RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಶಾಸಕ ಸತೀಶ ಜಾರಕಿಹೊಳಿ ಅವರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ : ಸನತ್ ಜಾರಕಿಹೊಳಿ

ಗೋಕಾಕ:ಶಾಸಕ ಸತೀಶ ಜಾರಕಿಹೊಳಿ ಅವರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ : ಸನತ್ ಜಾರಕಿಹೊಳಿ 

ಶಾಸಕ ಸತೀಶ ಜಾರಕಿಹೊಳಿ ಅವರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ : ಸನತ್ ಜಾರಕಿಹೊಳಿ

ಗೋಕಾಕ ಮಾ 10 : ಶಾಸಕ ಸತೀಶ ಜಾರಕಿಹೊಳಿ ಅವರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು, ಅವರಿಗೆ ಇನ್ನಷ್ಟು ಬೆಂಬಲ ನೀಡಿ ಅವರ ಕೈಬಲ ಪಡಿ‌ಸಬೇಕು ಎಂದು ಎಲ್ಇಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ ಹೇಳಿದರು
ಶುಕ್ರವಾರದಂದು ಪಾಶ್ಚಾಪೂರ ಗ್ರಾಮದ ದಿಗಂಬರ ಜೈನ ಬಸದಿಗೆ ಭೇಟಿನೀಡಿದ ಅವರು ನೆರೆದಿದ್ದ ಸಮಾಜ ಭಾಂಧವರನ್ನು ಉದ್ದೇಶಿಸಿ ಮಾತನಾಡಿದರು.
ಅತ್ಯಂತ ಹಿಂದುಳಿದ ಯಮಕನಮರಡಿ ಕ್ಷೇತ್ರದಲ್ಲಿ 60 ವರ್ಷಗಳಲ್ಲಿ ಆಗದ ಅಭಿವೃದ್ಧಿ ಕಾರ್ಯಗಳನ್ನು ಶಾಸಕ ಸತೀಶ ಜಾರಕಿಹೊಳಿ ಅವರು ಕಳೆದ ಮೂರು ಅವಧಿಯಲ್ಲಿ ಮಾಡಿ ಯಮಕನಮರಡಿ ಕ್ಷೇತ್ರವನ್ನು ನಂದನವನ್ ಮಾಡಿದ್ದಾರೆ. ಅವರು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಮನಗಂಡು ಈ ಭಾರಿಯೂ ಸಹ ಯಮಕನಮರಡಿ ಮತದಾರರು ಅವರನ್ನು ಬೆಂಬಲಿಸಿ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ಪಣ ತೊಡಬೇಕು ಎಂದು ಮನವಿ ಮಾಡಿದರು.
ಮುನಿಶ್ರೀ ಸಚ್ಚಿದಾನಂದ ಮಹಾರಾಜಿ ಅವರು ಮಾತನಾಡಿ ಜಾರಕಿಹೊಳಿ ಕುಟುಂಬ ಸರ್ವಧರ್ಮ ಸಮಾಜ ಭಾಂಧವರನ್ನು ಬೆಳೆಸುವ ಕಾರ್ಯ ಮಾಡುತ್ತಿದ್ದು,ಧರ್ಮದ ಸಹಾಯ ಇಲ್ಲದೆ ಯಾರು ಬೆಳೆಯಲು ಸಾಧ್ಯವಿಲ್ಲ. ಇತ್ತೀಚೆಗೆ ಧರ್ಮ ಮತ್ತು ರಾಜಕೀಯ ಇಂದು ಒಂದೆ ನ್ಯಾಣದ ಎರೆಡು ಮುಖಗಳು ಎಂಬಂತೆ ಗೋಚರಿಸುತ್ತಿವೆ. ಆದರೆ ಜಾರಕಿಹೊಳಿ ಸಹೋದರರು ಜಾತ್ಯಾತೀತವಾಗಿ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುವ ಕಾರ್ಯ ಮಾಡುತ್ತಿರುವುದು ಮಾದರಿಯಾಗಿದ್ದು, ಜಾರಕಿಹೊಳಿ ಕುಟುಂಬದ ಈ ಕಾರ್ಯವನ್ನು ಗಮಿಸಿ ಯಮಕನಮರಡಿ ಕ್ಷೇತ್ರದಲ್ಲಿ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಸಮಾಜ ಭಾಂಧವರು ಬೆಂಬಲ ನೀಡಿಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸನತ್ ಜಾರಕಿಹೊಳಿ ಪಾಶ್ಚಾಪೂರ ಗ್ರಾಮದ ವಿವಿಧ ದೇವಸ್ಥಾನಗಳಿಗೆ ಮತ್ತು ಹಕಾನಿಭಾಷಾ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ವಿನೋದ ಡೊಂಗರೆ, ರಾಜು ಧರಗಶೆಟ್ಟಿ, ಪ್ರಸನ್ನ ಘಾಳಿ, ಕುಶಲ ಭಪ್ಟಾಳ,ಸಂತೋಷ ಭಪ್ಪಾಳೆ, ಅಶೋಕ ಮಿರ್ಜಿ,ಅಜಪ್ಪ ಮಿರ್ಜಿ,ಪ್ರವೀನ ಭಪ್ಪಾಳೆ, ಅಭಿನಂಧನ ಘಾಳಿ, ಅಪ್ಪಸಾಬ ಮಿರ್ಜಿ, ಸತೇಪ್ಪ ಕೊಡಜೋಗಿ, ರಾಮ ತಳವಾರ,ವಿಕ್ರಂ ಕೊಡಜೋಗಿ, ಸುರೇಶ್ ಬಸನಾಯಿಕ,ಸುರೇಶ್ ಬಸನಾಯಿಕ,ಬಸು ಧನದಮನಿ, ಶಿದ್ದಪ್ಪ ಶಿಡ್ಲಹಾಳ, ಕರವೇ ಅಧ್ಯಕ್ಷ ಪರಶುರಾಮ ಬಸುನಾಯಿಕ, ಮುಸ್ಲಿಂ ಸಮಾಜದ ಮುಖಂಡರುಗಳಾದ ಮಕ್ತಮ್ ದೇಸಾಯಿ,ಅಬ್ದುಲಗಣಿ ಧರ್ಗಾ, ಇರ್ಫಾನ್ ದೇಸಾಯಿ,ಸರ್ಫಾರಾಜ ಪೀರಜಾದೆ, ಅಲ್ಲಾಖಾನ ಅರಳಿಕಟ್ಟಿ,ಇರ್ಷಾದ್ ಫನಿಬಂದ್, ಅಷ್ಪಾಕ ದರ್ಗಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: