ಗೋಕಾಕ:ದೇಶದಲ್ಲಿ ಇಂದು ಜೀವನ ಶೈಲಿ ಆಧಾರಿತ ರೋಗಗಳು ಹೆಚ್ಚಾಗಿವೆ : ಡಾ.ಸಿ.ಎನ್.ಮಂಜುನಾಥ್ ಅಭಿಮತ
ದೇಶದಲ್ಲಿ ಇಂದು ಜೀವನ ಶೈಲಿ ಆಧಾರಿತ ರೋಗಗಳು ಹೆಚ್ಚಾಗಿವೆ : ಡಾ.ಸಿ.ಎನ್.ಮಂಜುನಾಥ್ ಅಭಿಮತ
ಗೋಕಾಕ ಮಾ 2 : ದೇಶದಲ್ಲಿ ಇಂದು ಜೀವನ ಶೈಲಿ ಆಧಾರಿತ ರೋಗಗಳು ಹೆಚ್ಚಾಗಿವೆ ಎಂದು ಬೆಂಗಳೂರಿನ ಜಯದೇವ ಆಸ್ಪತ್ರೆಯ ವೈದ್ಯ ಡಾ.ಸಿ.ಎನ್.ಮಂಜುನಾಥ ಹೇಳಿದರು.
ಗುರುವಾರದಂದು ನಗರದ ಚನ್ನಬಸವೇಶ್ವರ ವಿದ್ಯಾ ಪೀಠದ ಆವರಣದಲ್ಲಿ ಶೂನ್ಯ ಸಂಪಾದನ ಮಠದ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡ 18ನೇ ಶರಣ ಸಂಸ್ಕೃತಿ ಉತ್ಸವದ ದ್ವಿತೀಯ ದಿನದ ವೈದ್ಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಪೂರ್ಣ ಆರೋಗ್ಯವಂತರೆ ನಿಜವಾದ ಶ್ರೀಮಂತರು.ನಾಲಿಗೆ ಚನ್ನಾಗಿದ್ದರೆ ಪ್ರಪಂಚ ನಿಮ್ಮನ್ನು ಪ್ರೀತಿಸುತ್ತದೆ. ಕಾಲ ಬದಲಾಗಿಲ್ಲ ಜನರ ಜೀವನ ಶೈಲಿ ಬದಲಾಗಿದೆ ಅದರಿಂದ ಜನರಲ್ಲಿ ಅನಾರೋಗ್ಯ ಹೆಚ್ಚಾಗುತ್ತಿದೆ
ಮಕ್ಕಳ ಮತ್ತು ತಾಯಂದಿರ ಒತ್ತಡ ಕಡಿಮೆ ಗೋಳಿಸಲು ಶಾಲಾ ವೇಳಾಪಟ್ಟಿಯನ್ನು ಬದಲಾಯಿಸಬೇಕಾಗಿದೆ. ಇದರ ಬಗ್ಗೆ ಸರಕಾರ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ವೈದ್ಯರಿಗೆ ತಾಯಿ ಹೃದಯ ಇರಬೇಕು. ರೋಗಿಗಳಿಗೆ ಚಿಕಿತ್ಸೆಯೊಂದಿಗೆ ಅವರಲ್ಲಿ ಆತ್ಮಸ್ಥೈರ್ಯವನ್ನು ತುಂಬಬೇಕು.ಅವಶ್ಯಕತೆ ಇದ್ದಷ್ಟು ಚಿಕಿತ್ಸೆ ಕೊಡಬೇಕು.ರೋಗಿಗಳ ಸೇವೆಯಲ್ಲಿ ದೇವರನ್ನು ಕಾಣಬೇಕು ಎಂದ ಅವರು ಮಕ್ಕಳಿಗೆ ಒತ್ತಡ ರಹಿತ ಜೀವನವನ್ನು ಸಾಗಿಸುವಲ್ಲಿ ನಾವು ಶ್ರಮಿಸಬೇಕಾಗಿದೆ. ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಆರೋಗ್ಯ ಕೆಡುತ್ತಿರುವುದು ಆಘಾತಕಾರಿ ವಿಷಯವಾಗಿದೆ. ದೇಹವನ್ನು ಸಾಧನೆ ,ಒಳ್ಳೆಯ ಕಾರ್ಯ ಮಾಡುವ ಮೂಲಕ ಸವಿಸಬೇಕು. ಸಾಧನೆಗೆ ಯಾವತ್ತು ಸಾವಿಲ್ಲ . ಜೀವನದಲ್ಲಿ ಇಟ್ಟು ಹೋಗಬೇಕು ಅಥವಾ ಬಿಟ್ಟುಹೋಗಬೇಕಾಗಿದೆ.
