RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸ್ಫರ್ಧಾತ್ಮಕ ಮನೋಭಾವದಿಂದ ಬೆಳೆಯುತ್ತಿರುವ ಮಕ್ಕಳನ್ನು ಪಾಲಕರು ಪ್ರೋತ್ಸಾಹಿಸಿ : ಬಿಇಒ ಜಿ‌.ಬಳಗಾರ

ಗೋಕಾಕ:ಸ್ಫರ್ಧಾತ್ಮಕ ಮನೋಭಾವದಿಂದ ಬೆಳೆಯುತ್ತಿರುವ ಮಕ್ಕಳನ್ನು ಪಾಲಕರು ಪ್ರೋತ್ಸಾಹಿಸಿ : ಬಿಇಒ ಜಿ‌.ಬಳಗಾರ 

ಸ್ಫರ್ಧಾತ್ಮಕ ಮನೋಭಾವದಿಂದ ಬೆಳೆಯುತ್ತಿರುವ ಮಕ್ಕಳನ್ನು ಪಾಲಕರು ಪ್ರೋತ್ಸಾಹಿಸಿ : ಬಿಇಒ ಜಿ‌.ಬಳಗಾರ

ಗೋಕಾಕ ಮಾ 11 : ಸ್ಫರ್ಧಾತ್ಮಕ ಮನೋಭಾವದಿಂದ ಬೆಳೆಯುತ್ತಿರುವ ಮಕ್ಕಳನ್ನು ಪಾಲಕರು ಪ್ರೋತ್ಸಾಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ ಬಳಗಾರ ಹೇಳಿದರು.
   ಶನಿವಾರದಂದು ನಗರದ ತಾಪಂ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕ ಶಾಖೆಯಿಂದ ಹಮ್ಮಿಕೊಂಡ 2020-21, 2021-22ನೇ ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ಪಿಯೂಸಿ ಪ್ರತಿಭಾವಚಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
  ಇಂದಿನ ತಾಂತ್ರಿಕ ಒತ್ತಡದ ಜೀವನದಲ್ಲಿ ಸರಕಾರಿ ನೌಕರರು ತಮ್ಮ ಮಕ್ಕಳ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಬೇಕು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಅವರನ್ನು ಪ್ರತಿಭಾನ್ವಿತರನ್ನಾಗಿ ಮಾಡಬೇಕು. ಜಗತ್ತಿನಲ್ಲೇ ಭಾರತ ದೇಶದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನವಿದ್ದು ಎಲ್ಲರೂ ಅವರನ್ನು ಗೌರವಿಸುವಂತೆ ಕರೆ ನೀಡಿದರು.
   ಸಮಾರಂಭವನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಉದ್ಘಾಟಿಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸತ್ಕರಿಸಿದರು.
  ಈ ಸಂದರ್ಭದಲ್ಲಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಬಸವರಾಜ ಮುರಘೋಡ, ಸಿಡಿಪಿಓ ಡಿ ಎಸ್ ಕುಡುವಕ್ಕಲಿ ಸೇರಿದಂತೆ ಇತರರು ಇದ್ದರು.

Related posts: