ಗೋಕಾಕ:ಕನ್ನಡಪರ ಸಂಘಟನೆಗಳು ಕನ್ನಡಿಗರ ಧ್ವನಿಯಾಗಿವೆ : ಸನತ ಜಾರಕಿಹೊಳಿ ಅಭಿಮತ
ಕನ್ನಡಪರ ಸಂಘಟನೆಗಳು ಕನ್ನಡಿಗರ ಧ್ವನಿಯಾಗಿವೆ : ಸನತ ಜಾರಕಿಹೊಳಿ ಅಭಿಮತ
ಗೋಕಾಕ ಜ 28 : ಕನ್ನಡ ನಾಡು, ನುಡಿ, ಭಾಷೆಯ ಸಂರಕ್ಷಣೆಯ ಜೊತೆಗೆ ಕನ್ನಡಿಗರನ್ನು ಒಗ್ಗೂಡಿಸಿ ಹಲವು ರಚನಾತ್ಮಕ ಕಾರ್ಯಗಳನ್ನು ಮಾಡುತ್ತಿರುವ ಕನ್ನಡಪರ ಸಂಘಟನೆಗಳು ಕನ್ನಡಿಗರ ಧ್ವನಿಯಾಗಿವೆ ಎಂದು ಲಕ್ಷ್ಮೀ ಎಜುಕೇಷನ್ ಟ್ರಸ್ಟ್ ನ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಹೇಳಿದರು.
ಶನಿವಾರದಂದು ತಾಲೂಕಿನ ಬಳೋಬಾಳ ಗ್ರಾಮದಲ್ಲಿ ಕರವೇ ವತಿಯಿಂದ ಹಮ್ಮಿಕೊಂಡ ಕರವೇ ಗ್ರಾಮ ಘಟಕದ 15ನೇ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಸನ್ಮಾನ ಹಾಗೂ ಕಾರ್ಮಿಕರಿಗೆ ಉಚಿತ ಕಾರ್ಮಿಕ ಕಾರ್ಡ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಡಿ ಭಾಗದಲ್ಲಿ ಕನ್ನಡವನ್ನು ಗಟ್ಟಿಯಾಗಿ ಕಟ್ಟುವ ಕಾರ್ಯವನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ಅದರ ಪರಿಣಾಮವಾಗಿ ಇಂದು ಬೆಳಗಾವಿಯಲ್ಲಿ ಕನ್ನಡಮಯ ವಾತಾವರಣ ನಿರ್ಮಾಣವಾಗಿದೆ ಎಂದ ಅವರು ಹೋರಾಟಗಳ ಜೊತೆಗೆ ಸಾಮಾಜಿಕ ಕಳ್ಳಕಳಿಯುಳ್ಳ ಕಾರ್ಯಗಳನ್ನು ಮಾಡಿ ಸಾಮಾಜದ ಆಪ್ತ ಬಾಂಧವರಾಗಬೇಕು ಎಂದು ಹೇಳಿದರು.
ಹಿರಿಯ ಸಾಹಿತಿ ಡಾ.ಸಿ.ಕೆ ನಾವಲಗಿ ಮಾತನಾಡಿ ಕರ್ನಾಟಕದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಭಾಷೆಯನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದೆ ಕನ್ನಡ ಪರ ಸಂಘಟನೆಗಳ ಹೋರಾಟದ ಫಲವಾಗಿ ಇಂದು ಕೇಂದ್ರ ಸರಕಾರದ ಐಎಎಸ್ ಪರೀಕ್ಷೆಗಳು ಕನ್ನಡ ಭಾಷೆಯಲ್ಲಿ ಬರೆಯಲು ಸಾಧ್ಯವಾಗಿದೆ. ನಮ್ಮ ದೇಶದಲ್ಲಿ ಯುವಕರ ಸಂಖ್ಯೆ ಹೆಚ್ಚಿದ್ದು, ಯುವಕರು ಕನ್ನಡ ಭಾಷೆಯ ಇತಿಹಾಸವನ್ನು ತಿಳಿದು ಭಾಷೆಯ ಬಗ್ಗೆ ಗೌರವವನ್ನು ಹೊಂದಿ ಅದನ್ನು ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು. ಕುಲಕಸಬಿನ ಮೂಲಕ ಕುಟುಂಬದ ನಿರ್ವಹಿಸುತ್ತಿರುವ ವೃತ್ತಿ ನಿರತ ಕಾರ್ಮಿಕರನ್ನು ಗುರುತಿಸಿ ಅವರಿಗೆ ಉಚಿತವಾಗಿ ಕಾರ್ಮಿಕರ ಕಾರ್ಡಗಳನ್ನು ವಿತರಿಸಿ ಅರ್ಥಪೂರ್ಣವಾಗಿ ತಮ್ಮ 15ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವದು ಮಾದರಿಯಾಗಿದೆ ಎಂದು ಹೇಳಿದರು.
ಇನ್ನೋರ್ವ ಸಾಹಿತಿ ಜಯಾನಂದ ಮಾದರ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಸಂಘ ಸಂಸ್ಥೆಗಳ ಸಂಘಟಕರು ಮತ್ತು ಜನಪ್ರತಿನಿಧಿಗಳು ಕೂಡಿ ಶ್ರಮಿಸಬೇಕು ಎಂದರು
ಕಾರ್ಯಕ್ರಮದ ಸಾನಿಧ್ಯವನ್ನು ಶೂನ್ಯ ಸಂಪಾದನಠಧ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆರ್ಶಿವರ್ಚನ ನೀಡಿದರು.
ವೇದಿಕೆಯಲ್ಲಿ ಸದ್ಗುರು ಮಾತೆ ನಿಲಾಂಬಿಕಾ ದೇವಿ, ಕಾರ್ಮಿಕ ಇಲಾಖೆಯ ನಿರೀಕ್ಷಕ ಪಾಂಡುರಂಗ ಮಾವರಕರ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗುರುಸಿದ್ದಪ್ಪ ಪೂಜೇರಿ, ಮುರಗೇಶ ಮೆಳವಂಕಿ, ಲಗಮಣ್ಣ ಕಳಸಣ್ಣವರ,ಚಂದ್ರಪ್ಪ ಹಂಚಿನಮನಿ, ಮಹಾದೇವ ಕರಿಗಾರ, ವಿರಪ್ಪ ಸಂಪಗಾಂವ , ಭೀಮಶಿ ಹೂಲಿಕಟ್ಟಿ, ಹಸನಸಾಬ ನಧಾಫ ಉಪಸ್ಥಿತರಿದ್ದರು