RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ತ್ರಿವಿಧ ದಾಸೋಹಗಳೊಂದಿಗೆ ಸಮಾಜ ಮುಖಿಯಾಗಿ ಮಠಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ : ಮಹಾಂತೇಶ ಬಿಳಗಿ

ಗೋಕಾಕ:ತ್ರಿವಿಧ ದಾಸೋಹಗಳೊಂದಿಗೆ ಸಮಾಜ ಮುಖಿಯಾಗಿ ಮಠಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ : ಮಹಾಂತೇಶ ಬಿಳಗಿ 

ತ್ರಿವಿಧ ದಾಸೋಹಗಳೊಂದಿಗೆ ಸಮಾಜ ಮುಖಿಯಾಗಿ ಮಠಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ : ಮಹಾಂತೇಶ ಬಿಳಗಿ

ಗೋಕಾಕ ಮಾ 4 : ತ್ರಿವಿಧ ದಾಸೋಹಗಳೊಂದಿಗೆ ಸಮಾಜ ಮುಖಿಯಾಗಿ ಮಠಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತವೆ  ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಐಎಎಸ್ ಅಧಿಕಾರಿ ಮಹಾಂತೇಶ ಬಿಳಗಿ ಹೇಳಿದರು.
ಶನಿವಾರದಂದು   ಸಂಜೆ ನಗರದ ಶೂನ್ಯ ಸಂಪಾದನ ಮಠದ ಕಾಯಕಯೋಗಿ ಲಿಂಗೈಕ್ಯ ಬಸವ ಮಹಾಸ್ವಾಮಿಜಿಗಳವರ 18ನೇ ಪುಣ್ಯಸ್ಮರಣೋತ್ಸವದ ನಿಮಿತ್ತ ಶೂನ್ಯ ಸಂಪಾದನ ಮಠದ ವತಿಯಿಂದ ಹಮ್ಮಿಕೊಂಡ 18ನೇ ಶರಣ ಸಂಸ್ಕೃತಿ ಉತ್ಸವದ  ಯುವ ಸಮಾವೇಶವನ್ನು ಉದ್ಘಾಟಿಸಿ  ಅವರು ಮಾತನಾಡಿದರು.
ಅಕ್ಷರ ದಾಸೋಹ, ಅನ್ನ ದಾಸೋಹ, ಆಧ್ಯಾತ್ಮ ದಾಸೋಹಗಳನ್ನು ನೀಡುತ್ತಾ ಸಮುದಾಯಗಳಲ್ಲಿ ಮಠಗಳು ಅರಿವು ಮೂಡಿಸುತ್ತಿವೆ. ಜ್ಞಾನವನ್ನು ನಾವು ಗಳಿಸುತ್ತಾ ಹೋದರೆ ನಮಗೆ ಎಲ್ಲವನ್ನು ಪಡೆಯಲು ಸಾಧ್ಯವಾಗುತ್ತದೆ. ಜೀವನದಲ್ಲಿ ಮೊದಲು ನಮ್ಮನ್ನು ನಾವು ಬದಲಾವಣೆ ಮಾಡಿಕೊಳ್ಳಬೇಕು ಅಂದಾಗ  ಮಾತ್ರ ನಮ್ಮ ಸಮಾಜ ಬದಲಾಗುತ್ತದೆ. ಆ ದಿಸೆಯಲ್ಲಿ ಯುವಕರು ಬೇರೆಯವರನ್ನು ದ್ವೇಸಿಸುವದನ್ನು ಬಿಟ್ಟು ಬದಲಾವಣೆಯ ಹಾದಿಯಲ್ಲಿ ಸಾಗಬೇಕು. ತಂದೆ,ತಾಯಿಯನ್ನು, ಗುರುಹಿರಿಯರನ್ಞು ಗೌರವಿಸಿದಾಗ ಸಮಾಜ ನಮ್ಮನ್ನು ಗೌರವಿಸುತ್ತದೆ. ಸಮಾಜದಲ್ಲಿ ನುಡಿದಂತೆ ನಡೆಯುವವರಿಗೆ ಜಾಸ್ತಿ ಗೌರವವಿದೆ. ತಂದೆ, ತಾಯಿಯನ್ನು ದೇವರೆಂದು ಕಾಣುವ ಯುವಕರು ಮುಂದೆ ಬರಲು ಸಾಧ್ಯ. ಶ್ರದ್ಧೆಯಿಂದ ಕೆಲಸ ಮಾಡಿದರೆ ಸಮಾಜ ನಮ್ಮನ್ನು ಗೌರವಿಸುತ್ತದೆ. ಮಾಡುವಂತಿರಬೇಕು ,ಮಾಡದಂತಿರಬೇಕು