RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ದೈಹಿಕ ಸಾಮರ್ಥ್ಯ ವೃದ್ದಿಗೆ ಕ್ರೀಡಾಕೂಟಗಳು ಸಹಕಾರಿ : ಎಲ್.ಕೆ.ತೋರಣಗಟ್ಟಿ

ಗೋಕಾಕ:ದೈಹಿಕ ಸಾಮರ್ಥ್ಯ ವೃದ್ದಿಗೆ ಕ್ರೀಡಾಕೂಟಗಳು ಸಹಕಾರಿ : ಎಲ್.ಕೆ.ತೋರಣಗಟ್ಟಿ 

ದೈಹಿಕ ಸಾಮರ್ಥ್ಯ ವೃದ್ದಿಗೆ ಕ್ರೀಡಾಕೂಟಗಳು ಸಹಕಾರಿ : ಎಲ್.ಕೆ.ತೋರಣಗಟ್ಟಿ

ಗೋಕಾಕ ಡಿ 31 : ವರ್ಷದುದ್ದಕ್ಕೂ ಹಮ್ಮಿಕೊಳ್ಳುವ ಕ್ರೀಡಾ ‍ ಮತ್ತು ದೈಹಿಕ ಚಟುವಟಿಕೆಗಳ ಪ್ರಗತಿಯ     ಮೌಲ್ಯಮಾಪನಕ್ಕೆ ವಾರ್ಷಿಕ ಕ್ರೀಡಾಕೂಟ ಹಮ್ಮಿಕೊಳ್ಳುವದು ಅವಶ್ಯಕವಾಗಿದೆ ಎಂದು ಗೋಕಾಕ ವಲಯದ ದೈಹಿಕ ಶಿಕ್ಷಣ  ಪರಿವೀಕ್ಷಕರಾದ  ಎಲ್.ಕೆ.ತೋರಣಗಟ್ಟಿ ಹೇಳಿದರು.
  ಇತ್ತೀಚೆಗೆ  ಗೋಕಾಕ ಶಿಕ್ಷಣ  ಸಂಸ್ಥೆಯ ವತಿಯಿಂದ ನಡೆದ ಆದರ್ಶ ಕನ್ನಡ ಪ್ರಾಥಮಿಕ  ಜಿ, ಇ ,ಎಸ್ ಫ್ರೌಡಶಾಲೆ,  ಮಾಡರ್ನ ಆಂಗ್ಲ ಮಾಧ್ಯಮ  ಪ್ರಾಥಮಿಕ ಹಾಗೂ ಫ್ರೌಡ ಶಾಲೆ , ನವಚೇತನ  ಕನ್ನಡ ಮಾಧ್ಯಮ ಪ್ರಾಥಮಿಕ  ಹಾಗೂ  ಫ್ರೌಡ  ಶಾಲೆಗಳ   ಸಂಯುಕ್ತಾಶ್ರಯದಲ್ಲಿ  ನಡೆದ ಪ್ರಸಕ್ತ ಸಾಲಿನ  ವಾರ್ಷಿಕ  ಕ್ರೀಡಾ ಕೂಟಗಳ ಉದ್ಘಾಟನಾ  ಸಮಾರಂಭದಲ್ಲಿ  ಮುಖ್ಯ ಅತಿಥಿಯಾಗಿ  ಭಾಗವಹಿಸಿ  ಮಾತನಾಡಿದ ಅವರು  ದೈಹಿಕ ಸಾಮರ್ಥ್ಯ ವೃದ್ದಿಗೆ ಕ್ರೀಡಾಕೂಟಗಳು ಸಹಕಾರಿಯಾಗಿದ್ದು, ಪ್ರತಿ ಯೊಬ್ಬ ವಿದ್ಯಾರ್ಥಿ ಕನಿಷ್ಠ  ಎರಡು ಕ್ರೀಡೆಗಳಲ್ಲಿ  ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ  ಉದ್ಘಾಟನೆಯನ್ನು  ಸಂಸ್ಥೆಯ ನಿರ್ದೇಶಕರಾದ  ಶಶಿಲ್‌ ಮುನವಳ್ಳಿ ನೆರವೇರಿಸಿದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಂಸ್ಥೆಯ ಆಡಳಿತ ಮಂಡಳಿಯ ಚೇರಮನ್‌ ವ್ಹಿ. ಎ . ಕಡಕೋಳ ವಹಿಸಿದ್ದರು. ವೇದಿಕೆಯ ಮೇಲೆ  ಸಂಸ್ಥೆಯ  ಕಾರ್ಯದರ್ಶಿ ಆರ್‌,  ಎಂ, ವಾಲಿ,ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರುಗಳಾದ ಎಸ್‌, ಕೆ , ಮಠದ, ಎಂ, ಎಂ,ಸೊಗಲದ, ಹೆಚ್‌, ಕೆ,ಸಾಂಗಲಿ ,  ಶ್ರೀಮತಿ  ಎಸ್‌, ಎಸ್, ಇಜೇರಿ, ಶ್ರೀಮತಿ ಎ, ಎಂ, ಶೆಟ್ಟನ್ನವರ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ  ಮೂರು ಶಾಲೆಗಳ ವಿದ್ಯಾರ್ಥಿಗಳಿಂದ ದೈಹಿಕ ಕಸರತ್ತುಗಳು  ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.ಕಾರ್ಯಕ್ರಮವನ್ನು  ಎಸ್‌, ಎಂ, ಜನಮಟ್ಟಿ ನಿರೂಪಿಸಿದರು,  ಶ್ರೀಮತಿ  ಜೆ,ವ್ಹಿ , ಹೀರೆಮಠ ವಂದಿಸಿದರು.

Related posts: