ಘಟಪ್ರಭಾ:ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯ ವಲ್ಲ ಭಾಗವಹಿಸುವುದು ಮುಖ್ಯ : ಸಚಿವ ರಮೇಶ
ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯ ವಲ್ಲ ಭಾಗವಹಿಸುವುದು ಮುಖ್ಯ : ಸಚಿವ ರಮೇಶ
ಘಟಪ್ರಭಾ ಅ 10: ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯ ವಲ್ಲ ಭಾಗವಹಿಸುವುದು ಮುಖ್ಯ ಎಂದು ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು ಮಂಗಳವಾರ ನಗರದಲ್ಲಿ 4ನೇ ಬಾರಿಗೆ ಏರ್ಪಡಿಸಿದ ಜಿಪಿಎಲ್ ಕ್ರಿಕೇಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಢೆ ವೈಷಮ್ಯ ಹಾಗೂ ಅಹಂಕಾರ ಎನ್ನುವುದು ಬರಬಾರದು ಸೋಲು ಗೆಲವು ಎಲ್ಲಾ ಕಡೆ ಇರುತ್ತೆ ಅದನ್ನು ಸಮನಾಗಿ ಸ್ವೀಕರಿಸಬೇಕು ಹಾಗೂ ಯಾರಿಗೂ ಯಾವುದು ಶಾಶ್ವತವಾಗಿ ಇರುವುದಿಲ್ಲ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ. ಪಂ. ಅಧ್ಯಕ್ಷರಾದ ಎಸ್.ಐ.ಬೆನವಾಡಿ ವಹಿಸಿದರು. ವೇದಿಕೆಯಲ್ಲಿ ಜಿ.ಪ.ಸದಸ್ಯ ಟಿ.ಆರ್.ಕಾಗಲ, ಮಡ್ಡೆಪ್ಪ ತೋಳಿನವರು, ಪ್ರಕಾಶ ಡಾಂಗೆ, ಸುಭಾಸ ಹುಕ್ಕೇರಿ, ರಾಮಣ್ಣ ಹುಕ್ಕೇರಿ, ಗಂಗಾಧರ ಬಡಕುಂದ್ರಿ, ಡಿ.ಎಂ.ದಳವಾಯಿ, ಸುಧೀರ ಜೋಡಟ್ಟಿ, ಎಂ.ಆರ್.ಭಜಂತ್ರಿ, ಅಲ್ತಾಫ್ ಉಸ್ತಾದ, ಹನುಮಂತ ಗಾಡಿವಡ್ಡರ, ಬಾಹುಬಲಿ ಕಡಹಟ್ಟಿ, ಎಂ.ಜಿ.ಮುಚಳಂಬಿ, ರಮೇಶ ತುಕ್ಕಾನಟ್ಟಿ, ಸುಲ್ತಾನಸಾಬ ಕಬ್ಬೂರ, ಮಾರುತಿ ವಿಜಯವಗರ, ನವೀನ ಹೊಸಮನಿ, ಪುಟ್ಟು ಖಾನಪುರೆ, ಪ್ರವೀಣ ಮಟಗಾರ, ಕಲ್ಲಪ್ಪ ಕಾಡದವರ, ಕಾಡಪ್ಪ ಕರೋಶಿ, ಜಾಕೀರ ಬಾಡಕರ, ಬಿರಪ್ಪ ಡಬಾಜ, ಮಹೇಶ ಪಾಟೀಲ, ಸಲೀಮ ಕಬ್ಬೂರ ಹಾಜರಿದ್ದರು.