RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಇಂದಿನ ಯಾಂತ್ರಿಕ ಯುಗದಲ್ಲಿ ಯಂತ್ರಗಳಾಗದೆ ಪರಸ್ಪರ ಮಾನವೀಯ ಸಂಬಂಧಗಳನ್ನು ಹೆಚ್ಚಿಸಿಕೊಳ್ಳಿ : ಎಂ.ಎ ಕುಂಬಾರಿ

ಗೋಕಾಕ:ಇಂದಿನ ಯಾಂತ್ರಿಕ ಯುಗದಲ್ಲಿ ಯಂತ್ರಗಳಾಗದೆ ಪರಸ್ಪರ ಮಾನವೀಯ ಸಂಬಂಧಗಳನ್ನು ಹೆಚ್ಚಿಸಿಕೊಳ್ಳಿ : ಎಂ.ಎ ಕುಂಬಾರಿ 

ಇಂದಿನ ಯಾಂತ್ರಿಕ ಯುಗದಲ್ಲಿ ಯಂತ್ರಗಳಾಗದೆ ಪರಸ್ಪರ ಮಾನವೀಯ ಸಂಬಂಧಗಳನ್ನು ಹೆಚ್ಚಿಸಿಕೊಳ್ಳಿ : ಎಂ.ಎ ಕುಂಬಾರಿ

ಗೋಕಾಕ ಡಿ 25 : ಇಂದಿನ ಯಾಂತ್ರಿಕ ಯುಗದಲ್ಲಿ ಯಂತ್ರಗಳಾಗದೆ ಅಮೂಲ್ಯವಾದ ಸಂದರ್ಭಗಳಲ್ಲಿ ಬೆರೆತು  ಮಾನವೀಯ ಸಂಬಂಧಗಳನ್ನು ಹೆಚ್ಚಿಸುಕೊಳ್ಳುವಂತೆ ನಿವೃತ್ತ ಮುಖ್ಯೋಪಾಧ್ಯಾಯ ಎಂ ಎ ಕುಂಬಾರಿ ಹೇಳಿದರು.
ಶನಿವಾರದಂದು ನಗರದಲ್ಲಿ ಎಂ.ಎಚ್.ಎಸ್. ಶಾಲೆಯ 1985/86ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನೆ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾನಸಿಕ ನೆಮ್ಮದಿಯಿಂದ ಸದೃಢ ಹಾಗೂ ಆನಂದ ಜೀವನ ಸಾಧ್ಯ. ಉತ್ತಮ ಸ್ನೇಹಿತರೊಂದಿಗೆ ಸದಾ ಸಂರ್ಪಕದಲ್ಲಿದ್ದು, ವಿಚಾರ ವಿನಿಮಯ ಮಾಡಿಕೊಳ್ಳಿ. ತಮ್ಮ ಮಕ್ಕಳಲ್ಲೂ ಉತ್ತಮ ಸಂಸ್ಕಾರವನ್ನು ಬೆಳೆಸಿ ಅವರಲ್ಲಿಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಗುರು ಪರಂಪರೆಯ ಸಂಸ್ಕೃತಿಯನ್ನು ಮುಂದಿನ ಪರಂಪರೆಗೆ ನೀಡುತ್ತಿರುವುದು ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರುಗಳಾದ ಎಸ.ಬಿ.ಮಲ್ಲಾಪೂರೆ, ಎಲ್.ಎಸ್.ಮಂಗಿ, ಎಂ.ಎಸ್.ಪಟ್ಟದಕಲ್ಲ, ಎಂ ಪಿ ಚಿಂಚೆವಾಡಿ, ಬಿ.ಡಿ.ಬಾಳಕ್ಕನವರ, ಆರ್‌.ಎ.ಹಿರೇಮಠ, ಜಿ.ಡಿ ಹಿರೇಮಠ, ಎಲ್.ಬಿ.ಕಿನೇಕರ ಉಪಸ್ಥಿತರಿದ್ದು ಸತ್ಕಾರ ಸ್ವೀಕರಿಸಿದರು.

Related posts: