RNI NO. KARKAN/2006/27779|Monday, September 16, 2024
You are here: Home » breaking news » ಗೋಕಾಕ:ಸರ್ಕಾರಿ ಉದ್ಯೋಗ ನೇಮಕಾತಿ ಅರ್ಹತಾ ಪರೀಕ್ಷೆಗಳು ಕನ್ನಡ ಭಾಷೆಯಲ್ಲಿಯೇ ನಡೆಯಬೇಕು : ಸರ್ವಾಧ್ಯಕ್ಷ ಈಶ್ವರಚಂದ್ರ ಬೆಟಗೇರಿ

ಗೋಕಾಕ:ಸರ್ಕಾರಿ ಉದ್ಯೋಗ ನೇಮಕಾತಿ ಅರ್ಹತಾ ಪರೀಕ್ಷೆಗಳು ಕನ್ನಡ ಭಾಷೆಯಲ್ಲಿಯೇ ನಡೆಯಬೇಕು : ಸರ್ವಾಧ್ಯಕ್ಷ ಈಶ್ವರಚಂದ್ರ ಬೆಟಗೇರಿ 

ಸರ್ಕಾರಿ ಉದ್ಯೋಗ ನೇಮಕಾತಿ ಅರ್ಹತಾ ಪರೀಕ್ಷೆಗಳು ಕನ್ನಡ ಭಾಷೆಯಲ್ಲಿಯೇ ನಡೆಯಬೇಕು : ಸರ್ವಾಧ್ಯಕ್ಷ ಈಶ್ವರಚಂದ್ರ ಬೆಟಗೇರಿ
ಬೆಟಗೇರಿ(ಡಾ.ಬೆಟಗೇರಿ ಕೃಷ್ಣಶರ್ಮ ವೇದಿಕೆ) : ಕಡ್ಡಾಯವಾಗಿ ನಮ್ಮ ಶಿಕ್ಷಣ ಕ್ರಮವು ಮಾತೃ ಭಾμÉಯಾದ ಕನ್ನಡದಲ್ಲಿಯೇ ಆಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಉದ್ಯೋಗ ನೇಮಕಾತಿ ಅರ್ಹತಾ ಪರೀಕ್ಷೆಗಳು ಕನ್ನಡ ಭಾμÉಯಲ್ಲಿಯೇ ನಡೆಸುವಂತಾಗಬೇಕು ಎಂದು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಈಶ್ವರಚಂದ್ರ ಬೆಟಗೇರಿ ಅವರು ಸರ್ಕಾರವನ್ನು ಒತ್ತಾಯಿಸಿದರು.
ಬೆಟಗೇರಿಯಲ್ಲಿ ನಡೆಯುತ್ತಿರುವ ಗೋಕಾಕ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ನಾಡಿನಲ್ಲಿ ಗ್ರಾಮೀಣ ಕಲೆಗಳ ಕಲಿಕಾ ಕೇಂದ್ರ ಗುರುಕುಲ ಶೀಘ್ರ ಪ್ರಾರಂಭವಾಗಬೇಕು. ಸಾಹಿತಿ ದಿಗ್ಗಜ ಡಾ.ಬೆಟಗೇರಿ ಕೃಷ್ಣಶರ್ಮ ಅವರ ಸ್ಮಾರಕ ಭವನವನ್ನು ಭವ್ಯವಾಗಿ ನಿರ್ಮಾಣ ಮಾಡುವಂತೆ ಸರ್ಕಾರವನ್ನು ಕೋರಿದರು.
ಗೋಕಾವಿ ಪರಿಸರದ ಶ್ರೇಷ್ಠ ಸಾಹಿತಿಗಳು, ಕವಿಗಳು, ಕಲಾವಿಧರ ಹೆಸರುಗಳನ್ನು ನಗರದ ಮುಖ್ಯ ಬೀದಿ, ವೃತ್ತಗಳಿಗೆ ನಾಮಕರಣ ಮಾಡುವುದಾಗಬೇಕು. ಯಕ್ಷಗಾಣಕ್ಕೆ ಸೀಮಿತವಾದಂತೆ ಪ್ರತಿಷ್ಠಿತ ಸಾಧನೆಗೆ ಪಾರ್ತಿಸುಬ್ಬ ಹೆಸರಿನ ರಾಜ್ಯ ಪ್ರಶಸ್ತಿ ನೀಡುವಂತೆಯೇ ಉತ್ತರ ಕರ್ನಾಟಕದ ಬೈಲಾಟ ಕಲೆಗಳ ಹಿರಿಯ ಸಾಧಕರಿಗೆ ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ ಹಾಗೂ ಕೌಜಲಗಿ ನಿಂಗಮ್ಮ ಅವರ ಹೆಸರಿನಲ್ಲಿ ಪ್ರತಿಷ್ಠಿತ ರಾಜ್ಯ ಪ್ರಶಸ್ತಿಗಳನ್ನು ನೀಡುವಂತೆ ಬೆಟಗೇರಿಯವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಗೋಕಾವಿ ಪರಿಸರವು ಸಾಹಿತಿಗಳ ಸ್ವರ್ಗ. ಕಲಾವಿಧರ ನೆಲೆವಿಡು. ಸಂಸ್ಕøತಿ ವಿದ್ವತ್ ಪರಂಪರೆಗೆ ಸಾಕ್ಷಿಯಾಗಿದೆ. ಸ್ವಾತಂತ್ರ್ಯ ಹೋರಾಟಕ್ಕೆ ಕುಂದರನಾಡಿನ ಕೊಡುಗೆ ಅಪಾರವಾಗಿದೆ. ಪಂಚ ಪುಣ್ಯ ಧರ್ಮ ಪೀಠಗಳ ಸಂಗಮ ತಾಣವಾಗಿದೆ. ಸುಂದರ ನಿಸರ್ಗ ರಮಣೀಯ ಪಶು ಪಕ್ಷಿಗಳ ಪರಂಧಾಮ. ಗೋಕಾವಿ ನಾಡಿನ ಭೌಗೋಳಿಕ, ಐತಿಹಾಸಿಕ ಹಿನ್ನೆಲೆ ಅಪಾರವಾಗಿದೆ. ಗೋಕಾವಿ ನಾಡು ಸುಂದರ ನೈಸರ್ಗಿಕ ಪರಿಸರದಲ್ಲಿ ನೆಲೆಗೊಂಡಿದ್ದು, ಗೋಕಾಕ ಸ್ವತಂತ್ರ ಜಿಲ್ಲೆಯಾಗುವ ಎಲ್ಲ ಅರ್ಹತೆಗಳನ್ನು ಪಡೆದುಕೊಂಡಿದೆ ಎಂದು ಸರ್ವಾಧ್ಯಕ್ಷ ಈಶ್ವರಚಂದ್ರ ಬೆಟಗೇರಿ ಅವರು ಅಭಿಪ್ರಾಯ ಪಟ್ಟರು.

Related posts: