ಗೋಕಾಕ:ರಂಗಭೂಮಿ ಜೀವನದಲ್ಲಿಯ ನೈಜತೆಯನ್ನು ತೋರಿಸುತ್ತದೆ : ಶ್ರೀ ಅಮರೇಶ್ವರ ದೇವರು
ರಂಗಭೂಮಿ ಜೀವನದಲ್ಲಿಯ ನೈಜತೆಯನ್ನು ತೋರಿಸುತ್ತದೆ : ಶ್ರೀ ಅಮರೇಶ್ವರ ದೇವರು
ಗೋಕಾಕ ಮಾ 7 : ರಂಗಭೂಮಿ ಜೀವನದಲ್ಲಿಯ ನೈಜತೆಯನ್ನು ತೋರಿಸುತ್ತದೆ ಎಂದು ಕುಂದರಗಿಮಠದ ಶ್ರೀ ಅಮರೇಶ್ವರ ದೇವರು ಹೇಳಿದರು.
ಮಂಗಳವಾರದಂದು ನಗರದ ಜ್ಞಾನ ಮಂದಿರದ ಸಭಾಭವನದಲ್ಲಿ ಜರುಗಿದ ಆಶಾ ಕಿರಣ ಕಲಾ ಟ್ರಸ್ಟ್ ವತಿಯಿಂದ ಗೋಕಾವಿ ನಾಡಿನ ವೃತ್ತಿ ರಂಗಭೂಮಿ ಹಿರಿಯ ಕಲಾವಿದರಾದ ದಿವಂಗತ ಬಿ.ಆರ್.ಅರಿಷಿಣಗೋಡಿ ಹಾಗೂ ದಿವಂಗತ ಬಸವಣ್ಣೆಪ್ಪ ಹೊಸಮನಿ ರಂಗ ಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಂಗಭೂಮಿಯಲ್ಲಿ ಮನುಷ್ಯನ ವಾಸ್ತವಿಕತೆಯನ್ನು ತೋರಿಸಲಾಗುತ್ತದೆ. ಬಸಣ್ಣೆಪ್ಪಾ ಹೊಸಮನಿ ಅವರು ಈ ಭಾಗದಲ್ಲಿ ಬಹುದೊಡ್ಡ ರಂಗಭೂಮಿ ಕ್ರಾಂತಿಯನ್ನೇ ಮಾಡಿದ್ದಾರೆ. ಹುಚ್ಚೇಶ್ವರ ನ್ಯಾಟ ಸಂಘದಿಂದ ಅರಿಷಿಣಗೋಡಿ ಅವರು ಸಹ ರಂಗಭೂಮಿ ಕಲಾವಿದರನ್ನು ಉಳಿಸಿ ಬೆಳೆಸುವಲ್ಲಿ ಪ್ರಮುಖಪಾತ್ರವಹಿಸಿದ್ದರು. ರಂಗಭೂಮಿಯಿಂದ ಚಲನಚಿತ್ರಕ್ಕೆ ಬಂದವರು ಕಲೆಯನ್ನು ಬೆಳೆಸಲು ಸಾಧ್ಯ. ಕಲಾವಿದರ ಬದುಕನ್ನು ರಂಗಭೂಮಿ ಕಲಾವಿದರೆ ಅರ್ಥೈಸಿಕೊಳ್ಳಲು ಸಾಧ್ಯ. ಇಂದು ಮಕ್ಕಳಿಗೆ ರಂಗಭೂಮಿಯ ಕಲೆಯನ್ನು ಪರಿಚಯಿಸಬೇಕಾಗಿದೆ ಆ ಕಾರ್ಯವನ್ನು ನಮ್ಮಲ್ಲೆ ತಾಯಂದಿರು ಮಾಡಬೇಕು ಎಂದು ಶ್ರೀಗಳು ಹೇಳಿದರು.
ಈ ಸಂದರ್ಭದಲ್ಲಿ ರಂಗಭೂಮಿ ದ್ರೋಣ ದಿವಂಗತ ಬಿ.ಆರ್.ಅರಶಿಣಗೋಡಿ ರಂಗಭೂಮಿ
ದ್ರೋಣ ಪ್ರಶಸ್ತಿಯನ್ನು ಮಂಟೂರಿನ ಶಿವಪುತ್ರಪ್ಪ ಕಾಲತಿಪ್ಪಿ ಹಾಗೂ ರಂಗಭೂಮಿ ಭೀಷ್ಮ ದಿವಂಗತ ಬಸವಣೆಪ್ಪಾ ಹೋಸಮನಿ ರಂಗಭೂಮಿ ಭೀಷ್ಮ ಪ್ರಶಸ್ತಿಯನ್ನು ಶ್ರೀಧರಗಡ್ಡೆಯ ಶ್ರೀ ರೇವಣಸಿದ್ದಯ್ಯ ಹೊಸಮಠ ಅವರಿಗೆ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಶ್ರೀಮತಿ ಸುಸ್ಮಿತಾ ಶೆಟ್ಟಿ ಅವರನ್ನು ಗೌರವಸಿ, ಸನ್ಮಾನಿಸಲಾಯಿತು.
ಸಮಾರಂಭದ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆರ್ಶಿವರ್ಚನ ನೀಡಿದರು. ಅಧ್ಯಕ್ಷತೆಯನ್ನು ರಾಜಕೀಯ ಧುರೀಣ ಅಶೋಕ ಪೂಜೇರಿ ವಹಿಸಿದ್ದರು.
ವೇದಿಕೆಯಲ್ಲಿ ಗಣ್ಯರಾದ ಮಹಾಂತೇಶ ತಾಂವಶಿ , ರಜನಿ ಜಿರಗ್ಯಾಳ, ರಂಗ ಕಲಾವಿದೆ ಮಾಲತಿಶ್ರೀ ಮೈಸೂರು, ಶ್ರೀಮತಿ ಸುವರ್ಣತಾಯಿ ಹೊಸಮಠ, ಶ್ರೀಮತಿ ವನಿತಾ ರಾಜೇಶ್, ಶ್ರೀಮತಿ ವಿದ್ಯಾ ಮಗದುಮ್ಮ, ಸಾಹಿತಿ ಜಯಾನಂದ ಮಾದರ, ಸಂಗಮೇಶ ಉಜ್ವನಿ ಇದ್ದರು.