ಗೋಕಾಕ:ರೇಷ್ಮೆ ಬೆಳೆಗಾರರು ಹಾಗೂ ರೇಷ್ಮೆ ಉದ್ಯಮಿದಾರರು ಪರಸ್ಪರ ಸಹಕಾರ ನೀಡಿ ಆರ್ಥಿಕವಾಗಿ ಪ್ರಗತಿ ಸಾಧಿಸಿ : ಪಿ.ಎ ಮಗದುಮ್ಮ
ರೇಷ್ಮೆ ಬೆಳೆಗಾರರು ಹಾಗೂ ರೇಷ್ಮೆ ಉದ್ಯಮಿದಾರರು ಪರಸ್ಪರ ಸಹಕಾರ ನೀಡಿ ಆರ್ಥಿಕವಾಗಿ ಪ್ರಗತಿ ಸಾಧಿಸಿ : ಪಿ.ಎ ಮಗದುಮ್ಮ
ಗೋಕಾಕ ನ 30 : ರೇಷ್ಮೆ ಬೆಳೆಗಾರರು ಹಾಗೂ ರೇಷ್ಮೆ ಉದ್ಯಮಿದಾರರು ಪರಸ್ಪರ ಸಹಕಾರ ನೀಡಿ ಆರ್ಥಿಕವಾಗಿ ಪ್ರಗತಿ ಸಾಧಿಸುವಂತೆ ಬೆಳಗಾವಿ ಜಿಲ್ಲಾ ರೇಷ್ಮೆ ಉತ್ಪಾದಕ ಕಂಪನಿ ನಿಯಮತದ ಅಧ್ಯಕ್ಷ ಪಿ ಎ ಮಗದುಮ ಹೇಳಿದರು.
ಅವರು, ಮಂಗಳವಾರದಂದು ನಗರದ ಸಾಯಿ ಸೀಲ್ಕ ಇಂಡಸ್ಟ್ರೀಸನಲ್ಲಿ ಬೆಳಗಾವಿ ರೇಷ್ಮೆ ರೈತ ಉತ್ಪಾದಕ ಕಂಪನಿ ನಿಯಮಿತ, ಕರ್ನಾಟಕ ರೇಷ್ಮೆ ವಿಶ್ರಾಂತ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಇವುಗಳ ಸಹಬಾಗಿತ್ವದಲ್ಲಿ ಬೆಳಗಾವಿ ವಿಭಾಗ ಮಟ್ಟದ ರೇಷ್ಮೆ ತಾಂತ್ರಿಕ ಕಾರ್ಯಾಗಾರ ಮತ್ತು ಪ್ರಗತಿಪರ ರೇಷ್ಮೆ ಬೆಳೆಗಾರರ ಸನ್ಮಾನ ಹಾಗೂ ರೇಷ್ಮೆ ಉತ್ಪಾದಕ ಕಂಪನಿ ನಿಯಮಿತದ 6ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು.
ಇಂದು ಆಧುನಿಕ ತಂತ್ರಜ್ಞಾನದಿಂದ ರೇಷ್ಮೆ ಉದ್ಯಮ ಅಭಿವೃದ್ಧಿ ಹೊಂದುತ್ತಿದ್ದು ಇದರಿಂದ ರೇಷ್ಮೆ ಬೆಳೆಗಾರರಿಗೆ ಹೆಚ್ಚಿನ ಬೆಲೆ ಸೀಗುತ್ತಿದೆ. ಸ್ಥಳೀಯ ಉದ್ಯಮಿದಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿ ರೈತರು ಆರ್ಥಿಕವಾಗಿ ಪ್ರಗತಿ ಸಾಧಿಸುವಂತೆ ಕರೆ ನೀಡಿದರು.
ಬೆಳಗಾವಿ ವಿಭಾಗದ ರೇಷ್ಮೆ ಜಂಟಿ ನಿರ್ದೇಶಕ ಎಮ್ ಮಲ್ಲಿಕಾರ್ಜುನ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ರೇಷ್ಮೆ ಬೆಳೆಗೆ ಪೂರಕ ವಾತಾವರಣವಿದ್ದು ರೈತರು ರೇಷ್ಮೆ ಬೆಳೆಯಲು ಹೆಚ್ಚಿನ ಮಹತ್ವ ನೀಡಿ. ಎಲ್ಲ ಬೆಳೆಗಳಿಗಿಂತ ಆರ್ಥಿಕವಾಗಿ ಹೆಚ್ಚಿನ ಲಾಭವಿದೆ. ನಮ್ಮ ದೇಶದ ರೇಷ್ಮೆಗೆ ಹೆಚ್ಚಿನ ಬೆಲೆ ದೊರೆಯುತ್ತಿದೆ. ಸರಕಾರ ಹಲವಾರು ಯೋಜನೆಗಳ ಮೂಲಕ ಪ್ರೋತ್ಸಾಹಿಸುತ್ತಿದ್ದು, ಇವುಗಳ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.
ನಿವೃತ್ತ ರೇಷ್ಮೆ ಹೆಚ್ಚುವರಿ ನಿರ್ದೇಶಕ ಎಮ್ ಎಮ್ ಖಾಜಿ ಮಾತನಾಡಿ, ನಮ್ಮ ದೇಶದಲ್ಲಿ ರೇಷ್ಮೆ ಸಾಂಪ್ರದಾಯಿಕ ಉಡುಗೆಯಾಗಿ ಹೆಚ್ಚಿನ ಮಹತ್ವ ಪಡೆದಿದೆ. ಸರಕಾರ ರೇಷ್ಮೆ ಆಮದನ್ನು ನಿಲ್ಲಿಸಬೇಕು. ರೇಷ್ಮೆ ಇಲಾಖೆಯನ್ನು ಇನ್ನೂ ಹೆಚ್ಚು ಸುಧಾರಿಸುವದರೊಂದಿಗೆ ಅಭಿವೃದ್ಧಿ ಪಡಿಸಬೇಕು. ರೈತರಿಗೆ ಹೆಚ್ಚು ಪ್ರೋತ್ಸಾಹ ನೀಡಿರೇಷ್ಮೆ ಬೆಳೆಯನ್ನು ಹೆಚ್ಚು ಬೆಳೆಯುವಂತೆ ಪ್ರೇರೆಪಿಸುವಂತೆ ಸಲಹೆ ನೀಡಿದರು.
ಪ್ರಗತಿಪರ ರೈತರು ಮಾತನಾಡಿ, ರೇಷ್ಮೆ ಬೆಳೆಯಿಂದ ತಾವು ಆರ್ಥಿಕವಾಗಿ ಸುಧಾರಿಸುವ ಕುರಿತು ವಿವರಿಸಿದರು. ಸರಕಾರ ರೇಷ್ಮೆ ಬೆಳೆಗೆ ಬೇಕಾಗುವ ಸಲಕರಣೆ ಔಷಧಗಳ ಪೂರೈಕೆ ಹಾಗೂ ಮಾರುಕಟ್ಟೆಯಲ್ಲಿನ ಕೆಲ ಸಮಸ್ಯೆಗಳಿಗೆ ಗಮನಹರಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರನ್ನು ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಎನ್ ಬಿ ಶೇಕ, ಎಸ್ ಎಚ್ ಅರಹುಣಸಿ, ಎ ಡಿ ಮೋಮಿನ್, ಟಿ ಎಸ್ ಹುದ್ದಾರ, ಸಂತೋಷ ಮಾಲಪಾನಿ, ಡಾ. ವಿ ಜಿ ಮರಿಬಾಶೆಟ್ಟಿ, ವಿರೇಶ ಮನಗೂಳಿ, ಎನ್ ವೈ ಚಿಗರಿ, ಬಿ ಆರ್ ಹಾರುಗೊಪ್ಪ, ಎಸ್ ಐ ಕಡ್ಡಿ, ಶಂಭುಲಿಂಗ ಮುಕನ್ನವರ, ಸಿದ್ಧಾರೂಢ ರೆಬ್ಬನ್ನವರ, ಅಪ್ಪಣ್ಣ ಹನಗಂಡಿ, ಶಂಕರ ಪೂಜೇರಿ, ಮಾಳಪ್ಪ ಶಾಂಡಗೆ, ಕಲ್ಲಪ್ಪ ಮಾಳಿ ಇದ್ದರು.