಡಿ ಮೌರ್ಯ ಕಿಡಿ ಕಾರಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾಗಿನೆಲೆ ಮಹಾಸಂಸ್ಥಾನ ಜಗದ್ಗುರು ಶ್ರೀಶ್ರೀಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಹಾಗೂ ಹಾಲುಮತ ಮಹಾಸಭಾದ ರಾಜ್ಯಸಮಿತಿ ಪದಾಧಿಕಾರಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಹಲವಾರು ಸಾರಿ ಮನವಿ ಮಾಡಿದ್ದಾರೆ. ಬರುವ ದಿನಗಳಲ್ಲಿ ಸರ್ಕಾರ ಸೂಕ್ತಕ್ರಮ ಕೈಗೋಳ್ಳದಿದ್ದರೆ ಮುಂಬರುವ ಚುನಾವಣೆಯಲ್ಲಿ ಸಮೂದಾಯ ತಕ್ಕ ಪಾಠ ಕಲಿಸಲಿದೇ ಎಂದಿರುವ ಅವರು ಮೀಸಲಾತಿಯ ವಿಷಯದಲ್ಲಿ ಮುಖ್ಯಮಂತ್ರಿಗಳು ವಿಳಂಬಮಾಡದೇ ಅಧ್ಯಯನದ ವರದಿಯನ್ನು ಅಂಗೀಕರಿಸಿ, ಕೇಂದ್ರಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂಬ ಒತ್ತಾಯಿಸಿ “ದಿನಾಂಕ 21-11-2022ರ ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಒಂದು ದಿನದ ಧರಣಿ”ಯ ಮೂಲಕ “ಮುಖ್ಯಮಂತ್ರಿಗಳೇ ಕುರುಬ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ, ಎಸ್.ಟಿ. ಮೀಸಲಾತಿ ನೀಡಿವಂತೆ ಆಗ್ರಹಿಸಲಾಗುವುದು. ಕಾರಣ ಬೆಳಗಾವಿ ಜಿಲ್ಲೆಯ ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದ್ದಾರೆ.