RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಪ್ರಸ್ತುತ ದಿನಮಾನಗಳಲ್ಲಿ ಪಾಲಕರಿಗೆ ಶಿಕ್ಷಣ ಸವಾಲಾಗಿದೆ : ಬಿಇಒ ಜಿ.ಬಿ.ಬಳಗಾರ

ಗೋಕಾಕ:ಪ್ರಸ್ತುತ ದಿನಮಾನಗಳಲ್ಲಿ ಪಾಲಕರಿಗೆ ಶಿಕ್ಷಣ ಸವಾಲಾಗಿದೆ : ಬಿಇಒ ಜಿ.ಬಿ.ಬಳಗಾರ 

ಪ್ರಸ್ತುತ ದಿನಮಾನಗಳಲ್ಲಿ ಪಾಲಕರಿಗೆ ಶಿಕ್ಷಣ  ಸವಾಲಾಗಿದೆ : ಬಿಇಒ ಜಿ.ಬಿ.ಬಳಗಾರ

ಗೋಕಾಕ ಜ 18 :  ಪ್ರಸ್ತುತ ದಿನಮಾನಗಳಲ್ಲಿ ಪಾಲಕರಿಗೆ ಶಿಕ್ಷಣ  ಸವಾಲಾಗಿದ್ದು ಅದನ್ನು  ಸ್ವೀಕರಿಸಿ ಮಕ್ಕಳನ್ನು ವಿದ್ಯಾವಂತರನ್ನಾಗಿ  ಮಾಡುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.
ಮಂಗಳವಾರದಂದು ನಗರದ ಶ್ರೀ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ಆವರಣದಲ್ಲಿ ಜರುಗಿದ  ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಹಾಗೂ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಸಂಯುಕ್ತ ಪದವಿ ಪೂರ್ವ ಕಾಲೇಜನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ   ಅವರು ಮಾತನಾಡಿದರು.
ಕರೋನಾ ಸಂದರ್ಭದಲ್ಲಿ ಕಳೆದ ಎರೆಡು ವರ್ಷಗಳಿಂದ ಶೈಕ್ಷಣಿಕವಾಗಿ ನಾವು ಹಿಂದುಳಿದಿದ್ದೇವೆ . ದೇವರ ದಯೆಯಿಂದ ಮತ್ತೆ ಶಾಲೆಗಗಳು ಪ್ರಾರಂಭಗಿದ್ದು, ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ ಮಕ್ಕಳನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕು.  ಇತ್ತೀಚೆಗೆ ಶಿಕ್ಷಣ ವ್ಯಾಪಾರಕರಣವಾಗಿದೆ.ಇದನ್ನು ತಪ್ಪಿಸುವ ಕಾರ್ಯ ಶೈಕ್ಷಣಿಕ ಸಂಸ್ಥೆಗಳು ಮಾಡಬೇಕು. ಪಾಲಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ  ಉತ್ತಮ ಸಂಸ್ಕಾರವನ್ನು ಕೊಡಬೇಕು. ಮಾನವೀಯ  ಮೌಲ್ಯಗಳು ಕುಸಿಯುತ್ತಿರು ಪ್ರಸ್ತುತ ಸಂದರ್ಭದಲ್ಲಿ ಪಾಲಕರು ಜಾಗೃಕರಾಗಿ ಶಿಕ್ಷಣವನ್ನು ಕೊಡಿಸಬೇಕು. ಮಕ್ಕಳ ಕನಸುಗಳನ್ನು ನನಸು ಮಾಡಬೇಕಾದ ಬಹುದೊಡ್ಡ ಜವಾಬ್ದಾರಿ ಪಾಲಕರದಾಗಿದ್ದು.ಆ ನಿಟ್ಟಿನಲ್ಲಿ ಪಾಲಕರು ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣವನ್ನು ಕೊಡಿಸಬೇಕು ಎಂದ ಅವರು
ವಾರ್ಷಿಕ ಸ್ನೇಹ ಸಮ್ಮೇಳನಗಳು ಶೈಕ್ಷಣಿಕ ಚಟುವಟಿಕೆ ಸಹಕಾರಿಯಾಗಿವೆ.  ಒತ್ತಡದ ಬದುಕಿನಲ್ಲಿ ಸಿಲುಕಿ ಪಾಲಕರು ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಕೊಟ್ಟು ಅವರಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಅವರನ್ನು ಸಮಾಜದಲ್ಲಿ ಒಳ್ಳೆಯ ಪ್ರಜ್ಞೆಗಳನ್ನಾಗಿ ರೂಪಿಸಬೇಕು.  ಆ ನಿಟ್ಟಿನಲ್ಲಿ ಪಾಲಕರು ಮತ್ತು ಶಿಕ್ಷಣ ಸಂಸ್ಥೆಗಳು ಕಾರ್ಯ ಪ್ರವೃತ್ತವಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿ/ ವಿದ್ಯಾರ್ಥಿನೀಯರನ್ನು ಸತ್ಕರಿಸಿ, ಗೌರವಿಸಲಾಯಿತು.
ವೇದಿಕೆಯ ಮೇಲೆ ಆಡಳಿತಾಧಿಕಾರಿ ಬಿ.ಕೆ ಕುಲಕರ್ಣಿ , ಪ್ರಾಚಾರ್ಯ ಅರುಣ ಪೂಜೆರ, ಮುಖ್ಯೋಪಾಧ್ಯಾಯ ಆರ್.ಎಂ ದೇಶಪಾಂಡೆ, ಪ್ರಧಾನ ಗುರುಮಾತೆರಾದ  ಶ್ರೀಮತಿ ಎಚ್.ಬಿ.ಪಾಗನಿಸ,   ಶ್ರೀಮತಿ ಪಿ.ವ್ಹಿ ಚಚಡಿ ಇದ್ದರು.

Related posts: