ಯರಗಟ್ಟಿ:ತಾಲೂಕಾ ಮಟ್ಟದ ಕಛೇರಿಗಳು ಪ್ರಾರಂಭಿಸಲು ಸರಕಾರಕ್ಕೆ ಮನವಿ
ತಾಲೂಕಾ ಮಟ್ಟದ ಕಛೇರಿಗಳು ಪ್ರಾರಂಭಿಸಲು ಸರಕಾರಕ್ಕೆ ಮನವಿ
ಯರಗಟ್ಟಿ ಡಿ 20 : ನೂತನ ತಾಲೂಕು ಘೋಷಣೆಯಾಗಿ ವರ್ಷಗಳು ಕಳೆದರು ಸಹ ತಾಲೂಕಾ ಮಟ್ಟದ ಕಛೇರಿಗಳು ಪ್ರಾರಂಭವಾಗಿಲ್ಲದಿರುವುದನ್ನು ಖಂಡಿಸಿ ಇಲ್ಲಿನ ವಿವಿಧ ಸಂಘಟನೆಗಳ ಮುಖಂಡರಿಂದ ತಹಶೀಲ್ದಾರ ಅವರಿಗೆ ಮನವಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಡಿಎಸ್ಎಸ್ ಮುಖಂಡ ಚಿದಂಬರ ಕಟ್ಟಿಮನಿ,ಕರವೇ ಅಧ್ಯಕ್ಷ ರಫೀಕ ಡಿ ಕೆ, ಎ ಐ ಶಿರಸಂಗಿ
ಭಾಜಪ ತಾಲೂಕಿನ ಅಧ್ಯಕ್ಷರ ಈರಣ್ಣ ಚಂದರಗಿ, ಕೆ.ಎಫ್ ನದಾಫ ಸೇರಿದಂತೆ ಅನೇಕರು ಇದ್ದರು