RNI NO. KARKAN/2006/27779|Friday, October 18, 2024
You are here: Home » breaking news » ಕಲ್ಲೋಳಿ :ಯೋಗಮಾಡುವ ಮೂಲಕ ನಮ್ಮ ಮನಸ್ಸನ್ನು ಸಧೃಡವಾಗಿ ಇಟ್ಟುಕೊಳ್ಳಬಹುದು :ಡಾ.ಈಶ್ವರಪ್ಪಗೋಳ

ಕಲ್ಲೋಳಿ :ಯೋಗಮಾಡುವ ಮೂಲಕ ನಮ್ಮ ಮನಸ್ಸನ್ನು ಸಧೃಡವಾಗಿ ಇಟ್ಟುಕೊಳ್ಳಬಹುದು :ಡಾ.ಈಶ್ವರಪ್ಪಗೋಳ 

ಯೋಗಮಾಡುವ ಮೂಲಕ ನಮ್ಮ ಮನಸ್ಸನ್ನು ಸಧೃಡವಾಗಿ ಇಟ್ಟುಕೊಳ್ಳಬಹುದು :ಡಾ.ಈಶ್ವರಪ್ಪಗೋಳ

ಕಲ್ಲೋಳಿ ಅ 11: ಇವತ್ತಿನ ಜನಾಂಗ ಅತ್ಯಂತ ಒತ್ತಡದ ಬದುಕನ್ನು ಕಳೆಯುತ್ತಿದ್ದಾರೆ.  ಇದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.  ನಮ್ಮ ಮಾನಸಿಕ ಒತ್ತಡವನ್ನು ಹೆಚ್ಚು ಮಾಡತಕ್ಕಂತಹ ಕಾರ್ಯ ಚಟುವಟಿಕೆಗಳಿಂದ ದೂರವಿರಬೇಕು.

ಪೌಷ್ಟಿಕಾಂಶಯುಕ್ತ ಆಹಾರ, ಶುದ್ಧ ನೀರು, ಗಾಳಿ, ನಿಯಮಿತವಾದ ವ್ಯಾಯಾಮ, ಧ್ಯಾನ, ಯೋಗವನ್ನು ಮಾಡುವ ಮೂಲಕ ನಮ್ಮ ಮನಸ್ಸನ್ನು ಸಧೃಡವಾಗಿ ಇಟ್ಟುಕೊಳ್ಳಬಹುದು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಯಾದ ಬಸಗೌಡ ಈಶ್ವರಪ್ಪಗೋಳ ಹೇಳಿದರು

ಸ್ಥಳೀಯ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ, ರೆಡ್ ರಿಬ್ಬನ್ ಕ್ಲಬ್, ರೆಡ್ ಕ್ರಾಸ್ ಘಟಕ ಹಾಗೂ ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ:10-10-2017 ರಂದು ಹಮ್ಮಿಕೊಂಡಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಂಡರೆ ಅಧ್ಯಯನ, ಅಧ್ಯಾಪನ ಹಾಗೂ ಕ್ರೀಡೆಗಳಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಿದೆ ಎಂದರು.  ಮತ್ತೋರ್ವ ಅತಿಥಿ ಡಾ|| ಆರ್. ಜಿ. ಬಸ್ಸಾಪೂರ ಮಾತನಾಡಿ ರಕ್ತದಾನವು ಎಲ್ಲ ದಾನಗಳಲ್ಲಿ ಶ್ರೇಷ್ಠವಾಗಿದೆ.  ಯಾವುದೇ ಹಿಂಜರಿಕೆ ಇಲ್ಲದೆ ಎಲ್ಲ ಆರೋಗ್ಯವಂತ ವ್ಯಕ್ತಿಗಳು ರಕ್ತದಾನವನ್ನು ಮಾಡುವ ಮೂಲಕ ಜೀವಗಳನ್ನು ಉಳಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಸ್ಥೆಯ ಚೇರಮನ್ನರಾದ ಶ್ರೀ ಬಸಗೌಡ ಶಿವಗೌಡ ಪಾಟೀಲ ಮಾತನಾಡಿ ಮಾನಸಿಕ ಆರೋಗ್ಯದ ಮಹತ್ವವನ್ನು ತಿಳಿಸಿದರು.  ರಕ್ತದಾನದ ಜೊತೆಗೆ ನಮ್ಮ ವಿದ್ಯಾರ್ಥಿಗಳು ನೇತ್ರದಾನ ಮಾಡಲು ಸಿದ್ಧರಿದ್ದಾರೆ ಎಂದರು.  ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಸಾತಪ್ಪಾ ಖಾನಾಪೂರ, ಪ್ರಾಚಾರ್ಯ ಡಾ. ಸುರೇಶ ಹನಗಂಡಿ, ರೆಡ್ ಕ್ರಾಸ್ ಘಟಕದ ಕಾರ್ಯದರ್ಶಿ ಎಂ.ಬಿ.ಕುಲಮೂರ, ಫಾರ್ಮಾಸಿಸ್ಟ್ ಪಿ. ಎನ್. ಚಿಂಚಣಿ, ಕಿರಿಯ ಆರೋಗ್ಯ ಸಹಾಯಕಿ ಎಸ್. ಎ. ಅರಳಿಕಟ್ಟಿ, ಆಶಾ ಕಾರ್ಯಕರ್ತೆ ಯಲ್ಲವ್ವ ಇಮಡೇರ ಮುಂತಾದವರು ಹಾಜರಿದ್ದರು.  ಶಂಕರ ನಿಂಗನೂರ ನಿರೂಪಿಸಿದರು.  ಕೆ.ಎಸ್.ಪರವ್ವಗೋಳ ವಂದಿಸಿದರು.

Related posts: