RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಕೆಎಲ್ಇ ಸಂಸ್ಥೆ ಗುಣಮಟ್ಟದ ಸೇವೆಯಿಂದ ಏಷ್ಯಾ ಖಂಡದಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ : ಮುರುಘರಾಜೇಂದ್ರ ಶ್ರೀ

ಗೋಕಾಕ:ಕೆಎಲ್ಇ ಸಂಸ್ಥೆ ಗುಣಮಟ್ಟದ ಸೇವೆಯಿಂದ ಏಷ್ಯಾ ಖಂಡದಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ : ಮುರುಘರಾಜೇಂದ್ರ ಶ್ರೀ 

ಕೆಎಲ್ಇ ಸಂಸ್ಥೆ ಗುಣಮಟ್ಟದ ಸೇವೆಯಿಂದ  ಏಷ್ಯಾ ಖಂಡದಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ : ಮುರುಘರಾಜೇಂದ್ರ ಶ್ರೀ

ಗೋಕಾಕ ಫೆ 11 : ಕೆಎಲ್ಇ ಸಂಸ್ಥೆ ಗುಣಮಟ್ಟದ ಸೇವೆಯಿಂದ  ಏಷ್ಯಾ ಖಂಡದಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಿದೆ ಎಂದು ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಶನಿವಾರದಂದು ನಗರದ ಕೆಎಲ್ಇ ಆಸ್ಪತ್ರೆ ಆವರಣದಲ್ಲಿ
ಇಲ್ಲಿನ ಕೆಎಲ್ಇಎಸ್ ಆಸ್ಪತ್ರೆ (ಐಸಿಯು) ಘಟಕ ನ್ಯೂರೋಸರ್ಜರಿ ವಿಭಾಗ ಕೆಎಲ್ಇಎಸ್ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಬೆಳಗಾವಿ, ಕೆಎಲ್ಇ ಇನ್ಸ್ಟ ಟ್ಯುಟ್ ಆಫ್ ನರ್ಸಿಂಗ್ ಸಾಯಸ್ಸ ಗೋಕಾಕ, ಇಡಿಯನ್ ಮೆಡಿಕಲ್ ಅಸೋಸಿಯೇಷನ್ ಗೋಕಾಕ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮೂಡಲಗಿ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಘಟಪ್ರಭಾ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಉಚಿತ ನರರೋಗ ಚಿಕ್ಸಿತಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆಎಲ್ಇ ಸಂಸ್ಥೆಯನ್ನು ಬೆಳೆಸಲು ಬಹಳಷ್ಟು ಜನರ ತ್ಯಾಗವಿದೆ. ಹಲವಾರು ಮಹಿನಯರ ದಾನಿಗಳಿಂದ  ಸ್ಥಾಪಿತವಾದ ಸಂಸ್ಥೆ  ಜನಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದರ ಸದುಪಯೋಗ ಪಡೆದುಕೊಂಡು ಕೆಎಲ್ಇ ಸಂಸ್ಥೆ ಇಂದು ಶೈಕ್ಷಣಿಕವಾಗಿ, ವೈದ್ಯಕೀಯವಾಗಿ ಉನ್ನತ ಮಟ್ಟಕ್ಕೆ ಬೆಳೆದು ನಿಂತಿದೆ. ಸಮಾಜದಲ್ಲಿ ಬಡವರ ಸೇವೆ ಮಾಡುವುದು ಬಹಳ ದೊಡ್ಡ ಕಾರ್ಯವಾಗಿದ್ದು, ಇಂದು ಕೆಎಲ್ಇ ಆಸ್ಪತ್ರೆಯವರು ಈ ಕಾರ್ಯವನ್ನು  ಮಾಡುತ್ತಿದ್ದಾರೆ. ಬಿದ್ದವರನ್ನು ಮೇಲೆತ್ತುವ ಕಾರ್ಯ ಸಮಾಜದಲ್ಲಿ ಮಾಡಬೇಕಾಗಿದೆ. ಎಲ್ಲರು ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗಬೇಕು. ಇಂತಹ ಶಿಬಿರಗಳ  ಸದುಪಯೋಗವನ್ನು ಪಡೆದುಕೊಂಡು ಆರೋಗ್ಯವಂತ ಸಮಾಜ ನಿರ್ಮಿಸಬೇಕು. ಆರೋಗ್ಯ ಮನಷ್ಯನ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸಿದೆ. ಆರೋಗ್ಯವಂತ ಮನುಷ್ಯ ಏನು ಬೇಕಾದರೂ ಸಾಧಿಸಲು ಸಾಧ್ಯ ಎಂದು ಹೇಳಿದರು.
ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಎಲ್ಇ ನಿರ್ದೇಶಕ ಜಯಾನಂದ ಮುನ್ನವಳ್ಳಿ  ಸನ್ 1996 ರಲ್ಲಿ ಪ್ರಾರಂಭವಾದ ಕೆಎಲ್ಇ ಸಂಸ್ಥೆಯಲ್ಲಿ   ಇಲ್ಲಿಯವರೆಗೆ  1 ಕೋಟಿ 35 ಲಕ್ಷ ಜನರು ಆರೋಗ್ಯ ಪರೀಕ್ಷಿಸಿದ್ದಾರೆ, 30 ಸಾವಿರ ಜನರು ಹೃದಯರೋಗ ಸಂಬಂಧಿ ಕಾಯಿಲೆಗೆ ಶಸ್ತ್ರ ಚಿಕಿತ್ಸೆ ಪಡೆದುಕೊಂಡಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಜನರು ವಿವಿಧ ಬಗೆಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿಕೊಂಡಿದ್ದಾರೆ. ದೇಶ ವಿದೇಶಗಳಿಂದ ಚಿಕಿತ್ಸೆ ಪಡೆಯಲು ಕೆಎಲ್ಇ ಆಸ್ಪತ್ರೆಗೆ ಜನ  ಬರುತ್ತಿದ್ಧಾರೆ. ಕೆಎಲ್ಇ ಆಸ್ಪತ್ರೆಯಲ್ಲಿ ಎಲ್ಲಾ ಸರಕಾರಿ ಸೌಲಭ್ಯಗಳು ಇದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇಷ್ಟೆಲ್ಲಾ ಮಾಡಿದರು ಕೆಲವರು ಕೆಎಲ್ಇ ಸಂಸ್ಥೆಯ ಬಗ್ಗೆ  ಅಪಪ್ರಚಾರ ಮಾಡುತ್ತಿರುತ್ತಾರೆ. ಅದರ ಕಡೆ ಕಿವಿಗೊಡದೆ ಆಸ್ಪತ್ರೆಯ ಎಲ್ಲಾ ಯೋಜನೆಗಳ ಲಾಭ ಪಡೆಯಬೇಕು ಎಂದು ಹೇಳಿದರು.
ವೇದಿಕೆಯಲ್ಲಿ  ಡಾ.ಕರ್ನಲ್ ದಯಾನಂದ, ಕೇಶವ್ ದೇವಾಂಗೆ , ಡಾ.ಧರೆಪ್ಪ ಚೌಗಲಾ, ಡಾ.ಪ್ರಕಾಶ ಮಹಾಂತಶೆಟ್ಟಿ ,  ಡಾ.ಚಂದನ ಪಾಟೀಲ, ಡಾ‌. ರಿಷಿಕೇಶ ಶೆಟ್ಟಿ, ಡಾ. ಅಫನಾನ್ , ಡಾ.ಪ್ರಜ್ವುಲ್ ಮಸ್ತೆ  ಉಪಸ್ಥಿತರಿದ್ದರು .

Related posts: