ಗೋಕಾಕ:ಅಲ್ಪ ಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಜನರ ಕುಂದು-ಕೊರತೆಗಳ ಸಭೆ
ಅಲ್ಪ ಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಜನರ ಕುಂದು-ಕೊರತೆಗಳ ಸಭೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 6 :
ನಗರದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಅಲ್ಪ ಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ಜನರ ಕುಂದು-ಕೊರತೆಗಳ ಹಾಗೂ ಅಭಿವೃದ್ದಿಯ ಕುರಿತು ಸಭೆ ಜರುಗಿತು.
ಡಿಎಸ್ಎಸ್ನ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾ ವಿಭಾಗೀಯ ಸಂಚಾಲಕ ಅಲ್ಲಾಬಕ್ಷ ಮುಲ್ಲಾ ಅವರು ಮಾತನಾಡಿ, ಹಿಂದುಳಿದ ಸಮುದಾಯಗಳ ಅಭಿವೃದ್ದಿಗಾಗಿ ಡಿಎಸ್ಎಸ್ ಹಗಲಿರಳು ಶ್ರಮ ವಹಿಸುತ್ತಿದ್ದು, ತಮ್ಮ ಕುಂದು-ಕೊರತೆಗಳನ್ನು ಸಮಿತಿಯ ಗಮನಕ್ಕೆ ತರಬೇಕೆಂದು ವಿನಂತಿಸಿದರು.
ಇದೇ ಸಂದರ್ಭದಲ್ಲಿ ಅಲ್ಪ ಸಂಖ್ಯಾತರ ಘಟಕದ ಜಿಲ್ಲಾ ಸಂಘಟನಾ ಸಂಚಾಲಕರನ್ನಾಗಿ ತೌಶೀಫ್ಅಹ್ಮದ ದೇಸಾಯಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಡಿಎಸ್ಎಸ್ನ ಸಂಘಟನಾ ರಾಜ್ಯ ಸಂಚಾಲಕ ಸತ್ತೇಪ್ಪ ಕರವಾಡಿ, ಮಹಿಳಾ ಘಟಕದ ಬೆಳಗಾವಿ ವಿಭಾಗೀಯ ಸಂಚಾಲಕಿ ಸುಧಾ ಮುರಕುಂಬಿ, ಜಿಲ್ಲಾ ಸಂಚಾಲಕ ಬಾಳೇಶ ಬನಹಟ್ಟಿ, ಸಂಗೀತಾ ಕಾಂಬಳೆ, ಗೀತಾ ಸಣ್ಣಕ್ಕಿ ಸೇರಿದಂತೆ ಅನೇಕರು ಇದ್ದರು.