ಎಂಬ ಬಸವಣ್ಣನ ವಚನವನ್ನು ತಮ್ಮ ಜೀವನದಲ್ಲಿ ಅಳವಡಿಕೊಂಡು ವಿನಿತ ಭಾವದಿಂದ ಕೆಲಸ ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ಒಳ್ಳೆಯ ಸಂಸ್ಕಾರ ಬೆಳೆಸಿಕೊಳ್ಳಬೇಕು. ಇಂದಿನ ಯುಗದಲ್ಲಿ  ತಂತ್ರಜ್ಞಾನವನ್ನು ಬಳಸಿಕೊಂಡು ಕ್ರಾಂತಿಯನ್ನು ಮಾಡಬಹುದು. ಅದು ಜೀವನವನ್ನು ಹಾಳು ಮಾಡಬಹುದು ಅದನ್ನು ಅರಿತು ತಮಗೆ ಬೇಕಾಗಿದ್ದನ್ನು ಮಾತ್ರ ತಗೆದುಕೊಳ್ಳಬೇಕು. ವ್ಯವಸ್ಥೆಯನ್ನು ದ್ವೇಷ ಮಾಡದೆ ಎಲ್ಲರನ್ನು  ಪ್ರೀತಿಯಿಂದ ಕಾಣಬೇಕು. ಸ್ವಾಭಿಮಾನ ಆತ್ಮಗೌರವವನ್ನು ಬಿಡದೆ ತಮ್ಮನ್ನು ತಾವು ಬದಲಾಯಿಸಕೊಳ್ಳಬೇಕು. ನಿಮಗೆ ನಿವೇ ನಾಯಕರಾಗಬೇಕು. ಬೇರೆಯವರಿಗೆ ಜಯ ಅನ್ನುವ ಪದ್ದತಿ ಬಿಡಬೇಕು. ನಿಮ್ಮನ್ನು ನೀವು ಬೇರೆಯವರಿಗೆ ಹೋಲಿಸಕೊಳ್ಳಬಾರದು.ನಿಮ್ಮನ್ನು ನೀವು ಗೌರವ ಕೊಡುವುದನ್ನು ಕಲಿತುಕೊಳ್ಳಬೇಕು ಎಂದು ಮಹಾಂತೇಶ ಬಿಳಗಿ ಹೇಳಿದರು.
ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಶೂನ್ಯ ಸಂಪಾದನಮಠದ ಪೀಠಾಧಿಪತಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು  ಆರ್ಶಿವರ್ಚನ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರಿಗೆ ಸತ್ಕರಿಸಿ, ಗೌರವಿಸಲಾಯಿತು.
ಮುಂಜಾನೆ ಶ್ರೀಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಅಭಿಷೇಕ,  ಬಿಲ್ವಾರ್ಚನೆ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆದವು. ವಚನ ತಾಡೋಲೇ ಪ್ರತಿಗಳು ಹಾಗೂ ವಿಶ್ವಗುರು ಬಸವಣ್ಣನವರ ಭಾವಚಿತ್ರ, ಕುಂಭಮೇಳ , ವಿವಿಧ ವಾದ್ಯಮೇಳಗಳಂದಿಗೆ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯಿತು.
ವೇದಿಕೆಯಲ್ಲಿ ಬಟಕುರ್ಕಿಯ ಬಸವಲಿಂಗ ಮಹಾಸ್ವಾಮಿಗಳು, ತೇಜಸ್ವಿ ಕಟ್ಟಿಮನಿ, ಉತ್ಸವ ಸಮಿತಿ ಅಧ್ಯಕ್ಷ ಜಯಾನಂದ ಮುನವಳ್ಳಿ, ದಿಗ್ವಿಜಯ್ ಸಿದ್ನಾಳ ,  ಸತೀಶ ಕಡಾಡಿ, ಕೆಂಪಣ್ಣ ವಣ್ಣೂರ, ರಾಜು ಬೈರುಗೋಳ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಆರ್.ಎಲ್‌.ಮಿರ್ಜಿ ಮತ್ತು ಎಸ್.ಕೆ ಮಠದ ನಿರೂಪಿಸಿ, ವಂದಿಸಿದರು.

Related posts: