ಗೋಕಾಕ : ಘಟ್ಟಿ ಬಸವಣ್ಣ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಚಾಲನೆ
ಘಟ್ಟಿ ಬಸವಣ್ಣ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಚಾಲನೆ
ಗೋಕಾಕ ಮಾ 1 : 969ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಭಾಗದ ಮಹತ್ವಕಾಂಕ್ಷಿಯ ಘಟ್ಟಿ ಬಸವಣ್ಣ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಶಾಸಕ ರಮೇಶ ಜಾರಕಿಹೊಳಿ ಅವರು ಸಾಮಾನ್ಯ ವ್ಯಕ್ತಿಯ ಕಡೆಯಿಂದ ಚಾಲನೆ ನೀಡಿಸಿದರು.
ಬುಧವಾರದಂದು ನಗರದ ಹೊರವಲಯದ ಸ್ವತಃ ತಾವೇ ಚಾಲನೆ ನೀಡಬೇಕಾಗಿತ್ತು ಆದರೆ ಶಾಸಕರು ಹಾಲುಮತ ಸಮಾಜದ ಸಾಮಾನ್ಯ ಪ್ರಜೆ ದೇವಪ್ಪ ಗುಡಗುಡಿ ಅವರಿಂದ ಚಾಲನೆ ನೀಡಿಸಿ ಸೇರಿದ್ದ ಜನತೆಯನ್ನು ಅಚ್ಚರಿಗೊಳಿಸುವಂತೆ ಮಾಡಿದರು.
ಮಾಕರ್ಡಂಯ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಘಟ್ಟಿ ಬಸವಣ್ಣ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಶಾಸಕರು ವಿಶೇಷ ಮಹತ್ವ ನೀಡಿದ್ದರು. ಬುಧವಾರ ಬೆಳಗ್ಗೆ ಏಳು ಗಂಟೆಗೆ ವಿಶೇಷ ಹೋಮ-ಹವನ ಪೂಜೆಗಳೊಂದಿಗೆ ಅಡಿಗಲ್ಲು ಸಮಾರಂಭ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ ಅವರು, ಇಂದು ಗೋಕಾಕ ಜನತೆಗೆ ಶುಭದಿನವಾಗಿದೆ. ಮಹತ್ವಾಕಾಂಕ್ಷಿ ಯೋಜನೆಗೆ ಅಡಿಗಲ್ಲು ಪೂಜೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಗೋಕಾಕ ತಾಲೂಕು ಸೇರಿದಂತೆ ಇತರ ತಾಲೂಕಿನ ಜನತೆಗೂ ಈ ಯೋಜನೆಯಿಂದ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗಲಿದೆ. ಈ ಭಾಗ ಮುಂದಿನ ದಿನಗಳಲ್ಲಿ ನೀರಾವರಿಯಿಂದ ಸಮೃದ್ದಿಪಡೆಯಲಿದೆ ಎಂದು ಹೇಳಿದರು.
ಈಗಾಗಲೇ ಈ ಜಲಾಶಯದಿಂದ ಮುಳುಗಡೆಯಾಗುವ ಯೋಗಿಕೊಳ್ಳ ಗ್ರಾಮದ ಮನೆಗಳ ಪುನರ್ವಸತಿ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅತಿ ಶೀಘ್ರದಲ್ಲೆ ಈ ಭಾಗದ ಜನರಿಗೆ ಪುನರ್ವಸತಿ ಕಲ್ಪಿಸಲಾಗುವದು. ಈ ಜಲಾಶಯದಿಂದ ಕುಡಿಯುವ ನೀರು ಜತೆಗೆ ಗೋಕಾಕ ಮತಕ್ಷೇತ್ರ ಸಂಪೂರ್ಣವಾಗಿ ನೀರಾವರಿ ಕ್ಷೇತ್ರವಾಗಲಿದೆ. ಜಲಾಶಯ ನಿರ್ಮಾಣ ಕಾಮಗಾರಿಯೂ ಸಹ ಅತಿಶೀಘ್ರವೇ ಪ್ರಾರಂಭಗೊಳ್ಳಲಿದ್ದು ಸಾರ್ವಜನಿಕರು ಸಹಕರಿಸುವಂತೆ ವಿನಂತಿಸಿದರು.
ಶಾಶ್ವತ ಕುಡಿಯುವ ನೀರು, ಜಲ ವಿದ್ಯುತ್ ಉತ್ಪಾದನೆ, ಅಂತರ್ಜಲ ಮಟ್ಟ ಹೆಚ್ಚಳ, ಅರಣ್ಯ ಪ್ರದೇಶ ಅಭಿವೃದ್ಧಿ, ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಘಟ್ಟಿ ಬಸವಣ್ಣ ಜಲಾಶಯ ಪೂರಕವಾಗಲಿದೆ. ಈ ಭಾಗದ ಜನತೆಯ ಬಹುದಿನಗಳ ಕನಸು ಇಂದು ನನಸಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.
ಗೋಕಾಕ ಮತಕ್ಷೇತ್ರದಲ್ಲಿ ನೀರಾವರಿಗೆ ಸಂಬಂಧಪಟ್ಟ ಬ್ರೀಡ್ಜ್ ಕಂ ಬ್ಯಾರೇಜ್ ಕಾಮಗಾರಿ, ನಗರದ ಮತ್ತು ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಗೋಕಾಕ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸುತ್ತಿರುವದಾಗಿ ತಿಳಿಸಿದರು.
ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ, ಕೆಎಮ್ಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಸ್ಥಾಯಿ ಸಮಿತಿ ಚೇರಮನ ಸಿದ್ದಪ್ಪ ಹುಚ್ಚರಾಮಗೋಳ, ಜಿಪಂ ಮಾಜಿ ಸದಸ್ಯ ಟಿ.ಆರ್.ಕಾಗಲ, ಭೀಮಗೌಡರ ಪೆÇಲೀಸ್ಗೌಡರ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮಣ್ಣವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರಸಭೆ ಸದಸ್ಯರುಗಳಾದ ಕುತ್ಬುದ್ದಿನ ಗೋಕಾಕ, ಅಬ್ಬಾಸ ದೇಸಾಯಿ, ಶಿವಪ್ಪ ಗುಡ್ಡಾಕಾಯು, ಮುಖಂಡರುಗಳಾದ ಹನಮಂತ ದುರ್ಗನ್ನವರ, ಕಾಂತು ಎತ್ತಿನಮನಿ, ರಾಮಣ್ಣ ಹುಕ್ಕೇರಿ, ಪುಂಡಲೀಕ ವಣ್ಣೂರ, ನೀರಾವರಿ ಇಲಾಖೆಯ ಎಕ್ಸ್ಯೂಟಿವ್ ಇಂಜನಿಯರ್ ವೆಂಕಪ್ಪ ಶೇಗುಣಸಿ, ಎಇಇ ಕಣ್ಣೂರಕರ, ಎಇ ಕೊಟಬಾಗಿ, ಅರಣ್ಯ ಇಲಾಖೆ ಡಿಎಫ್ಓ ಆಂಥೋಣಿ ಮರಿಯಪ್ಪ, ಎಸಿಎಫ್ ರಾಜೇಶ್ವರಿ ಈರನಟ್ಟಿ, ಉಪಸ್ಥಿತರಿದ್ದರು.