ಗೋಕಾಕ:ವಿದ್ಯಾರ್ಥಿ ಜೀವನದಲ್ಲಿ ಆತ್ಮವಿಶ್ವಾಸದಿಂದ ವಿದ್ಯಾಬ್ಯಾಸ ಮಾಡಿದರೆ ಏನು ಬೇಕಾದರು ಸಾಧಿಸಲು ಸಾಧ್ಯ : ಪದ್ಮಶ್ರೀ ಡಾ.ಕಲ್ಪನಾ ಸರೋಜ್
ವಿದ್ಯಾರ್ಥಿ ಜೀವನದಲ್ಲಿ ಆತ್ಮವಿಶ್ವಾಸದಿಂದ ವಿದ್ಯಾಬ್ಯಾಸ ಮಾಡಿದರೆ ಏನು ಬೇಕಾದರು ಸಾಧಿಸಲು ಸಾಧ್ಯ : ಪದ್ಮಶ್ರೀ ಡಾ.ಕಲ್ಪನಾ ಸರೋಜ್
ಗೋಕಾಕ ಮಾ 3 : ವಿದ್ಯಾರ್ಥಿ ಜೀವನದಲ್ಲಿ ಆತ್ಮವಿಶ್ವಾಸದಿಂದ ವಿದ್ಯಾಬ್ಯಾಸ ಮಾಡಿದರೆ ಏನು ಬೇಕಾದರು ಸಾಧಿಸಲು ಸಾಧ್ಯ ಎಂದು ಪದ್ಮಶ್ರೀ ಡಾ.ಕಲ್ಪನಾ ಸರೋಜ
ಹೇಳಿದರು
ಶುಕ್ರವಾರದಂದು ಕಾಯಕಶ್ರೀ ಪ್ರಶಸ್ತಿ ಸ್ವೀಕರಿಸಲು ಗೋಕಾಕ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ನಗರದ ಶೂನ್ಯ ಸಂಪಾದನ ಮಠದಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠದ ಬಿಸಿಇ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆಷಶ ಉತ್ತರಿಸಿ ಅವರು ಮಾತನಾಡಿದರು.
ಮಹಿಳೆಯರು ಇಂದು ಏನು ಬೇಕಾದರು ಸಾಧಿಸಲು ಸಾಧ್ಯ. ಆತ್ಮವಿಶ್ವಾಸ ಜೀವನದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ ಎಂದ ಅವರು ಸರಳ ಜೀವನವನ್ನು ನಡೆಸಲು ಉದ್ದೇಶದಿಂದ ಸುಶಿಕ್ಷಿತ ಮಹಿಳಾ ಸಂಘಟನೆ ಸ್ಥಾಪಿಸಿ ಯುವ ಜನಾಂಗಕ್ಕೆ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಸಮಾಜಸೇವೆಯಲ್ಲಿ ತೊಡಗಿದ್ದೆ ಆದರೆ ನನ್ನಲ್ಲಿದ್ದ ಆತ್ಮವಿಶ್ವಾಸದ ಫಲವಾಗಿ ಇಂದು ಇಷ್ಟೆಲ್ಲಾ ಸಾಧಿಸಲು ಸಾಧ್ಯವಾಗಿದೆ ಎಂದರು. ಜೀವನ ಇರುವವರೆಗು ಮನುಷ್ಯ ಸಾಧಿಸುವ ಛಲ ಇರಬೇಕು. ವಿದ್ಯಾರ್ಥಿ ಜೀವನದಲ್ಲಿ ದೃಢ ನಿರ್ಧಾರಗಳನ್ನು ಕೈಗೊಂಡು ತಾನು ಅಂದುಕೊಡಂತೆ ಸಾಧನೆ ಮಾಡಲು ಸಾಧ್ಯ. ಜೀವನದಲ್ಲಿ ದುಃಖಗಳನ್ನು ದಾಟಬೇಕು ಆಗ ಅಂದುಕೊಂಡದ್ದನ್ನು ಮಾಡಲು ಸಾಧ್ಯ. ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಾನು ಸಾಧನೆಯ ಮೆಟ್ಟಿಲು ಏರಿದ್ದೇನೆ ತಾವು ಸಹ ಮಹಾನ ಪುರುಷರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಎಲ್ಲಾ ರಂಗಗಳಲ್ಲಿ ಹೆಚ್ಚಿನ ಆಸಕ್ತಿ ತೋರಿ ಮುನ್ನುಗಿ ಸಾಧಕರರಾಗಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಶಿಕ್ಷಕಿ ಅರ್ಪನಾ ನಿರೂಪಿಸಿ ,ವಂದಿಸಿದರು . ಈ ಸಂದರ್ಭದಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠದ ಆಡಳಿತಾಧಿಕಾರಿ ಅಡಿವೇಶ ಗವಿಮಠ, ಪ್ರಾಚಾರ್ಯ ಜಗದೀಶ್ ಮುತನಾಳ ಇದ್ದರು