RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ದಿ.17ರಂದು ಬೆಟಗೇರಿಯಲ್ಲಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನ: ಭಾರತಿ ಮಧಬಾವಿ

ಗೋಕಾಕ:ದಿ.17ರಂದು ಬೆಟಗೇರಿಯಲ್ಲಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನ: ಭಾರತಿ ಮಧಬಾವಿ 

ದಿ.17ರಂದು ಬೆಟಗೇರಿಯಲ್ಲಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನ: ಭಾರತಿ ಮಧಬಾವಿ

ಗೋಕಾಕ ಡಿ 13 : ಕನ್ನಡ ಸಾಹಿತ್ಯ ಪರಿಷತ ಗೋಕಾಕ ತಾಲೂಕು ಘಟಕದಿಂದ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಇದೆ ದಿ.17ರಂದು ಬೆಟಗೇರಿಯಲ್ಲಿ ನಡೆಯಲಿದ್ದು, ತಾಲೂಕಿನ ಎಲ್ಲ ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕಸಾಪ ಅಧ್ಯಕ್ಷೆ ಭಾರತಿ ಮದಭಾವಿ ಮನವಿ ಮಾಡಿದರು.
   ಅವರು, ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಶನಿವಾರ ದಿ.17 ರಂದು ಬೆಳಿಗ್ಗೆ 8ಗಂಟೆಗೆ ನಿವೃತ್ತ ಗ್ರಾಮ ಲೇಕ್ಕಾಧಿಕಾರಿ ಪತ್ರೆಪ್ಪ ನೀಲಣ್ಣವರ ಅವರಿಂದ ರಾಷ್ಟ್ರಧ್ವಜ ಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರಿಂದ ಪರಿಷತ್ತ ಧ್ವಜಾರೋಹಣ ಮತ್ತು ನಾಡಧ್ವಜ ಧ್ವಜಾರೋಹಣ ಭಾರತಿ ಮದಭಾವಿ ಅವರಿಂದ ನಡೆಯಲಿದೆ. 8.30ಕ್ಕೆ ನಾಡದೇವಿ ಭುವನೇಶ್ವರಿ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಈಶ್ವರಚಂದ್ರ ಬೆಟಗೇರಿಯವರ ಮೆರವಣಿಗೆ ಬಸವೇಶ್ವರ ವೃತ್ತದಿಂದ ಸಮ್ಮೇಳನದ ಸಭಾ ಮಂಟಪದ ವರೆಗೆ ನಡೆಯಲಿದ್ದು, ಮೆರವಣಿಗೆ ಕಾರ್ಯಕ್ರಮ ಉದ್ಘಾಟನೆಯನ್ನು ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ ನೆರವೇರಿಸುವರು.
    ಪ್ರಧಾನ ವೇದಿಕೆ ಆನಂದಕಂದ ಡಾ. ಬೆಟಗೇರಿ ಕೃಷ್ಣಶರ್ಮ ವೇದಿಕೆಯಲ್ಲಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮಿಜಿ, ಜಡಿಸಿದ್ದೇಶ್ವರ ಮಠದ ಅಭಿನವ ಶಿವಾನಂದ ಸ್ವಾಮಿಜಿ, ಅಧ್ಯಕ್ಷತೆಯನ್ನು ಶಾಸಕ ರಮೇಶ ಜಾರಕಿಹೊಳಿ ವಹಿಸುವರು. ಉದ್ಘಾಟನೆಯನ್ನು ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೆರವೇರಿಸುವರು. ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ಈಶ್ವರಚಂದ್ರ ಬೆಟಗೇರಿ ವಹಿಸುವರು. ನಿಕಟಪೂರ್ವ ಸರ್ವಾಧ್ಯಕ್ಷ ಡಾ. ಸಿ ಕೆ ನಾವಲಗಿ ಧ್ವಜಾಹಸ್ತಾಂತರ ನಡೆಸುವರು. ಮುಖ್ಯಅತಿಥಿಗಳಾಗಿ ಲೋಕಸಭಾ ಸದಸ್ಯೆ ಮಂಗಲಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಕಸಾಪ ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ತಾಂವಶಿ, ಜಯಾನಂದ ಮುನವಳ್ಳಿ, ಡಾ. ರಾಜೇಂದ್ರ ಸಣ್ಣಕ್ಕಿ, ಗಜಾನನ ಮನ್ನಿಕೇರಿ, ಜಿ ಬಿ ಬಳಗಾರ, ಅಜೀತ ಮನ್ನಿಕೇರಿ ಸೇರಿದಂತೆ ಅನೇಕ ಗಣ್ಯರು ಆಗಮಿಸಲಿದ್ದಾರೆಂದರು.
   ಮಧ್ಯಾಹ್ನ 12.30ಕ್ಕೆ ವಿಚಾರಗೋಷ್ಠಿ ನಡೆಯಲಿದ್ದು ಇದರಲ್ಲಿ ಬೆಳುವಲ ನಾಡು, ನುಡಿ, ಸಂಸ್ಕøತಿ ಚಿಂತನೆ ಪ್ರಧಾನ ವಿಷಯವಾಗಿದೆ. ಮಧ್ಯಾಹ್ನ 1.30ಕ್ಕೆ ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರ ಸನ್ಮಾನ ಸಮಾರಂಭ ಮತ್ತು ಮಧ್ಯಾಹ್ನ 3.30ಕ್ಕೆ ಕವಿಗೋಷ್ಠಿ ಜರುಗಲಿದೆ.
  ಸಂಜೆ 5ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಬಾಗೋಜಿಕೊಪ್ಪದ ಶಿವಲಿಂಗ ಸ್ವಾಮಿಜಿ, ಮಕ್ಕಳಗೇರಿ ಶ್ರೀ ಅಭಿನವ ಸಿದ್ರಾಯಜ್ಜನವರು ವಹಿಸಲಿದ್ದು, ಅಧ್ಯಕ್ಷತೆಯನ್ನು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ವಹಿಸಲಿದ್ದಾರೆ. ಸಂಜೆ 7ಗಂಟೆಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
   ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ತಾಂವಶಿ, ಪ್ರೋ.ಚಂದ್ರಶೇಖರ ಅಕ್ಕಿ, ಕಸಾಪ ಕಾರ್ಯದರ್ಶಿ ಸುರೇಶ ಮುದ್ದಾರ, ಬಸವರಾಜ ಮುರಗೋಡ, ಶಾಮಾನಂದ ಪೂಜೇರಿ, ಲಕ್ಷ್ಮಣ ಸೊಂಟಕ್ಕಿ, ಮಹಾನಂದ ಪಾಟೀಲ, ಶಕುಂತಲಾ ಹಿರೇಮಠ ಇದ್ದರು.

Related posts: