RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮದೊಂದಿಗೆ ರಾಜ್ಯದಲ್ಲಿ ಸರಕಾರ ರಚಿಸುವದು ಖಚಿತ : ಸಿ.ಎಂ ಇಬ್ರಾಹಿಂ ಇಂಗಿತ

ಗೋಕಾಕ:2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮದೊಂದಿಗೆ ರಾಜ್ಯದಲ್ಲಿ ಸರಕಾರ ರಚಿಸುವದು ಖಚಿತ : ಸಿ.ಎಂ ಇಬ್ರಾಹಿಂ ಇಂಗಿತ 

2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮದೊಂದಿಗೆ ರಾಜ್ಯದಲ್ಲಿ ಸರಕಾರ ರಚಿಸುವದು ಖಚಿತ : ಸಿ.ಎಂ ಇಬ್ರಾಹಿಂ ಇಂಗಿತ

ಗೋಕಾಕ ಡಿ 1 : ಜೆಡಿಎಸ್ ಪಕ್ಷ ಬರುವ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮದೊಂದಿಗೆ ರಾಜ್ಯದಲ್ಲಿ ಸರಕಾರ ರಚಿಸುವದು ಖಚಿತ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಮ್ ಇಬ್ರಾಹಿಂ ಹೇಳಿದರು.
   ಅವರು, ಬುಧವಾರದಂದು ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡುತ್ತ, ರಾಜ್ಯದಲ್ಲಿ ಜನತೆಯ ಒಲವು ಜೆಡಿಎಸ್ ಪಕ್ಷದ ಮೇಲಿದ್ದು 123 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರ ಪಡೆಯುವದಾಗಿ ತಿಳಿಸಿದರು.
   ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ ಪ್ರಥಮದಲ್ಲೆ ಪ್ರತಿ ಪಂಚಾಯತಗಳಿಗೆ 30ಬೇಡ್‍ಗಳ ಸುಸಜ್ಜಿತ ಆಸ್ಪತ್ರೆ, ಅಂತರಾಷ್ಟ್ರೀಯ ಗುಣಮಟ್ಟದ ಶಾಲೆ, 5ಲಕ್ಷ ರೂ ವೆಚ್ಚದ ವಸತಿಗಳು, 65ವರ್ಷ ಮೇಲ್ಪಟ್ಟವರಿಗೆ 5ಸಾವಿರ ಮಾಶಾಸನ, ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವದು. ನಮ್ಮ ಸರಕಾರ ಬಂದಲ್ಲಿ ಜಾತಿ ಧರ್ಮ ಮಾಡದೆ ಜನರ ಸ್ಫಂಧನೆಗೆ ಸ್ಫಂಧಿಸುತ್ತೆವೆ. ಇಂದು ಮೋದಿ ಹಾಗೂ ಅಮೀತ್ ಶಾ ಅವರ ಬೆಂಬಲದಿಂದ ಸಂಪತ್ತು ಅಂಬಾನಿ ಮತ್ತು ಅದಾನಿಯವರ ಪಾಲಾಗುತ್ತಿದ್ದು, ಬ್ಯಾಂಕಗಳು ಮುಚ್ಚು ಪರಿಸ್ಥಿತಿಯಲ್ಲಿದ್ದು ಆರ್ಥಿಕ ಅರಾಜಕತೆ ಉಂಟಾಗುತ್ತಿದೆ. ದೇವೆಗೌಡರು ಪ್ರಧಾನಿಯಾಗಿದ್ದ ಕಾಲದಲ್ಲಿ ಕಾಶ್ಮೀರದಲ್ಲಿ ಒಂದು ಹತ್ಯೆಯಾಗಿಲ್ಲ. ತೆರೆದ ಜೀಪನಲ್ಲಿ ಧೈರ್ಯದಿಂದ ಗೌಡರು ಜನರೊಂದಿಗೆ ಬೆರೆಯುತ್ತಿದ್ದರು. ಸುಭದ್ರ ಸರಕಾರಕ್ಕಾಗಿ ಸ್ಫಷ್ಟ ಬಹುಮತದೊಂದಿಗೆ ಜೆಡಿಎಸ್ ಪಕ್ಷವನ್ನು ಗೆಲ್ಲಿಸುವಂತೆ ಜನತೆಗೆ ಮನವಿ ಮಾಡಿದರು.
   ಪತ್ರಿಕಾಗೊಷ್ಠಿಯಲ್ಲಿ ಪ್ರತಾಪರಾವ ಪಾಟೀಲ, ಶಂಕರ ಮಾಡಲಗಿ ಜಿಲ್ಲೆ ಮತ್ತು ತಾಲೂಕು ಪದಾಧಿಕಾರಿಗಳು ಇದ್ದರು.

Related posts: