ಗೋಕಾಕ:ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಮನೆಗೆ ಕನ್ನ ಹಾಕಿದ ಕಳ್ಳರು: ಚಿನ್ನಾಭರಣ ಕದ್ದೊಯ್ದರು
ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಮನೆಗೆ ಕನ್ನ ಹಾಕಿದ ಕಳ್ಳರು: ಚಿನ್ನಾಭರಣ ಕದ್ದೊಯ್ದರು
ಗೋಕಾಕ ಡಿ 11 : ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಘಟನೆ ಗೋಕಾಕ ನಗರದಲ್ಲಿ ಸಂಭವಿಸಿದೆ.
ಇಲ್ಲಿನ ನಿವಾಸಿ, ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರ ವಸತಿ ಗೃಹದಲ್ಲಿ ಶನಿವಾರ ತಡರಾತ್ರಿ ಕಳ್ಳತನ ನಡೆದಿದ್ದು, ಸುಮಾರು 400 ಗ್ರಾಮ ಚಿನ್ನವನ್ನು ಕಳವುಗೈಯಲಾಗಿದೆ.
ತಹಶೀಲ್ದಾರ ಅವರು ಕೆಲಸದ ನಿಮಿತ್ಯ ಮೈಸೂರಿಗೆ ತೆರಳಿದ್ದು, ರಾತ್ರಿ ಮನೆಯಲ್ಲಿ ಯಾರೂ ಇಲ್ಲದ ಬಗ್ಗೆ ಖಚಿತಪಡಿಸಿಕೊಂಡಿದ್ದ ಕಳ್ಳರು ಕಳ್ಳತನ ನಡೆಸಿದ್ದಾರೆ.
ಕಬ್ಬಿಣದ ಕಟ್ಟರ್ ಸಹಾಯದಿಂದ ಮನೆಯ ಕೀಲಿಕೈಯನ್ನು ಕತ್ತರಿಸಿ ಮನೆಯೊಳಗೆ ನುಗ್ಗಿದ ಕಳ್ಳರು ಮನೆಯೊಳಗೆ ಜಾಲಾಡಿ ಕಪಾಟಿನಲ್ಲಿದ್ದ ಸುಮಾರು 19.5 ಲಕ್ಷ ರೂ. ಮೌಲ್ಯದ 4 ತೊಲಿ ಗಂಟನ, 4 ತೊಲಿ ಬಂಗಾರದ ಬಿಲ್ವರ 1 ಜೊತೆ, ನಕ್ಲೆಸ್ 3 10 ತೊಲಿ, ಬಂಗಾರದ ಪಾಟಿ 1 ಜೊತೆ 5 ತೊಲಿ, 2 ಲಾಕೇಟ್ 5 ತೊಲಿ, 4 ಬಂಗಾರದ ಉಂಗರು 10 ತೊಲಿ, ಕಿವಿಯೊಲೆ 2 ಜೊತೆ 2 ತೊಲಿ, ಗಟ್ಟಿ ಬಂಗಾರ 10 ತೊಲಿ ಒಟ್ಟು 40.1/2 ತೊಲಿ ಬಂಗಾರ ಹಾಗೂ 5,500 ರೂ ನಗದು ಹಣ ದೊಚಿ ಕಳ್ಳರು ಫರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಗೋಕಾಕ ಪೊಲೀಸ್ ಠಾಣೆಯ ಪೊಲೀಸರು
ಭೇಟಿ ನೀಡಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.