ಘಟಪ್ರಭಾ:ಸರ್ಕಾರದ ಯೋಜನೆಗಳು ಪ್ರತಿಯೊಬ್ಬರ ಮನೆಗೆ ಮುಟ್ಟಿದರೆ ಮಾತ್ರ ನಾನು ಮಂತ್ರಿಯಾಗಿದ್ದಕ್ಕೆ ಸಾರ್ಥಕ : ಸಚಿವ ರಮೇಶ
ಸರ್ಕಾರದ ಯೋಜನೆಗಳು ಪ್ರತಿಯೊಬ್ಬರ ಮನೆಗೆ ಮುಟ್ಟಿದರೆ ಮಾತ್ರ ನಾನು ಮಂತ್ರಿಯಾಗಿದ್ದಕ್ಕೆ ಸಾರ್ಥಕ : ಸಚಿವ ರಮೇಶ
ಘಟಪ್ರಭಾ ಅ 12 : ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಮಲ್ಲಾಪೂರ (ಪಿ.ಜಿ) ಪಟ್ಟಣ ಪಂಚಾಯತಿಗೆ ನಗರೋಥ್ಥಾನ ಯೋಜನೆಯಲ್ಲಿ ಈಗಾಗಲೇ 5 ಕೋಟಿ ನೀಡಲಾಗಿದ್ದು ಇನ್ನೂ 10 ಕೋಟಿ ಅನುದಾನ ನೀಡುವೆ. ಸಿ.ಸಿ. ರಸ್ತೆ, ಚರಂಡಿ, ಶೌಚಾಲಯ, ಮತ್ತು ಕುಡಿಯುವ ನೀರು ಸೇರಿದಂತೆ ಮುಂತಾದ ಅಭಿವೃದ್ದಿ ಕಾರ್ಯಗಳು ಕೈಕೊಳ್ಳಬೇಕೆಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು ಮಂಗಳವಾರದಂದು ಸ್ಥಳೀಯ ಸುಡಗಾಡ ಸಿದ್ಧ ಸಮಾಜದ ಶ್ರೀ ದುರ್ಗಾದೇವಿ ಜಾತ್ರೆಗೆ ಆಗಮಿಸಿದ ಸಚಿವರು ಸುಡಗಾಡ ಸಿದ್ಧ ಸಮಾಜಕ್ಕೆ ಶೀಘ್ರದಲ್ಲಿ ಸಮುದಾಯ ಭವನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಸಿದ್ದರಾಮಯ್ಯನವರ ಸರ್ಕಾರ ನೀರಾವರಿ ಯೋಜನೆ ರೈತರಿಗೆ ಕಾರ್ಮಿಕರಿಗೆ ಹಿಂದುಳಿದ ವರ್ಗದ ಬಡವರಿಗೆ ಆರೋಗ್ಯ ವಿಮೆ ಮತ್ತು ಉಚಿತ ಸಿಲೆಂಡರ ಗ್ಯಾಸ ಸೇರಿದಂತೆ ಹಲವಾರು ಜನ ಕಲ್ಯಾಣ ಕಾರ್ಯಕ್ರಮಗಳು ಜಾರಿಗೆ ತಂದಿದ್ದಾರೆಂದು ಹೇಳಿದ ಸಚಿವರು ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ನಾವು ಕಟ್ಟಿಬದ್ದರಾಗಿದ್ದು ನಾವು ಸಂಕಲ್ಪ ಮಾಡಿದ್ದೇವೆ. ಪ್ರತಿಯೊಬ್ಬರ ಮನೆಗೆ ಸರ್ಕಾರದ ಯೋಜನೆಗಳು ಮುಟ್ಟಿದರೆ ಮಾತ್ರ ನಾನು ಮಂತ್ರಿಯಾಗಿದ್ದಕ್ಕೆ ಸಾರ್ಥಕ ಎಂದು ಸಚಿವರು ಹೇಳಿದರು.
ಹಿಂದುಳಿದ ವರ್ಗಗಳು ಸೇರಿದಂತೆ ಎಲ್ಲ ಸಮಾಜದವರು ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ ನಾವು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತೆಂದು ಹೇಳಿದರು.
ಸಮಸ್ತ ನಾಗರಿಕರ ಪರವಾಗಿ ವಾರ್ಡ ಸದಸ್ಯೆ ಶ್ರೀದೇವಿ ಕೋಗನೂರ, ಶಿವಪುತ್ರ ಕೋಗನೂರ, ಎಂ.ಜಿ. ಮುಚಳಂಬಿ ಸಚಿವರನ್ನು ಅತ್ಮೀಯವಾಗಿ ಸತ್ಕರಿಸಿದರು
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯರಾದ ಟಿ.ಆರ್. ಕಾಗಲ್, ಮಡ್ಡೇಪ್ಪಾ ತೋಳಿನವರ, ಹಿರಿಯರಾದ ರಾಮಣ್ಣಾ ಹುಕ್ಕೇರಿ, ಡಿ.ಎಂ.ದಳವಾಯಿ, ಸುಭಾಸ ಹುಕ್ಕೇರಿ, ಸುಲ್ತಾನಸಾಬ ಕಬ್ಬೂರ, ಪ.ಪಂ. ಅಧ್ಯಕ್ಷೆ ಪಾರವ್ವಾ ಮೇತ್ರಿ, ಪ.ಪಂ.ಸದಸ್ಯರಾದ ಗಂಗಾಧರ ಬಡಕುಂದ್ರಿ, ಪ್ರವೀಣ ಮಟಗಾರ, ಈರಗೌಡ ಕಲಕುಟಕಿ, ಮಾರುತಿ ಹುಕ್ಕೇರಿ, ರಮೇಶ ತುಕ್ಕಾನಟ್ಟಿ, ಮಲ್ಲಪ್ಪಾ ತುಕ್ಕಾನಟ್ಟಿ, ಸುಧೀರ ಜೋಡಟ್ಟಿ, ನಾಗರಾಜ ಜಂಬ್ರಿ, ಕೃಷ್ಣಾ ಗಂಡವ್ವಗೋಳ, ವೀರಭದ್ರ ಗಂಡವ್ವಗೋಳ, ರಮೇಶ ಗಂಡವ್ವಗೋಳ, ಸುರೇಶ ಪೂಜೇರಿ, ನಾಗರಾಜ ಚಚಡಿ, ಬೀರಪ್ಪಾ ಡಬಾಜ, ಮಾರುತಿ ವಿಜಯನಗರ, ಭರಮು ಹುಲ್ಲೋಳಿ, ಎಂ.ಆರ್. ಭಜಂತ್ರಿ, ರಮೇಶ ಕಬಾಡಗಿ, ಪ್ರಕಾಶ ಕುರಬೇಟ, ಜಗದೀಶ ಕಟ್ಟಿಮನಿ, ಬಸು ಬಡಿಗೇರ, ಅಶೋಕ ಕಳಸನ್ನವರ, ಸುಡಗಾಡ ಸಿದ್ದ ಸಮಾಜದ ಹಿರಿಯರಾದ ಸಿದ್ರಾಮ ಸಂಗಮನವರ, ದುರ್ಗಾಜಿ ಕೋಮಾರಿ, ದ್ಯಾಮಣ್ಣಾ ಕೋಮಾರಿ, ಯಲ್ಲಪ್ಪಾ ಗಂಟೆನ್ನವರ, ಶಂಕರ ಪತಾಗಿರಿ, ಶಿವಾಜಿ ಪತಾಗಿರಿ, ಯಲ್ಲಪ್ಪಾ ಸಂಕನ್ನವರ, ವೀರಣ್ಣಾ ಸಂಗಮನವರ ಸೇರಿದಂತೆ ಇತರರು ಇದ್ದರು.
ವೀರಣ್ಣಾ ಸಂಗಮನವರ ಸ್ವಾಗತಿಸಿದರು, ರಾಜು ಪಂಚಾಳ ನಿರೂಪಿಸಿದರು.