RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಮನುಕುಲದ ಒಳಿತಿಗಾಗಿ ಶರಣರು ನೀಡಿದ ವಚನಗಳನ್ನು ಆಚರಣೆಗೆ ತರುಬೇಕು : ತಹಶೀಲ್ದಾರ ಶ್ರೀಧರ ಮಂದಲಮನಿ

ಗೋಕಾಕ:ಮನುಕುಲದ ಒಳಿತಿಗಾಗಿ ಶರಣರು ನೀಡಿದ ವಚನಗಳನ್ನು ಆಚರಣೆಗೆ ತರುಬೇಕು : ತಹಶೀಲ್ದಾರ ಶ್ರೀಧರ ಮಂದಲಮನಿ 

ಮನುಕುಲದ ಒಳಿತಿಗಾಗಿ ಶರಣರು ನೀಡಿದ ವಚನಗಳನ್ನು ಆಚರಣೆಗೆ ತರುಬೇಕು : ತಹಶೀಲ್ದಾರ ಶ್ರೀಧರ ಮಂದಲಮನಿ

ಗೋಕಾಕ ಫೆ 18 : ಮನುಕುಲದ ಒಳಿತಿಗಾಗಿ ಶರಣರು ನೀಡಿದ ವಚನಗಳನ್ನು ಆಚರಣೆಗೆ ತರುವಂತೆ ತಹಸೀಲ್ದಾರ ಶ್ರೀಧರ ಮಂದಲಮನಿ ಹೇಳಿದರು.
ಶನಿವಾರದಂದು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯತ್, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ದಲಿತ ವಚನಕಾರರ ಜಯಂತಿ ಉತ್ಸವದಲ್ಲಿ ಪಲ್ಗೊಂಡು ಮಾತನಾಡುತ್ತಿದ್ದರು.
12ನೇ ಶತಮಾನದಲ್ಲಿ ಬಸವಣ್ಣವರ ನೇತೃತ್ವದಲ್ಲಿ ಅನೇಕ ಶರಣರು ಅನುಭವ ಮಂಟಪವನ್ನು ಸ್ಥಾಪಿಸಿ ವಚನಗಳ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದರು. ಶರಣರನ್ನು ಒಂದು ಸಮುದಾಯಕ್ಕೆ ಸಿಮೀತ ಗೊಳಿಸದೆ ಎಲ್ಲರೂ ಅವರು ನೀಡಿದ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂದಿನ ಯುವ ಪಿಳಿಗೆ ಕಾಯಕದಲ್ಲಿ ಗುರುತಿಸಿಕೊಂಡು ಗೌರವಾನ್ವಿತ ವ್ಯಕ್ತಿಗಳಾಗಿ ಸಮಾನತೆ ಸಮಾಜ ನಿರ್ಮಾಣಕ್ಕೆ ಶ್ರಮಿಸುವಂತೆ ಹೇಳಿದರು.
ಅತಿಥಿಗಳಾಗಿ ಆಗಮಿಸಿದ ಬಿಳಗಿಯ ಅಖಿಲ ಕರ್ನಾಟಕ ಶರಣ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಗುರುರಾಜ ಲೂಥಿ ಮಾತನಾಡಿ ಸಕಲ ಜೀವಿಗಳಿಗೆ ಒಳ್ಳೆಯದನ್ನು ಬಯಸುವವರೆ ಶರಣರು. ಸಾಮಾನ್ಯರನ್ನು ಅಸಮಾನ್ಯರನ್ನಾಗಿ ಮಾಡುವುದೆ ಶರಣ ಸಂಸ್ಕೃತಿ ಕಾಯಕದಲ್ಲಿ ದೇವರ ದರ್ಶನ ಪಡೆದು ಆತ್ಮಾನಂದವನ್ನು ರೂಪಿಸಿಕೊಂಡ ಶರಣರ ಸಂದೇಶಗಳು ಮನುಕುಲಕ್ಕೆ ದಾರಿದೀಪವಾಗಿವೆ ಎಂದರು.
ಜಯಂತಿ ಉತ್ಸವವನ್ನು ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಜನಪದ ಕಲಾವಿದರನ್ನು ಸತ್ಕರಿಸಲಾಯಿತು.
ವೇದಿಕೆಯಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ವ್ಹಿ.ಕಲ್ಲಪ್ಪನವರ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಪಿಎಸ್ಐ ಕೆ ವಾಲಿಕರ ಮುಖಂಡರಾದ ಬಾಳೇಶ್ ಸಂತವ್ವಗೋಳ, ಗೋವಿಂದ ಕಳ್ಳಿಮನಿ, ಬಬಲೆಪ್ಪಾ ಮಾದರ , ರವಿ ಕುದರಿ, ವಿರಭದ್ರ ಮೈಲನ್ನವರ, ಸತೀಶ ಹರಿಜನ, ಓಂಕಾರಪ್ಪ ಬಂಡಿವಡ್ಡರ,ಸುಂದ್ರವ್ವ ಕಟ್ಟಿಮನಿ ಇದ್ದರು.

Related posts: