ಗೋಕಾಕ:ಕೆಎಲ್ಇ ಪಿಯು ಕಾಲೇಜಿನಲ್ಲಿ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳ ಸ್ಮರಣೆ ಕಾರ್ಯಕ್ರಮ
ಕೆಎಲ್ಇ ಪಿಯು ಕಾಲೇಜಿನಲ್ಲಿ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳ ಸ್ಮರಣೆ ಕಾರ್ಯಕ್ರಮ
ಗೋಕಾಕ ಜ 3 : ಕೈಲಾಸ ದೊಡ್ಡದಲ್ಲ, ಕಾಯಕ ದೊಡ್ಡದು ಧರ್ಮ ದೊಡ್ಡದಲ್ಲ ದಯೆ ದೊಡ್ಡದು, ಅರಿವು ದೊಡ್ಡದಲ್ಲ ,ಆಚಾರ ದೊಡ್ಡದು ಎಂಬ ಸಂದೇಶಗಳನ್ನು ನೀಡುತ್ತಾ ಜನರ ಒಳಿತಕ್ಕಾಗಿ ತಮ್ಮ ಜೀವನವನ್ನೇ ಮೂಡುಪಾಗಿಟ್ಟ ಮಹಾನ ಮಾನವತಾವಾದಿ ಶ್ರೀ ಸಿದ್ದೇಶ್ವರ ಸ್ವಾಮಿಗಳು ಸದಾ ಜನರ ಮನದಲ್ಲಿ ನೆಲೆಸುತ್ತಾರೆ ಎಂದು ಕೆಎಲ್ಇ ನಿರ್ದೇಶಕ ಜಯಾನಂದ ಮುನ್ನವಳ್ಳಿ ಹೇಳಿದರು.
ಮಂಗಳವಾರದಂದು ನಗರದ ಕೆಎಲ್ಇ ಸಂಸ್ಥೆಯ ಸಿ.ಎಸ್.ಅಂಗಡಿ ಪಿಯು ಕಾಲೇಜಿನಲ್ಲಿ ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮಿಗಳ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಸರಳ ಸಜ್ಜನಿಕೆಯಿಂದ ಸದಾ ಸಂಚರಿಸುತ್ತಾ ಜನರಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸಿ ನಡೆದಾಡುವ ದೇವರಾಗಿದ್ದ ಅವರ ಅಗಲಿಕೆಯು ಮನಕುಲಕ್ಕೆ ತುಂಬಾಲಾರದ ನಷ್ಟವಾಗಿದೆ ಎಂದರು.
ಈ ಸಂದರ್ಭದಲ್ಲಿ ರೂಪಾ ಮುನ್ನವಳ್ಳಿ, ಜಿ.ಎಂ ಅಂದಾನಿ, ಅನುಪಾ ಕೌಶಿಕ ಹಾಗೂ ಕೆಎಲ್ಇ ವಿವಿಧ ಅಂಗ ಸಂಸ್ಥೆಗಳ ಪ್ರಾಚಾರ್ಯರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.