RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ವಿದ್ಯಾರ್ಥಿಗಳು ಮಾತೃಭಾಷೆಗೆ ಪ್ರಥಮ ಆಧ್ಯತೆ ನೀಡಬೇಕು : ಮಹಾಂತೇಶ ತಾವಂಶಿ

ಗೋಕಾಕ:ವಿದ್ಯಾರ್ಥಿಗಳು ಮಾತೃಭಾಷೆಗೆ ಪ್ರಥಮ ಆಧ್ಯತೆ ನೀಡಬೇಕು : ಮಹಾಂತೇಶ ತಾವಂಶಿ 

ವಿದ್ಯಾರ್ಥಿಗಳು ಮಾತೃಭಾಷೆಗೆ ಪ್ರಥಮ ಆಧ್ಯತೆ ನೀಡಬೇಕು : ಮಹಾಂತೇಶ ತಾವಂಶಿ

ಗೋಕಾಕ ನ 26 :ವಿದ್ಯಾರ್ಥಿಗಳು ಮಾತೃಭಾಷೆಗೆ ಪ್ರಥಮ ಆಧ್ಯತೆ ನೀಡಿ ಅದನ್ನು ಉಳಿಸಿ,ಬೆಳೆಸುವಂತೆ ಗೋಕಾಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಮಹಾಂತೇಶ ತಾವಂಶಿ ಹೇಳಿದರು.
ಶನಿವಾರದಂದು ನಗರದ ಜ್ಞಾನದೀಪ ಪದವಿಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ಲಯನ್ಸ್ ಸಂಸ್ಥೆ ಹಾಗೂ ಜ್ಞಾನದೀಪ ಸ್ವಾತಂತ್ರ್ಯ ಪದವಿಪೂರ್ವ ಮಹಾವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ರಾಜ್ಯೋತ್ಸವದ ನಿಮಿತ್ಯ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ ತಾಲೂಕು ಮಟ್ಟದ ರಸಪ್ರಶ್ನೆ ಸ್ವರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕನ್ನಡದ ನೆಲ,ಜಲ,ಭಾಷೆ ಹಾಗೂ ಸಂಸ್ಕೃತಿಯನ್ನು ಗೌರವಿಸಬೇಕು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ಪಡೆದು ಒಳ್ಳೆಯ ನಾಗರಿಕರಾಗಿರಿ ಟಿವಿ ಮಾಧ್ಯಮಗಳಿಂದ ದೂರವಿದ್ದು ಅಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ ತಮ್ಮ ಜ್ಞಾನ ಮಟ್ಟವನ್ನು ಹೆಚ್ಚಿನಕೊಂಡು ಪ್ರತಿಭಾವಂತರಾಗಿ ಎಂದು ಹಾರೈಸಿದರು.
ಪ್ರಥಮಸ್ಥಾನ ಪಡೆದ ಬೆನಚಿನ್ನಮರಡಿ ಗ್ರಾಮದ ಸರಕಾರಿ ಪ್ರೌಢಶಾಲೆಯ ಸರಸ್ವತಿ ಗುಡಚಿ, ದ್ವಿತೀಯ ಸ್ಥಾನ ಪಡೆದ ಮೇಲ್ಮನಟ್ಟಿ ಗ್ರಾಮದ ಟಿ.ಇ.ಎಸ್.ಎಸ್. ಪ್ರೌಢಶಾಲೆಯ ಬಸವರಾಜ ಹೆಬ್ಬಾಳ ಹಾಗೂ ತೃತೀಯ ಸ್ಥಾನ ಪಡೆದ ನಗರದ ನವ ಚೇತನ್ ಪ್ರೌಢಶಾಲೆಯ ವಿರೇಶ ಸಾಬನಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಡಾ.ಅಶೋಕ್ ಮುರಗೋಡ, ಗುರುದೇವ ಸಿದ್ದಾಪುರಮಠ,ಪ್ರಾಚಾರ್ಯ ಆರ್.ಜಿ.ಭರಭರಿ, ಪ್ರೋ.ಜಿ.ವ್ಹಿ.ಮಳಗಿ ಉಪಸ್ಥಿತರಿದ್ದರು.

Related posts: