ಗೋಕಾಕ:ಕವಿ ಕುವೆಂಪು ನಿಸರ್ಗದ ರಮಣೀಯ ದೃಶ್ಯಗಳನ್ನು ತಮ್ಮ ಕವಿತೆಗಳಲ್ಲಿ ಹಿಡಿದಿಟ್ಟಿದ್ದಾರೆ : ಡಾ.ಸಿ.ಕೆ ನಾವಲಗಿ
ಕವಿ ಕುವೆಂಪು ನಿಸರ್ಗದ ರಮಣೀಯ ದೃಶ್ಯಗಳನ್ನು ತಮ್ಮ ಕವಿತೆಗಳಲ್ಲಿ ಹಿಡಿದಿಟ್ಟಿದ್ದಾರೆ : ಡಾ.ಸಿ.ಕೆ ನಾವಲಗಿ
ಗೋಕಾಕ ಡಿ 30 : ಸಾಹಿತ್ಯ ಕ್ಷೇತ್ರದ ಎಲ್ಲ ಮಜಲುಗಳಲ್ಲಿಯೂ ಛಾಪು ಮೂಡಿಸಿದ ಅಪರೂಪದ ಕವಿ ಕುವೆಂಪು ನಿಸರ್ಗದ ರಮಣೀಯ ದೃಶ್ಯಗಳನ್ನು ತಮ್ಮ ಕವಿತೆಗಳಲ್ಲಿ ಹಿಡಿದಿಟ್ಟಿದ್ದಾರೆ. ಅವರ ಸಾಹಿತ್ಯದಲ್ಲಿ ಒಂದು ಗಟ್ಟಿತನವಿದೆ. ಅದರಲ್ಲಿ ಓದುಗರನ್ನು, ಸಾಹಿತ್ಯ ಪ್ರಿಯರನ್ನು ರೋಮಾಂಚನಗೊಳಿಸುವ ಶಕ್ತಿ ಅವರ ಬರವಣಿಗೆಯಲ್ಲಿತ್ತು ಎಂದು ಜಾನಪದ ತಜ್ಞ ಡಾ.ಸಿ.ಕೆ ನಾವಲಗಿ ಹೇಳಿದರು.
ಗುರುವಾರದಂದು ನಗರದಲ್ಲಿ ಗುಂಪು ಕಲಾವಿದರು ಆಯೋಜಿಸಿದ್ದ ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಉಪನ್ಯಾಸ ಮತ್ತು ಗೀತ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು ಕುವೆಂಪು ಕನ್ನಡದ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದು ಕನ್ನಡದ ಮೇರು ಕವಿ. ರಾಷ್ಟ್ರಕವಿ ಪ್ರಶಸ್ತಿ ಪಡೆದ ಕುವೆಂಪುರವರ ಕೃತಿಗಳನ್ನು ಅಧ್ಯಯನ ಮಾಡಿದರೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬಹುದು ಎಂದರು.
ಕಾರ್ಯಕ್ರಮವನ್ನು ಡಾ.ಜಿ.ಎಂ ಕಾಮೋಜಿ ಉದ್ಘಾಟಿಸಿದರು.
ಪ್ರೋ ಚಂದ್ರಶೇಖರ್ ಅಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಪ್ರೋ.ಜಿ.ವ್ಹಿ ಮಾಳಗಿ, ಡಾ.ಶಶಿಕಲಾ ಕಾಮೋಜಿ, ಪ್ರೋ. ವಿ.ಎಸ್.ಹಂಪಣ್ಣವರ,ಮಹಾಂತೇಶ ತಾವಂಶಿ, ಜಿ.ಕೆ ಕಾಡೇಶಕುಮಾರ್, ಡಾ.ಕಡಲಗಿ, ಬಸವರಾಜ ಮಠಪತಿ, ರಂಜನಾ ಅಂಟಿನ, ಈಶ್ವರ ಮಮದಾಪೂರ, ರಾಜೇಂದ್ರ ಕಲ್ಯಾಣಿ, ನಿವೇದಿತಾ ಕಾಮೋಜಿರ ಪುಷ್ಪಾ ಮುರಗೋಡ, ಶಂಕುತಲಾ ದಂಡಿನ, ಜಯಾ ಚುನಮರಿ, ವಿದ್ಯಾ ರೆಡ್ಡಿ, ಭಾರತಿ ಮದಭಾವಿ, ರಜನಿ ಜಿರಗ್ಯಾಳ, ವಿನೂತ ನಾವಲಗಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಈಶ್ವರಚಂದ್ರ ಬೆಟಗೇರಿ ನಿರೂಪಿಸಿ, ವಂದಿಸಿದರು.