RNI NO. KARKAN/2006/27779|Friday, October 18, 2024
You are here: Home » breaking news » ಘಟಪ್ರಭಾ:ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ : ರಮೇಶ ಮಾದರ

ಘಟಪ್ರಭಾ:ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ : ರಮೇಶ ಮಾದರ 

ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ : ರಮೇಶ ಮಾದರ
ಘಟಪ್ರಭಾ ಅ 9: ಕಾರ್ಯಕರ್ತರು ಸಂಘಟನೆಗೆ ಮಾತ್ರ ಸೀಮಿತವಾಗದೆ ಬಡ ದಲಿತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಮೇಶ ಮಾದರ ಹೇಳಿದರು.
ಅವರು ರವಿವಾರದಂದು ಇಲ್ಲಿಗೆ ಸಮೀಪದ ಧುಪದಾಳ ಪ್ರವಾಸಿ ಮಂದಿರದಲ್ಲಿ ಜರುಗಿದ ದಲಿತ ಸಂಘರ್ಷ ಸಮಿತಿ ಇದರ ಬೆಳಗಾವಿ ಜಿಲ್ಲಾ ಘಟಕದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ದಿನದಿಂದ ದಿನಕ್ಕೆ ದಲಿತರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ದಲಿತರಿಗೆ ಸರ್ಕಾರಿ ಸೌಲಭ್ಯಗಳನ್ನು ಪಡೆಯುಲ್ಲಿ ಮೋಸವಾಗದಂತೆ ಕಾರ್ಯಕರ್ತರು ಗಮನ ಹಿರಿಸಿ ಸೌಲಭ್ಯಗಳನ್ನು ನೇರವಾಗಿ ದಲಿತರಿಗೆ ತಲುಪಿಸುವ ಕಾರ್ಯ ಸಂಘಟನೆ ಮುಖಾಂತರ ಮಾಡಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕನಾಗಿ ಆಯ್ಕೆಯಾದ ಕಾಡೇಶ ತುಕಾರಾಮ ತೆಳಗೇರಿ ಇವರನ್ನು ಆದೇಶ ಪತ್ರ ನೀಡಿ ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ಸುಧಾ ಮುರಕುಂಬಿ, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಅಲ್ಲಾಭಕ್ಷ ಮುಲ್ಲಾ, ವಿಠ್ಠಲ ಸಣ್ಣಕ್ಕಿ, ಸಂಜು ಮಾದರ, ವಸಂತ ಮುರಕುಂಬಿ, ಈರಣ್ಣಾ ಸಂಗಮನವರ, ರಮೇಶ ಮೇತ್ರಿ, ಸದಾನಂದ ಕುರಬೇಟ, ಲಕ್ಷ್ಮಣ ನಾಯಿಕ, ಮಾರ್ಖಡೇಶ್ವರ ಮಹೀಮಗೋಳ, ಸಂತೋಷ ದೊಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: