RNI NO. KARKAN/2006/27779|Sunday, November 24, 2024
You are here: Home » breaking news » ಗೋಕಾಕ:ಮಕ್ಕಳ ಸರ್ವಾಂಗೀಣ ಬೆಳೆವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದಾಗಿದೆ : ಗಜಾನನ ಮನ್ನಿಕೇರಿ

ಗೋಕಾಕ:ಮಕ್ಕಳ ಸರ್ವಾಂಗೀಣ ಬೆಳೆವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದಾಗಿದೆ : ಗಜಾನನ ಮನ್ನಿಕೇರಿ 

ಮಕ್ಕಳ ಸರ್ವಾಂಗೀಣ ಬೆಳೆವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದಾಗಿದೆ : ಗಜಾನನ ಮನ್ನಿಕೇರಿ

ಗೋಕಾಕ ಡಿ 19 : ಮಕ್ಕಳ ಸರ್ವಾಂಗೀಣ ಬೆಳೆವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವದಾಗಿದೆ ಎಂದು ಶಿಕ್ಷಣ ಇಲಾಖೆಯ  ಜಂಟಿ ಆಯುಕ್ತ  ಗಜಾನನ ಮನ್ನಿಕೇರಿ ಹೇಳಿದರು.
ರವಿವಾರದಂದು ನಗರದ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ  ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು
ಪಾಲಕರು ಮಕ್ಕಳ ಶಿಕ್ಷಣಕ್ಕೆ ಮಹತ್ವ ನೀಡಬೇಕು.ಮನೆಯಲ್ಲಿ ಕಲಿಕೆಯ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕು ಅವರಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಅವರನ್ನೇ ಆಸ್ತಿಯನ್ನಾಗಿ ಮಾಡಿರಿ. ಗೋಕಾಕ ತಾಲೂಕಿನ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರಮಟ್ಟದಲ್ಲಿ ಪ್ರತಿಭಾವಂತರಾಗಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ಅವರ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದ್ದು, ಇದಕ್ಕೆ ಪಾಲಕರು ಶಿಕ್ಷಕರು ಸಹಕರಿಸುವಂತೆ ಹೇಳಿದರು.
ವೇದಿಕೆಯ ಮೇಲೆ ಹಿರಿಯ ಸಾಹಿತಿ ಡಾ.ಸಿ.ಕೆ ನಾವಲಗಿ, ಸಚಿನ ಸಮಯ , ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಭಜಂತ್ರಿ , ಕಾರ್ಯದರ್ಶಿ ಎ.ಎಸ್.ಭಜಂತ್ರಿ, ಮುಖ್ಯೋಪಾಧ್ಯಾಯನಿ ಜೆ.ಎ ಭಜಂತ್ರಿ, ಸಲಹಾ ಸಮಿತಿಯ ಅಧ್ಯಕ್ಷ ವಿಠಲ ಮುರ್ಕೀಭಾವಿ, ಯೂಸುಫ್ ತ್ರಾಸಗರ, ಬಾಬು ಮುಳಗುಂದ, ಶರ್ಪುದ್ದೀನ ನರೋ, ಕೆಂಪಣ್ಣ ಪಾತ್ರೋಟ, ಹಬೀಬ ಚಪ್ಪು, ಪ್ರಶಾಂತ್ ಸೋಫಿಮಠ,ಸಾದಿಕ ಮೋಮಿನ, ಡಾ.ಮುತ್ತೆಪ್ಪ ಪಾಟೀಲ ಇದ್ದರು.

Related posts: