ಗೋಕಾಕ:ವಿದ್ಯಾರ್ಥಿಗಳು ಸಾಧಿಸುವ ಛಲವಿಟ್ಟು ವಿದ್ಯಾರ್ಜನೆ ಮಾಡಬೇಕು : ಮುರುಘರಾಜೇಂದ್ರ ಶ್ರೀ
ವಿದ್ಯಾರ್ಥಿಗಳು ಸಾಧಿಸುವ ಛಲವಿಟ್ಟು ವಿದ್ಯಾರ್ಜನೆ ಮಾಡಬೇಕು : ಮುರುಘರಾಜೇಂದ್ರ ಶ್ರೀ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 26 :
ವಿದ್ಯಾರ್ಥಿಗಳು ಸಾಧಿಸುವ ಛಲವಿಟ್ಟು ವಿದ್ಯಾರ್ಜನೆ ಮಾಡಬೇಕು ಎಂದು ಇಲ್ಲಿನ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಶನಿವಾರದಂದು ನಗರದ ಶ್ರೀ ಸಿದ್ದಲಿಂಗೇಶ್ವರ ಬಿಸಿಎ ಕಾಲೇಜ ಆವರಣದಲ್ಲಿ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿ/ ವಿದ್ಯಾರ್ಥಿನೀಯರ ಸ್ವಾಗತ ಸಮಾರಂಭದ ಅಧ್ಯಕ್ಷೆತೆಯನ್ನು ವಹಿಸಿ ಅವರು ಮಾತನಾಡಿದರು.
ಶಿಕ್ಷಣ ವ್ಯಾಪಾರೀಕರಣವಾಗದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ನೀಡಬೇಕು ಎಂಬ ಮಹತ್ತರ ಉದ್ಧೇಶದಿಂದ ಕಳೆದ 2 ದಶಕಗಳ ಕಾಲ ಚೆನ್ನಬಸವೇಶ್ವರ ವಿದ್ಯಾಪೀಠದಲ್ಲಿ ಬಿಸಿಎಯನ್ನು ಪ್ರಾರಂಭಿಸಲಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಹೆಸರಿನೊಂದಿಗೆ ಸಂಸ್ಥೆಯ ಹೆಸರನ್ನು ಸಹ ಉತ್ತುಂಗಕ್ಕೆ ಏರಿಸಿದ್ದಾರೆ. ಈ ವರ್ಷ ದಾಖಲಾತಿ ಪಡೆದ ವಿದ್ಯಾರ್ಥಿಗಳು ಸಹ ಕಲಿತು ಒಳ್ಳೆಯ ಹೆಸರು ಮಾಡುಬೇಕು ಎಂದ ಅವರು ಶ್ರೀಮಠ 2 ದಶಕಗಳಿಂದ ಶಿಕ್ಷಣ ರಂಗದಲ್ಲಿ ಕ್ರಾಂತಿ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ಅಡಿಯಲ್ಲಿ ತಾಂತ್ರಿಕ ಮಹಾವಿದ್ಯಾಲಯ ಪ್ರಾರಂಭಿಸುವ ಉದ್ದೇಶ ವಿದೆ ಎಂದು ಹೇಳಿದ ಶ್ರೀಗಳು ವಿದ್ಯಾರ್ಥಿ ಜೀವನ ಬಂಗಾರದ ಜೀವನ ಇದ್ದಂತೆ ಅದನ್ನು ವ್ಯರ್ಥಮಾಡದೆ ಸದುಪಯೋಗ ಪಡೆಸಿಕೊಂಡು ಒಳ್ಳೆಯ ಪ್ರಜ್ಞೆಗಳಾಗಬೇಕು. ತಂತ್ರಜ್ಞಾನ ಮನುಕುಲದ ಒಳ್ಳೆಯದಕ್ಕೆ ಮಾಡಲಾಗಿದ್ದು ಅದನ್ನು ಕೆಟ್ಟದಕ್ಕೆ ಬಳಿಸಿಕೊಳ್ಳದೆ ಮನುಕುಲದ ಉದ್ಧಾರಕ್ಕೆ ಬಳಸಬೇಕು ಎಂದು ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ವೇದಿಕೆಯಲ್ಲಿ ಸಂಸ್ಥೆಯ ನಿರ್ದೇಶಕ ಚಂದ್ರಶೇಖರ್ ಕೊಣ್ಣೂರ, ಪತ್ರಕರ್ತ ಸಾದಿಕ ಹಲ್ಯಾಳ, ಮೇಘಾ ಚಚಡಿ, ಪ್ರಾಚಾರ್ಯ ರಮೇಶ ಕುಂಬಾರ, ಆಡಳಿತಾಧಿಕಾರಿ ಅಡಿವೇಶ ಗವಿಮಠ ಇದ್ದರು