RNI NO. KARKAN/2006/27779|Sunday, December 22, 2024
You are here: Home » breaking news » ಗೋಕಾಕ:ಬ್ರಾಹ್ಮಣರ ಅವಹೇಳನ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ

ಗೋಕಾಕ:ಬ್ರಾಹ್ಮಣರ ಅವಹೇಳನ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ 

ಬ್ರಾಹ್ಮಣರ ಅವಹೇಳನ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ

ಗೋಕಾಕ ಫೆ 10 : ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ಚಾಮಿಯವರು ಪ್ರಹ್ಲಾದ ಜೋಶಿ ಹಾಗೂ ಇಡೀ ಬ್ರಾಹ್ಮಣ ಸಮಾಜದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದು ಅವರು ಕೂಡಲೆ ಕ್ಷಮೆ ಕೋರಬೇಕು ಎಂದು ಗೋಕಾಕ ತಾಲೂಕು  ಅಖಿಲ ಬ್ರಾಹ್ಮಣ ಸಮಾಜದವರು ಬೃಹತ್ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಶುಕ್ರವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದಂತೆ ಸಮಾಜ ಭಾಂಧವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ತಹಶೀಲ್ದಾರ ಮುಖಾಂತರ ಸರಕಾರಕ್ಕೆ ಮನವಿ ಅರ್ಪಿಸಿದರು.
ಕುಮಾರಸ್ವಾಮಿ  ಅವರು  ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡುವ ಮೂಲಕ ಸಮುದಾಯದ ಸೌಮ್ಯತೆಯ ದುರ್ಲಾಭ ಪಡೆಯುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ  ಎಚ್.ಡಿ.ಕುಮಾರಸ್ವಾಮಿ ಅವರು  ಇನ್ನು ಮುಂದೆ ಬ್ರಾಹ್ಮಣ ಸಮುದಾಯದ ನಿಂದನೆ ಬಿಟ್ಟು ಗೌರವಯುತ ರಾಜಕಾರಣ ಮಾಡಬೇಕು ಎಂದು ಪ್ರತಿಭಟನಾ ನಿರತರು ಸರಕಾವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಬಿ ಕೆ ಜೋಶಿ ಹಣಮಂತ ದೇಶಪಾಂಡೆ ಶ್ರೀಧರ್ ಮುತಾಲಿಕದೇಸಾಯಿ ಅನಿಲ ಸುಣಧೋಳಿ ಪ್ರಸನ್ನ ಕುಲಕರ್ಣಿ ಅವಿನಾಶ ಕುಲಕರ್ಣಿ ವಿಶ್ವಾಸ ಸುಣಧೋಳಿ ಕವಿತಾ ಬಾಡಗಂಡಿ ಮಂಜುಳಾ ಕುಲಕರ್ಣಿ ಲೀಲಾ ಜೋಶಿ ಪರಿಮಳ ಜೋಶಿ, ಸುಜಾತಾ ದೇಶಪಾಂಡೆ,  ರಾಹುಲ ದೇಶಪಾಂಡೆ,  ಡಾ ರಮಾಕಾಂತ ಕುಲಕರ್ಣಿ, ವಿರೇಂದ್ರ ಪದಕಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: