RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿ ಅವರನ್ನು ವಿಜ್ಞಾನಿಗಳಾಗುವಂತೆ ಪ್ರೇರೆಪಿಸಬೇಕು : ಶ್ರೀಮತಿ ಸಂಧ್ಯಾ ಜಾರಕಿಹೊಳಿ

ಗೋಕಾಕ:ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿ ಅವರನ್ನು ವಿಜ್ಞಾನಿಗಳಾಗುವಂತೆ ಪ್ರೇರೆಪಿಸಬೇಕು : ಶ್ರೀಮತಿ ಸಂಧ್ಯಾ ಜಾರಕಿಹೊಳಿ 

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿ ಅವರನ್ನು ವಿಜ್ಞಾನಿಗಳಾಗುವಂತೆ ಪ್ರೇರೆಪಿಸಬೇಕು : ಶ್ರೀಮತಿ ಸಂಧ್ಯಾ ಜಾರಕಿಹೊಳಿ

ಗೋಕಾಕ ಜ 10 : ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮೂಡಿಸಿ ಅವರನ್ನು ವಿಜ್ಞಾನಿಗಳಾಗುವಂತೆ ಪ್ರೇರೆಪಿಸಬೇಕು ಎಂದು ಮಯೂರ ಶಾಲೆಯ ಉಪಾಧ್ಯಕ್ಷೆ ಶ್ರೀಮತಿ ಸಂಧ್ಯಾ ಲಖನ್ ಜಾರಕಿಹೊಳಿ ಹೇಳಿದರು.
ಮಂಗಳವಾರದಂದು ನಗರದ ಮಯೂರ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ನಿಮಿತ್ತ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ವೈಜ್ಞಾನಿಕ ಯುಗದಲ್ಲಿ ವಿಜ್ಞಾನ ಹೆಚ್ಚಿನ ಮಹತ್ವ ಪಡೆದಿದೆ. ವಿದ್ಯಾರ್ಥಿಗಳು ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಪ್ರತಿಯೊಬ್ಬರಲ್ಲಿಯೂ ಪ್ರತಿಭೆ ಇದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರು ಪ್ರತಿಭಾವಂತರಾಗುತ್ತಾರೆ. ಪಾಲಕರು, ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರು ಪರಸ್ಪರ ಸಹಕಾರ ಮನೋಭಾವದಿಂದ ಕಾರ್ಯ ಪ್ರವೃತ್ತರಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಉಜ್ವಲಗೋಳಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಎಸ್.ಬಿ.ಮುರಗೋಡ, ಮುಖ್ಯೋಪಾಧ್ಯಾಯನಿ ಸಿ.ಬಿ.ಪಾಗದ ಇದ್ದರು.

Related posts: