RNI NO. KARKAN/2006/27779|Thursday, November 21, 2024
You are here: Home » breaking news » ಗೋಕಾಕ:ಗೋಕಾಕ ನಾಡು ಹಲವು ಉದಯೋನ್ಮುಖ ಸಾಹಿತಿಗಳನ್ನು ನಾಡಿಗೆ ಕೋಡುಗೆಯಾಗಿ ನೀಡುತ್ತಿದೆ : ಗಜಾನನ ಮನ್ನಿಕೇರಿ

ಗೋಕಾಕ:ಗೋಕಾಕ ನಾಡು ಹಲವು ಉದಯೋನ್ಮುಖ ಸಾಹಿತಿಗಳನ್ನು ನಾಡಿಗೆ ಕೋಡುಗೆಯಾಗಿ ನೀಡುತ್ತಿದೆ : ಗಜಾನನ ಮನ್ನಿಕೇರಿ 

ಗೋಕಾಕ ನಾಡು ಹಲವು ಉದಯೋನ್ಮುಖ ಸಾಹಿತಿಗಳನ್ನು ನಾಡಿಗೆ ಕೋಡುಗೆಯಾಗಿ ನೀಡುತ್ತಿದೆ : ಗಜಾನನ ಮನ್ನಿಕೇರಿ 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 20 :

ಸಾಹಿತ್ಯ ಕ್ಷೇತ್ರದಲ್ಲಿ ಗೋಕಾಕ ನಾಡು ತನ್ನದೇ ಆದ ಛಾಪು ಮೂಡಿಸಿ, ಹಲವು ಉದಯೋನ್ಮುಖ ಸಾಹಿತಿಗಳನ್ನು ನಾಡಿಗೆ ಕೋಡುಗೆಯಾಗಿ ನೀಡುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಗಜಾನನ ಮನ್ನಿಕೇರಿ ಹೇಳಿದರು

ರವಿವಾರಂದು ನಗರದ ಕೆಎಲ್ಇ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ  ಕಾವ್ಯ ಕೂಟ  ಕನ್ನಡ ಬಳಗ, ಜಾಗೃತ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ  ಸಾಹಿತಿ , ಶಿಕ್ಷಕ ಈಶ್ವರ ಮಮದಾಪೂರ ಅವರು ರಚಿಸಿದ ಗೋಕಾಕ ತಾಲೂಕು ದರ್ಶನ ಮತ್ತು ದಿಗಂತದ ಅಪ್ಪುಗೆ ಎಂಬ ಕೃತಿಗಳನ್ನು ಲೋಕಾರ್ಪಣೆ ಗೋಳಿಸಿ ಅವರು ಮಾತನಾಡಿದರು‌
ಡಾ.ಡಿ.ಸಿ.ಪಾವಟೆ, ಕೃಷ್ಣಮೂರ್ತಿ ಪುರಾಣಿಕ, ಕೌಜಲಗಿ ನಿಂಗಮ್ಮ, ಕುಲಗೋಡ ತಮ್ಮಣ,  ಬಿ.ಬಿ.ಮಮದಾಪೂರ,  ಪ್ರಸ್ತುತ  ಡಾ.ಚಂದ್ರಶೇಖರ್ ಕಂಬಾರ, ಡಾ.ಸಿ.ಕೆ ನಾವಲಗಿ, ಪ್ರೋ ಚಂದ್ರಶೇಖರ್ ಅಕ್ಕಿ, ಪ್ರೋ ಜಿ.ವಿ.ಮಳಗಿ ಸೇರಿದಂತೆ ಅನೇಕರು ಈ ನಾಡಿನ ಅನೇಕ ಚಿಂತಕರು ಸಾಹಿತ್ಯದ ರಸದೌತಣ ನೀಡುತ್ತಿದ್ದಾರೆ. ಈ ನಾಡಿನ ಮಣ್ಣಿನ ಗುಣದ ಪರಿಣಾಮ ಇಂತಹ ಸಾಹಿತ್ಯ ಮತ್ತು ಸಾಹಿತಿಗಳು ಹುಟ್ಟಿ ಬೆಳೆಯಲು  ಕಾರಣವಾಗಿದೆ ಎಂದ ಅವರು ಶ್ರೇಷ್ಠ ಚಿಂತಕರು, ಸಾಹಿತಿಗಳು , ದಾರ್ಶನಿಕರನ್ನು ನೀಡಿದ ನಾಡು ಗೋಕಾಕದಲ್ಲಿ ಇದ್ದಾರೆ ಅವರೆಲ್ಲರು ಮಾಡುತ್ತಿರುವ  ಸಾಹಿತ್ಯ ಕೃಷಿಯಿಂದ ಈ ನಾಡು ಸಾಹಿತ್ಯಕವಾಗಿ   ಇನ್ನಷ್ಟು ಸಮೃದ್ಧಿಯಾಗಲಿ , ಸಾಹಿತಿ ಈಶ್ವರ ಮಮದಾಪೂರ ಅವರಿಂದ ಇನ್ನಷ್ಟು ಕೃತಿಗಳು ಹೊರ ಬರಲಿ ಎಂದು ಶುಭ ಹಾರೈಸಿದರು.
ಗೋಕಾಕ ತಾಲೂಕು ದರ್ಶನ ಕೃತಿ ಕುರಿತು ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಮಾತನಾಡಿದರೆ, ದಿಗಂತದ ಅಪ್ಪುಗೆ ಕೃತಿ ಕುರಿತು ಡಾ.ವಾಯ್.ಎಂ ಯಾಕೊಳ್ಳಿ ಮಾತನಾಡಿದರು.
ಕಾರ್ಯಕ್ರಮವನ್ನು ಕೆಎಲ್ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನ್ನವಳ್ಳಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೋ ಚಂದ್ರಶೇಖರ್  ಅಕ್ಕಿ ವಹಿಸಿದ್ದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ‌.ಬಿ‌.ಬಳಗಾರ, ಪ್ರೋ ಜಿ.ವಿ ಮಳಗಿ ,  ಡಾ.ಶಶಿಕಲಾ ಕಾಮೋಜಿ, ರಜನಿ ಜಿರಗ್ಯಾಳ, ಭಾರತಿ ಮದಬಾಂವಿ, ಈಶ್ವರ ಮಮದಾಪೂರ ಉಪಸ್ಥಿತರಿದ್ದರು.
ಪುಷ್ಪಾ ಮುರಗೋಡ ಸ್ವಾಗತಿಸಿದರು, ಪ್ರೋ .ಶಿವಲೀಲಾ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎನ್‌.ಆರ್.ಪಾಟೀಲ ವಂದಿಸಿದರು. ನಂತರ ನಡೆದ ಕವಿಗೋಷ್ಠಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಕವಿಗಳು ಭಾಗವಹಿಸಿ ಕವನ ವಾಚಿಸಿದರು.

Related posts: