RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಇದೇ ಫೆಬ್ರವರಿ ದಿನಾಂಕ 28 ರಂದು ಗೋಕಾಕ ಮತ್ತು ಅರಬಾಂವಿ ಮತಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಸಮಾವೇಶ : ಅಶೋಕ ಪೂಜಾರಿ

ಗೋಕಾಕ:ಇದೇ ಫೆಬ್ರವರಿ ದಿನಾಂಕ 28 ರಂದು ಗೋಕಾಕ ಮತ್ತು ಅರಬಾಂವಿ ಮತಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಸಮಾವೇಶ : ಅಶೋಕ ಪೂಜಾರಿ 

ಇದೇ ಫೆಬ್ರವರಿ ದಿನಾಂಕ 28 ರಂದು ಗೋಕಾಕ ಮತ್ತು ಅರಬಾಂವಿ ಮತಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆ ಸಮಾವೇಶ : ಅಶೋಕ ಪೂಜಾರಿ

ಗೋಕಾಕ ಫೆ 8 : ಇದೇ ಫೆಬ್ರವರಿ ದಿನಾಂಕ 28 ರಂದು ಗೋಕಾಕ ಮತ್ತು ಅರಬಾಂವಿ ಮತಕ್ಷೇತ್ರದಲ್ಲಿ ಪ್ರಜಾಧ್ವನಿ ಯಾತ್ರೆಯ ಸಮಾವೇಶವನ್ನು ಗೋಕಾಕ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಹೇಳಿದರು‌.
ಬುಧವಾರದಂದು ನಗರದ ಜ್ಞಾನ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ದಕ್ಷಿಣ ಕರ್ನಾಟಕದದಲ್ಲಿ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಪ್ರಜಾಧ್ವನಿಯಾತ್ರೆ ನಡೆಯಿಸುತ್ತಿದೆ. ಈ ಹಿಂದೆ ರಾಜ್ಯದಲ್ಲಿ ಅನೇಕ ಯಾತ್ರೆಗಳು ನಡೆದಿವೆ. ಆದರೆ ಕಾಂಗ್ರೆಸ್ ಪಕ್ಷ ಕೈಗೊಂಡಿರುವ ಈ ಯಾತ್ರೆ ಪ್ರಜೆಗಳ ಧ್ವನಿ, ಜನ ಸಾಮಾನ್ಯರ ಧ್ವನಿಯನ್ನು ಆಲಿಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಅವರ ಭಾವನೆಗಳಿಗೆ ಸ್ವಂದಿಸುವ ಕಾರ್ಯ ಕಾಂಗ್ರೆಸ್ ಪಕ್ಷ ಪ್ರಜಾಧ್ವನಿ ಯಾತ್ರೆಯ ಮೂಲಕ ಮಾಡುತ್ತಿದೆ. ಜನ ಸಾಮಾನ್ಯರ ಕಷ್ಟಗಳಿಗೆ ಸ್ವಂದಿಸುವ ಕಾಳಜಿ ಬಿಜೆಪಿ ಪಕ್ಷಕ್ಕೆ ಇಲ್ಲಾ ಜನರು ರಾಜ್ಯಾದ್ಯಂತ ಪ್ರಜಾಧ್ವನಿ ಯಾತ್ರೆಗೆ ಬೆಂಬಲವನ್ನು ಸೂಚಿಸುತ್ತಿದ್ದು, ಇದೇ ತಿಂಗಳು ಫೆಬ್ರವರಿ 28 ರಂದು ಗೋಕಾಕ ನಗರದಲ್ಲಿ ನಡೆಯುವ ಪ್ರಜಾಧ್ವನಿ ಯಾತ್ರೆಯಲ್ಲಿ ಗೋಕಾಕ ಮತ್ತು ಅರಬಾಂವಿ ಮತಕ್ಷೇತ್ರದ ಸುಮಾರು 25 ಸಾವಿರ ಜನರು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಕಾರ್ಯಕರ್ತರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾವೇಶದಲ್ಲ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದ ಅವರು
ಶನಿವಾರ ದಿನಾಂಕ 11 ರಂದು ಬೆಳಿಗ್ಗೆ 11 ಘಂಟೆಗೆ ನಗರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯವನ್ನು ಶಾಸಕ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸುವರು ಮಧ್ಯಾಹ್ನ 12 ಘಂಟೆಗೆ ತಾಲೂಕಿನ ಘಟಪ್ರಭಾದ ಸೇವಾದಳದಲ್ಲಿ ಗೋಕಾಕ ಮತ್ತು ಅರಬಾಂವಿ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು, ಎರೆಡು ಕಾರ್ಯಕ್ರಮಗಳಿಗೆ ಗೋಕಾಕ ಮತ್ತು ಅರಬಾಂವಿ ಮತಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಮನವಿ ಮಾಡಿದ್ದಾರೆ.

ಪಕ್ಷ ಟಿಕೆಟ್ ನೀಡಿದವರ ಪರವಾಗಿ ಪ್ರಚಾರ : ಕಾಂಗ್ರೆಸ್ ಪಕ್ಷದಿಂದ ಗೋಕಾಕ ವಿಧಾನ ಸಭಾ ಚುನಾವಣೆಗೆ 4 ಜನರು ಅರ್ಜಿ ಸಲ್ಲಿಸಿದ್ದಾರೆ. ನಿಮ್ಮನ್ನು ಬಿಟ್ಟು ಬೇರಯವರಿಗೆ ಪಕ್ಷ ಟಿಕೆಟ್ ನೀಡಿದರೆ ನಿಮ್ಮ ನಿಲುವು ಏನಿರತ್ತದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಶೋಕ ಪೂಜಾರಿ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಚುನಾವಣೆ ಸ್ವರ್ಧಿಸುವ ಅಧಿಕಾರಿ ವಿದೆ. ಆ ನಿಟ್ಟಿನಲ್ಲಿ ನಾಲ್ಕು ಜನರು ಅರ್ಜಿ ಸಲ್ಲಿಸಿದ್ದಾರೆ. ಪಕ್ಷ ನಾಲ್ಕು ಜನರಲ್ಲಿ ಯಾರಿಗಾದರೂ ಟಿಕೆಟ್ ನೀಡಿದರೆ ಅವರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಕಾಂಗ್ರೆಸ್ ಗ್ರಾಮೀಣ ಬ್ಲಾಕ್ ಅಧ್ಯಕ್ಷ ಪ್ರಕಾಶ ಡಾಂಗೆ, ಕಾಂಗ್ರೆಸ್ ಮುಖಂಡ ಸಿದ್ದಲಿಂಗ ದಳವಾಯಿ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿ ಮಾತನಾಡಿ ಪ್ರಜಾಧ್ವನಿ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

Related posts: