RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ನಗರಸಭೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಆಚರಣೆ

ಗೋಕಾಕ:ನಗರಸಭೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಆಚರಣೆ 

ನಗರಸಭೆಯಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಆಚರಣೆ

ಗೋಕಾಕ ಡಿ 28 : ವಿಶೇಷಚೇತನರ ಸಬಲಿಕರಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು ಅವುಗಳ ಸದುಪಯೋಗದಿಂದ ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಬೇಕೆಂದು ನಗರಸಭೆ ಸಮುದಾಯ ಸಂಘಟಕ ಆರ್.ಎಮ್. ಗಣಾಚಾರಿ ತಿಳಿಸಿದರು.
ಬುಧವಾರದಂದು ನಗರದ ನಗರಸಭೆಯ ಸಭಾ ಭವನದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೆಳಗಾವಿ ಹಾಗೂ ನಗರಸಭೆ ಗೋಕಾಕ ಇವರ ಆಶ್ರಯದಲ್ಲಿ ಜರುಗಿದ ವಿಶ್ವ ವಿಕಲಚೇತನರ ದಿನಾಚರಣೆ ಹಾಗೂ ವಿಶೇಷ ಸಭೆಯಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಅಂಗವಿಕಲರ ಶ್ರೇಯೋಭಿವೃದ್ದಿಗಾಗಿ 11 ವಿವಿಧ ಸವಲತ್ತುಗಳಿದ್ದು, ಅವುಗಳಲ್ಲಿ ತ್ರೀಚಕ್ರ ವಾಹನ, ಗಾಲಿ ಕುರ್ಚಿ, ವಾಕಿಂಗ್ ಸ್ಟಿಕ್, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸಹಾಯಧನ, ಲ್ಯಾಪ್‍ಟ್ಯಾಪ್, ಪಕ್ಕಾಮನೆ, ಮನೆ ಖರೀದಿಗಾಗಿ ಸಹಾಯಧನ, ಸಣ್ಣ ಉದ್ದಿಮೆದಾರರಿಗೆ ಸಹಾಯಧನ, ಬುದ್ದಿಮಾದ್ಯ ಮಕ್ಕಳ ಪೋಷಣೆಗೆಗಾಗಿ ಸಹಾಯಧನ ಸೇರಿದಂತೆ ಹಲವಾರು ಯೋಜನೆಗಳಿದ್ದು ಅವುಗಳ ಉಪಯೋಗ ಪಡೆಯುವಂತೆ ಸಲಹೆ ನೀಡಿದರು.
ಸರ್ಕಾರದ ವಿವಿಧ ಯೋಜನೆಗಳಿಗೆ ಬಿಡುಗಡೆ ಮಾಡುವ ಅನುದಾನದಲ್ಲಿ ಶೇಕಡಾ 5ರಷ್ಟು ನಿಧಿಯನ್ನು ಮೀಸಲಿಡುತ್ತಿದ್ದು ಇದರಿಂದ ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಅಂಗವಿಕಲರ ಅಬಿವೃದ್ದಿಗೆ ಶ್ರಮಿಸುತ್ತಿದೆ. ಅಂಗವಿಕಲತೆ ಎನ್ನುವುದು ಶಾಪವಲ್ಲ ಅದೊಂದು ವರದಾನವೆಂದು ತಿಳಿದು, ಸಮಾಜದ ಮುಖ್ಯವಾಹಿನಿಗೆ ಬರುವಂತೆ ತಿಳಿಸಿದರು.
ವಿಶೇಷಚೇತನರ ಮುಖಂಡ ರಮೇಶ ಮೇಸ್ತ್ರಿ ಮಾತನಾಡಿ, ಅಂಗವಿಕಲತೆ ನಮಗೆ ಬಾರವಲ್ಲ, ಛಲದಿಂದ ಎಲ್ಲರಂತೆ ನಾವು ಕೂಡಾ ಸಮಾಜ ಮುಖ್ಯವಾಹಿನಿಗೆ ಬರಲು ನಮ್ಮ ಶ್ರಮದಾನ ಮುಖ್ಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ನಮಗಾಗಿ ರೂಪಿಸಿದ್ದು, ಅವುಗಳನ್ನು ಪಡೆದುಕೊಳ್ಳುವಲ್ಲಿ ಮುರ್ತುವರ್ಜಿ ವಹಿಸಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಹಾಜರಿದ್ದ ವಿಶೇಷಚೇತನರು, ಪ್ರತಿ ಮೂರು ತಿಂಗಳಿಗೊಮ್ಮೆ ಅಂಗವಿಕಲರ ಕುಂದುಕೊರತೆಗಳ ಸಭೆ ನಡೆಸುವಂತೆ, ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿವಾರ ಅಂಗವಿಕಲರಿಗೆ (ಯುಡಿಆಯ್‍ಡಿ) ಪ್ರಮಾಣ ಪತ್ರಗಳನ್ನು ವಿತರಿಸುವ ಕಾರ್ಯವನ್ನು ಮಾಡಬೇಕು. ಬೇರೆ ರಾಜ್ಯಗಳಲ್ಲಿ ನೀಡುವಂತೆ ಪ್ರತಿ ತಿಂಗಳು ನೀಡುವ ಮಾಸಾಶನವನ್ನು ಹೆಚ್ಚಿಗೆ ಮಾಡಬೇಕು. ಸರ್ಕಾರಿ ಕಚೇರಿಗಳಿಗೆ ತಮ್ಮ ಕೆಲಸ ಕಾರ್ಯಗಳಿಗೆ ಹೋಗುವ ಅಂಗವಿಕಲರ ಅನುಕೂಲಕ್ಕಾಗಿ ರ್ಯಾಂಪ ಹಾಗೂ ವ್ಹೀಲ್‍ಚೇರ್‍ಗಳ ವ್ಯವಸ್ಥೆ ಮಾಡಬೇಕು ಎಂದು ಒಕ್ಕೋರಲಿಂದ ಮನವಿ ಮಾಡಿದರು.
ಸಭೆಯಲ್ಲಿ ಇನ್ನೋರ್ವ ಸಮುದಾಯ ಸಂಘಟಕ ಎಸ್.ಎಮ್.ಚಂದರಗಿ, ಅಂಗವಿಲಕರ ಪುನರವಸತಿ ಕಾರ್ಯಕರ್ತರಾದ ಜಾವೀದ ಬಾಗವಾನ, ಮಹಾನಂದಾ ಪೂಜೇರಿ, ವಿಶೇಷಚೇತನರಾದ ಅರ್ಜುನ ಕಿತ್ತೂರ, ಕೆಂಪಣ್ಣ ಮೈಲನ್ನವರ, ವಿಠ್ಠಲ ಕಲಾಲ, ಸಂಜು ಅಂಬಿಗೇರ, ವಸಂತ ಸಂಕಪಾಳೆ, ದೀಪಕ ಗೌಡರ, ರೂಪಾ ಕೂಲಾ, ಮಲ್ಲವ್ವ ಜಾಡರ, ಶಂಕರ ಶಿವನ್ನವರ, ಮೈಬೂಬ್ ಶೇಖ ಮಲ್ಲಪ್ಪ ದಾಸಪ್ಪಗೋಳ ಸೇರಿದಂತೆ ಅನೇಕರು ಇದ್ದರು.

Related posts: