RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಸಭೆಗೆ ರೈತ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ : ಭೀಮಶಿ ಗದಾಡಿ ಮನವಿ

ಗೋಕಾಕ:ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಸಭೆಗೆ ರೈತ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ : ಭೀಮಶಿ ಗದಾಡಿ ಮನವಿ 

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಸಭೆಗೆ ರೈತ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ : ಭೀಮಶಿ ಗದಾಡಿ ಮನವಿ

ಗೋಕಾಕ ಅ 12: ಬರುವ ದಿ.21ರಂದು ಬೆಳಗಾವಿಯ ಜಿಲ್ಲಾ ಪಂಚಾಯತ ಕಛೇರಿಯಲ್ಲಿ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ರೈತರ ಕುಂದು ಕೊರತೆಗಳ ಸಮಸ್ಯೆ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆಯಲಾಗಿದ್ದು ಜಿಲ್ಲೆಯ ಎಲ್ಲ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು, ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಭೀಮಶಿ ಗದಾಡಿ ಮನವಿ ಮಾಡಿಕೊಂಡರು.

ಅವರು ಗುರುವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದ ರೈತ ಸಂಘದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ರೈತರ ವಿವಿಧ ಬೇಡಿಕೆಗಳಲ್ಲಿ ಲಕ್ಷ್ಮೇಶ್ವರ ನೀರಾವರಿ ಕಾಲುವೆ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲಾಗುವುದು. ತಾಲೂಕಿನಾದ್ಯಂತ ವಿದ್ಯುತ್ ಅಭಾವವಿದ್ದು ಅಧಿಕಾರಿಗಳು ಶೀಘ್ರದಲ್ಲಿಯೇ ಸರಿಪಡಿಸಬೇಕು. ವಿದ್ಯುತ್ ನಿರಂತರ ಜ್ಯೋತಿ ಸಮಸ್ಯೆ ಉಲ್ಬಣಗೊಂಡಿದೆ. ತಾಲೂಕಿನ ಹಳ್ಳಿಗಳ ರಸ್ತೆಗಳು ಹದಗೆಟ್ಟಿದ್ದು ಸರಿಪಡಿಸಬೇಕು. ತಾಲೂಕಿನ ಪಶು ವೈದ್ಯಾಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕೆಂದು ಸಭೆಯಲ್ಲಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹಸಿರು ಸೇನೆ ಜಿಲ್ಲಾಧ್ಯಕ್ಷ ಗಣಪತಿ ಈಳಿಗೇರ, ಜಿಲ್ಲಾ ಸಂಚಾಲಕ ಸತ್ತೇಪ್ಪ ಮಲ್ಲಾಪೂರೆ, ತಾಲೂಕಾಧ್ಯಕ್ಷ ಮುತ್ತೇಪ್ಪ ಬಾಗನ್ನವರ, ತಾಲೂಕಾ ಕಾರ್ಯಾಧ್ಯಕ್ಷ ಮಂಜು ಪೂಜೇರಿ, ಸಿದ್ಲಿಂಗ ಪೂಜೇರಿ, ಮಹಾದೇವ ಗೋಡೇರ, ಪ್ರದೀಪ ಪೂಜಾರಿ, ಸಿದ್ರಾಮ ಪೂಜಾರಿ, ಮಲ್ಲಿಕಾರ್ಜುನ ಬಾಗನ್ನವರ, ಮಾರುತಿ ನಾಯ್ಕ, ಮಹಾದೇವ ರಡೇರಟ್ಟಿ, ಶಿವಲಿಂಗಪ್ಪ ನಾಯ್ಕ ಸೇರಿದಂತೆ ರೈತ ಸಂಘ ಮತ್ತು ಹಸಿರು ಸೇನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು, ರೈತ ಬಾಂಧವರು ಇದ್ದರು.

Related posts: