RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಮಹಿಳೆಯರು ಬದುಕಿನಲ್ಲಿ ಸಂಘರ್ಷಮಾಡಿ ಅಸಾಧ್ಯವಾದುದ್ದನ್ನು ಸಾಧಿಸಲು ಸಾಧ್ಯ : ಪದ್ಮಶ್ರೀ ಡಾ.ಕಲ್ಪನಾ ಸರೋಜ್

ಗೋಕಾಕ:ಮಹಿಳೆಯರು ಬದುಕಿನಲ್ಲಿ ಸಂಘರ್ಷಮಾಡಿ ಅಸಾಧ್ಯವಾದುದ್ದನ್ನು ಸಾಧಿಸಲು ಸಾಧ್ಯ : ಪದ್ಮಶ್ರೀ ಡಾ.ಕಲ್ಪನಾ ಸರೋಜ್ 

ಮಹಿಳೆಯರು ಬದುಕಿನಲ್ಲಿ ಸಂಘರ್ಷಮಾಡಿ ಅಸಾಧ್ಯವಾದುದ್ದನ್ನು  ಸಾಧಿಸಲು ಸಾಧ್ಯ : ಪದ್ಮಶ್ರೀ ಡಾ.ಕಲ್ಪನಾ ಸರೋಜ್

ಗೋಕಾಕ ಮಾ 3 : ಮಹಿಳೆಯರು ಬದುಕಿನಲ್ಲಿ ಸಂಘರ್ಷಮಾಡಿ ಅಸಾಧ್ಯವಾದುದ್ದನ್ನು  ಸಾಧಿಸಲು ಸಾಧ್ಯ ಎಂದು  ಪದ್ಮಶ್ರೀ ಡಾ.ಕಲ್ಪನಾ ಸರೋಜ್ ಹೇಳಿದರು
ಶುಕ್ರವಾರದಂದು  ಸಂಜೆ ನಗರದ ಶೂನ್ಯ ಸಂಪಾದನ ಮಠದ ಕಾಯಕಯೋಗಿ ಲಿಂಗೈಕ್ಯ ಬಸವ ಮಹಾಸ್ವಾಮಿಜಿಗಳವರ 18ನೇ ಪುಣ್ಯಸ್ಮರಣೋತ್ಸವದ ನಿಮಿತ್ತ ಶೂನ್ಯ ಸಂಪಾದನ ಮಠದ ವತಿಯಿಂದ ಹಮ್ಮಿಕೊಂಡ 18ನೇ ಶರಣ ಸಂಸ್ಕೃತಿ ಉತ್ಸವದ  ಮಹಿಳಾ ಸಮಾವೇಶ ಸಮಾರಂಭದಲ್ಲಿ ಶ್ರೀಮಠದ ವತಿಯಿಂದ ನೀಡಲಾದ ಕಾಯಕಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಅಂದು ಸ್ತ್ರೀಯರು ಮನೆಯಲ್ಲಿ ಇರುವುದು ಒಂದು ದುರಂತವಾಗಿತ್ತು ಆದರೆ ಇಂದು ಅದನ್ನು ಮೆಟ್ಟಿನಿಂತು ಬದುಕನ್ನು ಕಟ್ಟಕೊಳ್ಳುವ ಕಾಲ ಬಂದಿದೆ. ಅದನ್ನು ಅರಿತು ಮಹಿಳೆಯರು ಇಂದು ಜೀವನವನ್ನು ಸಾಗಿಸಬೇಕಾಗಿದೆ.
ಪುರುಷ ಪ್ರಧಾನ ದೇಶದಲ್ಲಿ ಸ್ತ್ರೀಯರು ಸಹ ಇಂದು ಸಮಾನರಾಗಿ ಬದುಕಿ ಸಾಕಷ್ಟು ಸಾಧನೆಗಳನ್ನು ಮಾಡಿದ್ದಾರೆ. ಅವರು ನಮಗೆ ಆದರ್ಶರಾಗಬೇಕು.  ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ತುಂಬಾ ಕಷ್ಟಗಳು ಬರುತ್ತವೆ ಅದನ್ನು ಎದುರಿಸುವ ಧೈರ್ಯವನ್ನು ಮಹಿಳೆಯರು ಹೊಂದಬೇಕು. ಬದುಕನ್ನು  ಬದುಕುವ ಕೌಶಲ್ಯವನ್ನು ಕಲಿಯಬೇಕಾದ ಅನಿವಾರ್ಯತೆ ಮಹಿಳೆಯರಿಗೆ ಇದೆ ಎಂದ ಅವರು ತನ್ನ ಜೀವನದಲ್ಲಿ ಎದುರಾದ ಸಮಸ್ಯೆಗಳನ್ನು ಎದುರಿಸಿ ಒಬ್ಬ ಉದ್ಯೋಗಪತಿಯಾದ ಕಥೆಯನ್ನು ಬಿಚ್ಚಿಟ್ಟರು.
ನನಗೆ ಇಲ್ಲಿಯವರೆಗೆ ನಾರಿ ಸಮ್ಮಾನ, ಪದ್ಮಶ್ರೀ ಸೇರಿದಂತೆ ಅನೇಕ  ಪುರಸ್ಕಾರಗಳು ಸಿಕ್ಕಿವೆ ಆದರೆ ಶ್ರೀ ಶೂನ್ಯ ಸಂಪಾದನ ಮಠದ ಕಾಯಕಶ್ರೀ ಪ್ರಶಸ್ತಿ ತುಂಬಾ ಮಹತ್ವದಾಗಿದೆ ಎಂದು ಕಾಯಕಶ್ರೀ ಪ್ರಶಸ್ತಿಯನ್ನು ತುಂಬು ಹೃದಯದಿಂದ ಕೊಂಡಾಡಿದರು.
ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಉಡುಪಿಯ  ಆಧ್ಯಾತ್ಮ ಚಿಂತಕರಾದ ಡಾ.ವೀಣಾ ಬನ್ನಂಜೆ ಅವರು ಜೀವನದಲ್ಲಿ ನಾವು ನುಡಿದಂತೆ  ನಡೆದರೆ ಮಾತ್ರ ಉಳಿಯುತ್ತೇವೆ. ಮಹಿಳಾ ಪರಂಪರೆಯ ಎಂದರೆ ನಮ್ಮಲ್ಲಿ ಬೇರೆ ಭಾವನೆ ಬರುತ್ತದೆ. ಅಭಿನವ ಗುಪ್ತಾ  ಮಹಿಳೆಯರನ್ನು ಹೋರಗಡೆ ಇಡುವಿಕೆಯನ್ನು ಮೊದಲು ಧಿಕ್ಕರಿಸಿ, ಮಹಿಳೆ ಎಲ್ಲ ರಂಗದಲ್ಲೂ ಪುರುಷರ ಸಮಾನರಾಗಿ ಕಾರ್ಯ ಮಾಡ ಬಲ್ಲರು ಎಂದು ಜಗತ್ತಿಗೆ ತೋರಿಸಿದ್ದಾರೆ.ಅದನ್ನು ಮಹಿಳೆಯರು ತಿಳಿದು ಬದುಕಬೇಕು. ಮೊದಲ ಹೆಣ್ಣಾಗಬೇಕು ಎಂಬುವುದು ಪ್ರಾಥಮಿಕ ಆದ್ಯತೆ. ಇನ್ನೋಬ್ಬರ ಬದುಕನ್ನು ಸುಧಾರಿಸುವಲ್ಲಿ ಸ್ತ್ರೀಯರ ಪಾತ್ರ ಮುಖ್ಯವಾಗಿದೆ. ವಚನಗಾರ್ತಿಯರು, ಶಿವಶರಣೆಯರು  ಸಹ ಮಹಿಳೆಯ ಮಹತ್ವವನ್ನು ಜಗತ್ತಿಗೆ ತೋರಿಸಿದ್ದಾರೆ. ಸ್ತ್ರೀಯರು ಇಂದು ಪುರುಷರ ಸಮಾನವಾಗಿ ನಡೆಯುತ್ತಿದ್ದಾರೆ. ಆಧ್ಯಾತ್ಮ ಪರಂಪರೆಯ ಹೊಂದಿದರವರಿಗೆ ಒಬ್ಬ ತಾಯಿ ಇದ್ದಾಳೆ.ತಾಯಿ ಒಬ್ಬಳೇ ನಮ್ಮನ್ನು ಭಗವಂತನಿಗೆ ತೋರಿಸಲು ಸಾಧ್ಯ. ಸಂಸ್ಕಾರ ಭಗವಂತನ ದಾರಿಗೆ ಅಡ್ಡವಲ್ಲ ಅದನ್ನು ಅರಿತು ನಾವು ನಡೆದರೆ ನಮ್ಮ ಜೀವನ ಪಾವನವಾಗುತ್ತದೆ ಎಂದು ಡಾ‌.ವೀಣಾ ಬನ್ನಂಜೆ ಹೇಳಿದರು.
ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಗೈದ ಮಹನೀಯರಿಗೆ ಸತ್ಕರಿಸಿ, ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಧಾರವಾಡದ  ಮುರುಘಾಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆರ್ಶಿವರ್ಚನ ನೀಡಿದರು.
ವೇದಿಕೆಯಲ್ಲಿ ರಾಜೇಶ್ವರಿ ಈರನಟ್ಟಿ, ಸುನೀತಾ ನಿಂಬರಗಿ, ದೀಪಾ ಪಾಟೀಲ, ಮಂಗಲಾ ಕಮತ, ನಾಗರತ್ನ ರಾಮಗೌಡ, ಡಾ.ನೀತಾ ರಾವ್, ವಿಜಯಲಕ್ಷ್ಮಿ ಹಿರೇಮಠ, ನಿಕೇತಾ ಹಿರೇಮಠ, ಕಾವ್ಯಾ ಮುಚ್ಚಂಡಿಹಿರೇಮಠ,ಸುಶ್ಮೀತಾ ಭಟ್ , ಉತ್ಸವ ಸಮಿತಿಯ ಅಧ್ಯಕ್ಷ ಜಯಾನಂದ ಮುನವಳ್ಳಿ ಉಪಸ್ಥಿತರಿದ್ದರು.

Related posts: