ಗೋಕಾಕ:1.ಕೋಟಿ 20ಲಕ್ಷ ರೂ ವೆಚ್ಚದ ಒಳಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಅಂಬಿರಾವ ಪಾಟೀಲ ಚಾಲನೆ
1.ಕೋಟಿ 20ಲಕ್ಷ ರೂ ವೆಚ್ಚದ ಒಳಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಅಂಬಿರಾವ ಪಾಟೀಲ ಚಾಲನೆ
ಗೋಕಾಕ ಫೆ 8 : ನಗರದ ಜನತೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಶಾಸಕರಾದ ರಮೇಶ ಜಾರಕಿಹೊಳಿ ಅವರು ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು.
ಬುಧವಾರದಂದು ನಗರದ ವಾರ್ಡ ನಂ11ರ ಶ್ರೀ ಬಾವಿಕರೇಮ್ಮ ದೇವಸ್ಥಾನದ ಹತ್ತಿರ ನಗರಸಭೆಯಿಂದ 1.ಕೋಟಿ 20ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಒಳಚರಂಡಿ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಯ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಬೆಳೆಯುತ್ತಿರುವ ನಗರದ ಜನತೆಗೆ ಅನುಗುಣವಾಗಿ ದೂರದೃಷ್ಠಿ ಯೋಜನೆಗಳನ್ನು ರೂಪಿಸಿ ಅವುಗಳನ್ನು ಕಾರ್ಯಗತಗೊಳಿಸಲು ಶಾಸಕರು ಶ್ರಮಿಸುತ್ತಿದ್ದಾರೆ. ಶುದ್ಧಕುಡಿಯುವ ನೀರು, ರಸ್ತೆಗಳು, ಒಳಚರಂಡಿಗಳು, ಉದ್ಯಾನವನಗಳು, ವಿದ್ಯುತ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದಾರೆ. ಅವರ ಕಾರ್ಯಗಳಿಗೆ ಜನತೆ ಬೆಂಬಲಿಸಿ ಅವರ ಕೈ ಬಲಪಡಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸ್ಥಾಯಿ ಸಮಿತಿ ಚೇರಮನ ಸಿದ್ದಪ್ಪ ಹುಚ್ಚರಾಮಪ್ಪಗೋಳ, ಸದಸ್ಯರಾದ ಶ್ರೀಶೈಲ ಯಕ್ಕುಂಡಿ, ಸಂತೋಷ ಮಂತ್ರನ್ನವರ, ಮುಖಂಡರಾದ ದುರ್ಗಪ್ಪ ಶಾಸ್ತ್ರಿಗೊಲ್ಲರ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ, ಎಸ್ ಆರ್ ನಲವಡೆ, ಬಿ ಬಿ ಕೊಪ್ಪದ, ಆರ್ ಡಿ ಖತೀಬ, ಉದಯ ಹುಕ್ಕೇರಿ, ಎಸ್ ಆರ್ ಬೊಂಗಾಳೆ, ಪವನ ಮಹಾಲಿಂಗಪೂರ, ಜ್ಯೋತಿಭಾ ಚಿಕ್ಕೊರ್ಡೆ, ಬಂಡು ಜರತಾರಕರ, ಸಂದೀಪ ಆನಗೋಳ ಸೇರಿದಂತೆ ಅನೇಕರು ಇದ್ದರು.