RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ನಗರಸಭೆಯ 2023 ಹಾಗೂ 2024ನೇ ಸಾಲಿನ 7 ಲಕ್ಷ 32 ಸಾವಿರ ರೂಗಳ ಉಳಿತಾಯದ ಬಜೆಟ್ ಮಂಡನೆ

ಗೋಕಾಕ:ನಗರಸಭೆಯ 2023 ಹಾಗೂ 2024ನೇ ಸಾಲಿನ 7 ಲಕ್ಷ 32 ಸಾವಿರ ರೂಗಳ ಉಳಿತಾಯದ ಬಜೆಟ್ ಮಂಡನೆ 

ನಗರಸಭೆಯ 2023 ಹಾಗೂ 2024ನೇ ಸಾಲಿನ 7 ಲಕ್ಷ 32 ಸಾವಿರ ರೂಗಳ ಉಳಿತಾಯದ ಬಜೆಟ್ ಮಂಡನೆ

ಗೋಕಾಕ ಫೆ 24 : ನಗರಸಭೆಯ 2023 ಹಾಗೂ 2024ನೇ ಸಾಲಿನ 7 ಲಕ್ಷ 32 ಸಾವಿರ ರೂಗಳ ಉಳಿತಾಯದ ಬಜೆಟ್ ನ್ನು ಪೌರಾಯುಕ್ತ ಶಿವಾನಂದ ಹಿರೇಮಠ ಅವರು ಶುಕ್ರವಾರದಂದು ನಗರಾಧ್ಯಕ್ಷ ಜಯಾನಂದ ಹುಣಚ್ಯಾಳಿ ಅವರ ಅಧ್ಯಕ್ಷೆತೆಯಲ್ಲಿ ನಡೆದ ಸಭೆಯಲ್ಲಿ ಮಂಡಿಸಿದರು .
ನಗರದ ಸ್ವಚ್ಛತೆಗಾಗಿ 19 ಜನ ಪೌರಕಾರ್ಮಿಕರ ನೇಮಕವಾಗಲಿದ್ದು, ಉಳಿದ ಕಾರ್ಮಿಕರನ್ನು ಹೊರಗುತ್ತಿಗೆ ಹಾಗೂ ನೆರ ಪಾವತಿ ಆಧಾರದ ಮೇಲೆ ಸೇವೆಯನ್ನು ಪಡೆಯುವ ಉದ್ದೇಶಕ್ಕೆ 3.84 ಕೋಟಿ ರೂಗಳ ಅವಶ್ಯ ವಿರುವುದಾಗಿ ತಿಳಿಸಿದರು.
ನಗರಸಭೆಯ ಲೆಕ್ಕ ಅಧಿಕ್ಷರಾದ ಎಂ.ಎನ್.ಸಾಗರೇಕರ ಇವರು 40.78 ಕೋಟಿ ರೂಗಳ ಆಯ ಮತ್ತು 40.70 ಕೋಟಿ ರೂಗಳ ವ್ಯಯವುಳ್ಳ ಅಂದಾಜು ವ್ಯಯವನ್ನು ವಿಶ್ಲೇಷಣೆ ಮಾಡುತಾ ನಗರದಲ್ಲಿ ಎಚ್.ಎಫ್.ಸಿ ವಿಶೇಷ ಅನುದಾನದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡೆಸಲು 19 ಕೋಟಿ ರೂಗಳನ್ನು ಖರ್ಚು ಮಾಡಲಾಗಿದ್ದು, ಬಾಕಿ 6 ಕೋಟಿ ರೂಗಳ ಕಾಮಗಾರಿಗಳನ್ನು ಬರುವ ಆರ್ಥಿಕ ವರ್ಷದಲ್ಲಿ ಪೂರ್ಣಗೊಳಿಸಲಾಗುವದು.
3 ಕೋಟಿ ರೂಗಳ ಅನುದಾನದಲ್ಲಿ 1 ಕೋಟಿ ರೂ ವೆಚ್ಚದ ವಾಣಿಜ್ಯ ಮಳಿಗೆಗಳ ಕಾಮಗಾರಿ ಮುಕ್ತಾಯಗೊಂಡಿದ್ದು, ಉಳಿದ ಕಾಮಗಾರಿಯನ್ನು ಮುಂದಿನ ವರ್ಷದಲ್ಲಿ ಮುಗಿಸಲಾಗುವದು. 15 ನೇ ಹಣಕಾಸು ಯೋಜನೆ ಒಳಗೊಂಡಂತೆ ರಸ್ತೆ, ಚರಂಡಿ, ಬೀದಿ ದೀಪ , ಉದ್ಯಾನವನ, ನೀರು ಸರಬರಾಜು, ಒಳಚರಂಡಿ ಇತ್ಯಾದಿ ಕಾಮಗಾರಿಗಳಿಗಾಗಿ ಆಯವ್ಯಯದಲ್ಲಿ 12.78 ಕೋಟಿ ರೂಗಳ ಕಾಮಗಾರಿಗಳನ್ನು ಪ್ರಸ್ತಾಪಿಸಲಾಗಿದೆ. ಶೇಕಡಾ 24.10% , 7 25  ಮತ್ತು 5ದರ ವಿಭಾಗಗಳಲ್ಲಿ ರೂ 28 ಲಕ್ಷ ಅಂದಾಜು ಖರ್ಚುಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬಸವರಾಜ ಆರೆನ್ನವರ, ಸ್ಥಾಯಿ ಸಮಿತಿ ಚೆರಮನ್ ಸಿದ್ದಪ್ಪ ಹುಚ್ಚರಾಮಗೋಳ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರುಗಳಾದ ವ್ಹಿ.ವಾಯ್.ಪಾಟೀಲ, ಎಂ.ಎಚ್.ಗಜಾಕೋಶ ಹಾಗೂ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

Related posts:

ಗೋಕಾಕ:ಕೊರೋನಾ ವೈರಸ ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ವಿವಿಧ ಇಲಾಖೆಗಳ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯ : ಅಮರನಾಥ್

ಬೆಂಗಳೂರು:ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಎಂಎಫ್‍ನಿಂದ ಅರಿಸಿನ ಮಿಶ್ರಿತ ಹಾಲು ಬಿಡುಗಡೆ : ಕೆಎಂಎಫ್ ಅಧ್ಯಕ್ಷ ಬಾಲಚಂ…

ಗೋಕಾಕ:ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸ…