ಗೋಕಾಕ:ಕೆಎಲ್ಇ ಸಂಸ್ಥೆ ಜನತೆಯ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿ ಸೇವಾ ಮನೋಭಾವದಿಂದ ಶ್ರಮಿಸುತ್ತಿದೆ : ಜಯಾನಂದ ಮುನ್ನವಳ್ಳಿ
ಕೆಎಲ್ಇ ಸಂಸ್ಥೆ ಜನತೆಯ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿ ಸೇವಾ ಮನೋಭಾವದಿಂದ ಶ್ರಮಿಸುತ್ತಿದೆ : ಜಯಾನಂದ ಮುನ್ನವಳ್ಳಿ
ಗೋಕಾಕ ಫೆ 25: ಕೆಎಲ್ಇ ಸಂಸ್ಥೆ ಜನತೆಯ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಿ ಸೇವಾ ಮನೋಭಾವದಿಂದ ಶ್ರಮಿಸುತ್ತಿದೆ ಎಂದು ಕೆಎಲ್ಇ ನಿರ್ದೇಶಕ ಜಯಾನಂದ ಮುನ್ನವಳ್ಳಿ ಹೇಳಿದರು.
ಶನಿವಾರದಂದು ನಗರದ ಕೆಎಲ್ಇ ಇನಸ್ಟೂಟ ಆಫ್ ನಸಿರ್ಂಗ್ ಸೈಯಿನ್ಸನ ಸಭಾಂಗಣದಲ್ಲಿ ಕೆಎಲ್ಇ ಆಸ್ಪತ್ರೆ ಅವರು ಆಯೋಜಿಸಿದ್ದ ಬಡ ಮಕ್ಕಳಿಗೆ ಉಚಿತ ಚಿಕಿತ್ಸೆ ಹಾಗೂ ಅವರಿಗೆ ಸಹಾಯಧನ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೆಎಲ್ಇ ಸಂಸ್ಥೆ ಕಡು ಬಡ ರೋಗಿಗಳಿಗೆ ತುರ್ತಾಗಿ ಸ್ವಂದಿಸಿ ಅವರಿಗೆ ಉಚಿತ ಚಿಕಿತ್ಸೆ ನೀಡಿ ಗುಣಪಡಿಸುತ್ತಿದೆ. ಸಂಸ್ಥೆಯಲ್ಲಿ ಅಯ್ಯೂಷಮಾನ ಭಾರತ ಯೋಜನೆಯಡಿ 5 ಲಕ್ಷದವರೆಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವದು. ಜನತೆ ಇದರ ಸದುಪಯೋಗ ಪಡೆದುಕೊಂಡು ಆರೋಗ್ಯವಂತರಾಗಿ ಎಂದರು.
ಚಿಕ್ಕ ಮಕ್ಕಳ ತಜ್ಞ ಅರುಣ್ ವಣ್ಢೂರ ಮಾತನಾಡಿ 5 ವರ್ಷದ ಹಿಂದೆ ಪ್ರಾರಂಭವಾದ ಚಿಕ್ಕ ಮಕ್ಕಳ ಚಿಕ್ಸಿತಾಲಯ ಕಡಿಮೆ ತೂಕದ 300 ಮಕ್ಕಳಿಗೆ ಚಿಕಿತ್ಸೆ ನೀಡಿ ಆರೋಗ್ಯವಂತರಾಗಿಸಿದೆ. 3 ಸಾವಿರ ಹಾವು ಕಚ್ಚಿದವರ ಜೀವ ಉಳಿಸಲಾಗಿದೆ. ಬೆಳಗಾವಿ ಆಸ್ಪತ್ರೆಯ ತಜ್ಞ ವೈದ್ಯರು ನಗರದ ಆಸ್ಪತ್ರೆಗೆ ಬೇಟಿನೀಡಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೋ. ಚಂದ್ರಶೇಖರ್ ಅಕ್ಕಿ, ಪ್ರಾಚಾರ್ಯ ಈರಣ್ಣ ಕಜಗಾರ, ಉಪನ್ಯಾಸಕ ಆನಂದ ಪಾಟೀಲ ಇದ್ದರು.