ಸಮಾಜಮುಖಿ ಕೆಲಸ ಮಾಡುವವರು ಮತ್ತು ಪರರ ಬಗ್ಗೆ ಕಾಳಜಿ ಮಾಡುವ ಮೂಲಕ ಸಮಾಜವನ್ನು ಕಟ್ಟಬೇಕಾಗುತ್ತದೆ. ಸಂಪತನಲ್ಲಿ ಸರಳತೆ ಇರಬೇಕು.ಬೇರೆಯವರ ನೋವು ಅರ್ಥಮಾಡಿಕೊಂಡರೆ ಬದುಕು ಸಾರ್ಥಕ ಎಂದ ಅವರು
ಮನುಷುತ್ವ ಮತ್ತು ಧೈವತತ್ವದ ಕೆಲಸವನ್ನು ಗೋಕಾಕಿನ ಶ್ರೀ ಶೂನ್ಯ ಸಂಪಾದನ ಮಠ ಮಾಡುತ್ತಿದೆ.
ಭಾರತ ದೇಶದಲ್ಲಿ ಸಾಕ್ಷರತೆ ಜಾಸ್ತಿಇದೆ. 1947 ರಲ್ಲಿ ಸಾಕ್ಷರತೆ ಕೆಲವ 12% ಇಂದು 70% ಇದೆ. ಸಾಕ್ಷರತೆ ಜಾಸ್ತಿಯಾದರೂ ಸಂಸ್ಕಾರ ಕಡಿಮೆಯಾಗಿದೆ. ಶ್ರೀಮಠದಿಂದ ಸಮಾಜಕ್ಕೆ ಅದ್ಬುತವಾದ ಜ್ಞಾನವನ್ನು ನೀಡುತ್ತಿದೆ. ಶ್ರೀಮಠ ರಾಜ್ಯದಲ್ಲಿ ವೈಶಿಷ್ಟ್ಯತೆಯಿಂದ ಕೊಡಿದೆ. ರಾಜ್ಯದಲ್ಲಿ ಸಾಕ್ಷರತೆ ಹೆಚ್ಚಾಗುವಲ್ಲಿ ಮಠಗಳ ಪಾತ್ರ ಮಹತ್ವದವಾಗಿದೆ. ಜನರ ಆಚಾರ ವಿಚಾರಗಳು ಬದಲಾಗಿವೆ. ನಗರ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಮನೆಗಳೂ ಇದ್ದರು ಸಹ ಕಡಿಮೆ ಜನರ ವಾಸಸಿಸುತ್ತೇವೆ. ಅವಶ್ಯಕತೆ ಇದ್ದಾಗ ಮಾತ್ರ ನಾವು ಸಂಬಂಧಗಳನ್ನು ಬೆಳೆಸುತ್ತಿದ್ದೇವೆ ಅದು ನಿಲ್ಲಬೇಕು. ಜೀವನದಲ್ಲಿ ಕೋಪ ಮಾಡಬಾರದು. ಕೋಪ ಮಾಡಿದರೆ ಮನುಷ್ಯನ ಆರೋಗ್ಯದ ಮೇಲೆ ವ್ಯತರಿಕ್ತ ಪರಿಣಾಮ ಬಿರುತ್ತದೆ. ಜೀವನದಲ್ಲಿ ಅಳಸಿದನ್ನು ದಾನಮಾಡದೆ ಉಳಿಸಿದನ್ನು ದಾನ ಮಾಡಿ ಸಮಾಜವನ್ನು ಗಟ್ಟಿಯಾಗಿ ಕಟ್ಟಬೇಕು ಎಂದು ಹೇಳಿದರು.
ನಗರದ ಸಾಹಿತಿ ಪತ್ರಕರ್ತ ರಚಿಸಿದ ಕರವೇ ಪಯಣ ಮತ್ತು ಕನ್ನಡವೇ ಸತ್ಯ ಗ್ರಂಥಗಳನ್ನು ಗೋವಾ ರಾಜ್ಯದ ಕ.ಸಾ.ಪ ಅಧ್ಯಕ್ಷ ಸಿದ್ದಣ್ಣ ಮೆಟಿ ಲೋಕಾರ್ಪಣೆ ಮಾಡಿದರು.
ಕರವೇ ಪಯಣ ಮತ್ತು ಕನ್ನಡವೇ ನಿತ್ಯ ಗ್ರಂಥದ ಕುರಿತು ಮಾತನಾಡಿದ ಡಾ.ಸಿ.ಕೆ ನಾವಲಗಿ ಕನ್ನಡದ ಭಾವುಟವನ್ನು ನಾಡಿನ ಎತ್ತರಕ್ಕೆ ಹಾರಿಸಿ ಕನ್ನಡವನ್ನು ಉಳಿಸಿ ಬೆಳೆಸಿದ ಮಹತ್ತರ ಕಾರ್ಯಗಳನ್ನು ಕರವೇ ಪಯಣ ಪುಸ್ತಕದಲ್ಲಿ ಇದೆ. ಈ ಪುಸ್ತಕ ರಾಜ್ಯದ ಇತಿಹಾಸದ ಪುಟಗಳಲ್ಲಿ ಸೇರಿದೆ.ಕಳಸಾ ಬಂಡೂರಿ, ಮಹಾದಾಯಿ, ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ ನೀಡುವ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಕರವೇ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಹೀಗೆ ಹತ್ತು ಹಲವು ಕಾರ್ಯಗಳನ್ನು ಮಾಡಿರುವ ದಾಖಲೆಯನ್ನು ಸಾರುವ ಪುಸ್ತಕ ಕರವೇ ಪಯಣ ಎಲ್ಲ ಕನ್ನಡಿಗರಿಗೆ ಮಾದರಿಯಾಗಿದೆ ಎಂದು ಡಾ.ಸಿ.ಕೆ ನಾವಲಗಿ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಜಮಖಂಡಿ ಓಲೆಮಠದ ಡಾ.ಅಭಿನವಕುಮಾರ ಚೆನ್ನಬಸವ ಮಹಾಸ್ವಾಮಿಗಳು ಮತ್ತು ಘಟಪ್ರಭಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಆರ್ಶಿವರ್ಚನ ನೀಡಿದರು.
ಇದೆ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಗೌರವ ಸನ್ಮಾನ ಮಾಡಲಾಯಿತು.
ವೇದಿಕೆಯಲ್ಲಿ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಬಟಕುರ್ಕಿಯ ಬಸವಲಿಂಗ ಸ್ವಾಮಿಗಳು, ಸಮಿತಿ ಅಧ್ಯಕ್ಷ ಜಯಾನಂದ ಮುನವಳ್ಳಿ, ಡಾ.ವಿಶ್ವನಾಥ್ ಶಿಂಧೋಳಿಮಠ, ಡಾ.ಮಹಾಂತೇಶ ಕಡಾಡಿ, ರಾಮಪ್ಪ ಗೋರೋಶಿ ಉಪಸ್ಥಿತರಿದ್ದರು.