ಗೋಕಾಕ:ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ವಿರೋಧಿಸಿ, ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯಿಸಿ ನಗರದಲ್ಲಿ ವಕೀಲರ ಪ್ರತಿಭಟನೆ
ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ವಿರೋಧಿಸಿ, ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯಿಸಿ ನಗರದಲ್ಲಿ ವಕೀಲರ ಪ್ರತಿಭಟನೆ
ಗೋಕಾಕ ಡಿ 16 : ವಕೀಲರ ರಕ್ಷಣಾ ಕಾಯ್ದೆಯ ಅವಶ್ಯಕತೆ ಇಲ್ಲಾ ಎಂದು ಕಾನೂನು ಸಚಿವ ಮಾಧುಸ್ವಾಮಿ ನೀಡಿರುವ ಹೇಳಿಕೆಯನ್ನು ಖಂಡಿಸಿ ಹಾಗೂ ಈ ಕಾಯ್ದೆಯನ್ನು ಜಾರಿಗೆ ತರುವಂತೆ ಆಗ್ರಹಿಸಿ ಶುಕ್ರವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿಸಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಮಾಜದ ಪ್ರಮುಖ ಅಂಗಗಳಲ್ಲಿ ಒಂದಾಗಿರುವ ವಕೀಲರ ಮೇಲೆ ಸಾಕಷ್ಟು ಹಲ್ಲೆಯ ಪ್ರಕರಣಗಳು ನಡೆಯುತ್ತಿವೆ. ಇಂಥ ಘಟನೆಗಳು ಖಂಡನೀಯವಾಗಿವೆ. ಆದ್ದರಿಂದ ಸರ್ಕಾರ ವಕೀಲರ ರಕ್ಷಣಾ ಕಾಯ್ದೆಯನ್ನು ಕೂಡಲೇ ಜಾರಿಗೆ ತರಬೇಕು
ರಾಜ್ಯದಲ್ಲಿ ಹಲವೆಡೆ ವಕೀಲರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ವಕೀಲರು ಪ್ರಾಣಭಯದಿಂದ ಕಾರ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಕೂಡಲೇ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕು. ವಕೀಲರಿಗೆ ರಕ್ಷಣೆ ದೊರೆಯುವಂತಾಗಬೇಕು. ಇದರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನಕ್ಕೆ ಅಡ್ಡಿ ಪಡೆಸಲಾಗುವದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಸಿ.ಡಿ.ಹುಕ್ಕೇರಿ, ಎಸ್.ವ್ಹಿ ದೇಮಶೆಟ್ಟಿ ,ಎಸ್.ಎಂ ಕುದರಿ, ಡಿ.ಡಿ.ಕೊಟಬಾಗಿ, ಬಿ.ಆರ್.ಕೊಟಗಿ, ಎನ್.ಬಿ.ತವಗಮಠ, ಆರ್.ಎಸ. ನಿಡಸೋಸಿ, ವಾಯ್.ಕೆ ಕೌಜಲಗಿ, ಎ.ಎ ಪಾಟೀಲ,ಎಸ್.ಬಿ ನಾಯಿಕ, ಎಲ್ .ಎನ್.ಗುದಿಗೋಪ್ಪ, ಎಸ್.ಎಸ್.ನಿಡಗುಂದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು