ಗೋಕಾಕ:ಶರಣ ಸಂಸ್ಕೃತಿ ಉತ್ಸವ ತನ್ನದೆ ಆದ ಮಹತ್ವ ಹೊಂದಿ ಇಡಿ ರಾಜ್ಯ ಮತ್ತು ದೇಶದ ಗಮನ ಸೆಳೆಯುತ್ತಿದೆ : ಅಶೋಕ ಪೂಜಾರಿ
ಶರಣ ಸಂಸ್ಕೃತಿ ಉತ್ಸವ ತನ್ನದೆ ಆದ ಮಹತ್ವ ಹೊಂದಿ ಇಡಿ ರಾಜ್ಯ ಮತ್ತು ದೇಶದ ಗಮನ ಸೆಳೆಯುತ್ತಿದೆ : ಅಶೋಕ ಪೂಜಾರಿ
ಗೋಕಾಕ ಮಾ 1 : ಶರಣ ಸಂಸ್ಕೃತಿ ಉತ್ಸವ ತನ್ನದೆ ಆದ ಮಹತ್ವ ಹೊಂದಿದ್ದು, ಇಡಿ ರಾಜ್ಯ ಮತ್ತು ದೇಶದ ಗಮನ ಸೆಳೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಪೂಜಾರಿ ಹೇಳಿದರು .
ಬುಧವಾರದಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾ ಪೀಠದ ಆವರಣದಲ್ಲಿ ಇಲ್ಲಿನ ಶೂನ್ಯ ಸಂಪಾದನ ಮಠದ 18 ನೇ ಶರಣ ಸಂಸ್ಕೃತಿ ಉತ್ಸವದ ಷಟಸ್ಥಲ ಧ್ವಜಾರೋಹಣವನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಳೆದ 18 ವರ್ಷದಿಂದ ಧರ್ಮ ,ಸಂಸ್ಕೃತಿ, ಬದುಕು ಹಾಗೂ
ಮಾನವೀಯ ಮೌಲ್ಯಗಳನನ್ನು ಒಳಗೊಂಡ ಅರ್ಥಪೂರ್ಣ ಚಿಂತನೆಯೊಂದಿಗೆ ಈ ಉತ್ಸವ ದೇಶಾದ್ಯಂತ ಪ್ರಸಿದ್ಧಿ ಪಡೆಯುತ್ತಿದೆ. ಸಮಾಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟುಕೊಂಡು ಶ್ರೀಮಠವನ್ನು ಬೆಳೆಸುತ್ತಿರುವ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಕಾರ್ಯ ಮಾದರಿಯಾಗಿದ್ದು, ಇಂತಹ ಕಾರ್ಯಗಳೊಂದಿಗೆ ಈ ಉತ್ಸವ ದೇಶದಲ್ಲೇ ಅದ್ಬುತ ಸ್ಥಾನ ಪಡೆಯಲಿ ಎಂದು ಹಾರೈಸಿದರು.
ಶ್ರೀಗಳು ಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಶ್ರೀಮಠದ ಪರಂಪರ ,ಸಂಸ್ಕೃತಿ ಜೊತೆಗೆ ಸಾಮಾಜಿಕ ಹೋರಾಟಗಳ ಮೂಲಕ ಸಮಾಜದ ಹಿತವನ್ನು ಕಾಪಾಡುತ್ತಿದ್ದಾರೆ. ಆಧ್ಯಾತ್ಮ , ಧರ್ಮ ಉಳಿಯಬೇಕು ಎಂಬ ಯೋಜನೆ ಮತ್ತು ಯೋಚನೆ ಶ್ರೀಗಳು ಹೊಂದಿದ್ದಾರೆ ಎಂದ ಅವರು ಈ ಶರಣ ಸಂಸ್ಕೃತಿ ಉತ್ಸವ ಗೋಕಾಕ ನಾಡಿಗೆ ಒಂದು ಗರಿಮೆ ಮುಂದಿನ ದಿನಗಳಲ್ಲಿ ಇದು ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.
ಷಟಸ್ಛಲ ಧ್ವಜಾರೋಹಣವನ್ನು ಕಾಂಗ್ರೆಸ್ ಮುಖಂಡ ಚಂದ್ರಶೇಖರ್ ಕೊಣ್ಣೂರ ಅವರು ನೆರವೇರಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ನಮ್ಮ ವಿಚಾರಗಳು ಆಕಾಶ ದೇತ್ತರಕ್ಕೆ ಹಾರಾಡಲಿ ಎಂಬ ವಿಚಾರದಿಂದ ಷಟಸ್ಛಲ ಧ್ವಜಾರೋಹಣ ಮಾಡಲಾಗಿದೆ. ಇಡೀ ಮನಕುಲಕ್ಕೆ ಬಸವ ಸಿದ್ದಾಂತ ದಾರಿದೀಪವಾಗಿದೆ. ಎಲ್ಲರಲ್ಲಿಯು ಸಮಾನತೆ ಕಾಣುವ ಧರ್ಮವನ್ನು ಎತ್ತಿ ಹಿಡಿಯಬೇಕಾಗಿದೆ. ಲಿಂಗಾಯತ ಧರ್ಮದ ತತ್ವ ಸಿದ್ದಾಂತದ ಪ್ರಕಾರ ಷಟಸ್ಛಲ ಧ್ವಜಾರೋಹಣ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಾಗಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಶ್ರಮಿಸಬೇಕು.
ಕಾರ್ಯಕ್ರಮಕ್ಕಿಂತ ಪೂರ್ವದಲ್ಲಿ ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಪಿಎಸ್ಐ ಎಂ.ಡಿ.ಘೋರಿ ಅವರು ಅರಿವು, ಅಕ್ಷರ , ಆರೋಗ್ಯ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಇಲ್ಲಿನ ಮುಪ್ಪಯ್ಯನ ಮಠದ ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳು ವಹಿಸಿದ್ದರು.
ವೇದಿಕೆಯಲ್ಲಿ ಉತ್ಸವ ಸಮಿತಿಯ ಅಧ್ಯಕ್ಷ ಜಯಾನಂದ ಮುನವಳ್ಳಿ, ಕಾರ್ಯದರ್ಶಿ ರಾಜು ಬೈರುಗೋಳ, ಸದಾಶಿವ ಗುದಗಗೋಳ, ವಿಜಯಲಕ್ಷ್ಮಿ ಹಿರೇಮಠ ಉಪಸ್ಥಿತರಿದ್ದರು.