ಗೋಕಾಕ:ಜೆ.ಇ.ಇ ಮೇನ್ -2023 ರಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ
ಜೆ.ಇ.ಇ ಮೇನ್ -2023 ರಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ
ಗೋಕಾಕ ಫೆ 14 : ನಗರದ ಕೆಎಲ್ಇ ಸಂಸ್ಥೆಯ ಸಿ.ಎಸ್.ಅಂಗಡಿ ಪದವಿಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳು ಜೆ.ಇ.ಇ ಮೇನ್ -2023 ಸೆಸನ್ -1 ರಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿನೀಯರಾದ ಶುಬಿಕ್ಷಾ ( 98.65%), ವೈಷ್ಣವಿ ಪಾಟೀಲ (90.62%), ತಸ್ಮೀಯಾ ಅಂಕಲಗಿ ( 87.12%) , ದಿಪ್ತಿ ನಿಡೋನಿ ( 84.72%), ವೈಷ್ಣವಿ ಬರಗಾಲಿ ( 83.84%), ವಿನಾಯಕ ನಂದಿ ( 81.23%) ಅಂಕ ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಕೆಎಲ್ಇ ನಿರ್ದೇಶಕ ಜಯಾನಂದ ಮುನ್ನವಳ್ಳಿ , ಕಾಲೇಜಿನ ಆಡಳಿತಾಧಿಕಾರಿ ಜಿ.ಎಂ ಅಂದಾನಿ, ಪ್ರಾಚಾರ್ಯ ಕೆ.ಬಿ ಮೆವುಂಡಿಮಠ ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