ಗೋಕಾಕ:ಮಾನವೀಯ ಮೌಲ್ಯಗಳೇ ಬದುಕಿನ ಆಧಾರ ಸ್ಥಂಭಗಳಾಗಿವೆ : ಮುರುಘರಾಜೇಂದ್ರ ಶ್ರೀ
ಮಾನವೀಯ ಮೌಲ್ಯಗಳೇ ಬದುಕಿನ ಆಧಾರ ಸ್ಥಂಭಗಳಾಗಿವೆ : ಮುರುಘರಾಜೇಂದ್ರ ಶ್ರೀ
ಗೋಕಾಕ ಡಿ 9 : ಮಾನವೀಯ ಮೌಲ್ಯಗಳೇ ಬದುಕಿನ ಆಧಾರ ಸ್ಥಂಭಗಳಾಗಿದ್ದು, ನಿಸ್ವಾರ್ಥ ಮನೋಭಾವದಿಂದ ಮಾಡುವ ಸೇವೆಯೂ ಭಗವಂತನ ಪೂಜೆಗೆ ಸಮನಾಗುತ್ತದೆ. ಎಂದು ಇಲ್ಲಿನ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಗುರುವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ ಹಾಗೂ ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ 160 ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಸಾನ್ನಿಧ್ಯವಹಿಸಿ ಮಾತನಾಡುತ್ತಾ ಮಾಡುವ ಕೆಲಸವನ್ನು ಕಾಯಾ ,ಮನಸಾ, ನಿರ್ಮಲ ಭಾವನೆಯಿಂದ ಮಾಡುವ ಮೂಲಕ ಬದುಕನ್ನು ಸಾರ್ಥಕ ಪಡೆಸಿಕೊಳ್ಳಬಹುದು ಎಂದರು.
ವೇದಿಕೆಯಲ್ಲಿ ಶ್ರೀ ಮ.ನಿ.ಪ್ರ. ಬಸವಲಿಂಗ ಮಹಾಸ್ವಾಮೀಜಿ, ಬಸನಗೌಡಾ ಪಾಟೀಲ, ಶ್ರೀಮತಿ ಸುಮಿತ್ರಾ ಕಾಳಪ್ಪಾ ಗುರಾಣಿ, ಶ್ರೀಮತಿ ವೀಣಾ ಸದಾನಂದ ಹಿರೇಮಠ, ಶ್ರೀಮತಿ ಮಹಾದೇವಿ ದುಂಡಪ್ಪಾ ಕಿರಗಿ, ಮಹಾಲಿಂಗಪ್ಪಾ ನೇಗಿನಹಾಳ ಉಪಸ್ಥಿತರಿದ್ದರು.
ಆರ್. ಎಲ್. ಮಿರ್ಜಿ ಕಾರ್ಯಕ್ರಮ ನಿರೂಪಿಸಿದರು, ಎಸ್. ಕೆ. ಮಠದ ವಂದಿಸಿದರು.