RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಮಾರ್ಚ್ 12 ರಂದು ಅಂಕಲಗಿಯಲ್ಲಿ ಬಿಜೆಪಿ ಸಮಾವೇಶ

ಗೋಕಾಕ:ಮಾರ್ಚ್ 12 ರಂದು ಅಂಕಲಗಿಯಲ್ಲಿ ಬಿಜೆಪಿ ಸಮಾವೇಶ 

ಮಾರ್ಚ್ 12 ರಂದು ಅಂಕಲಗಿಯಲ್ಲಿ ಬಿಜೆಪಿ ಸಮಾವೇಶ

ಗೋಕಾಕ ಮಾ 11 : ಕುಂದರನಾಡಿನ ಶಕ್ತಿ ಕೇಂದ್ರ ಅಂಕಲಗಿಯ ಶ್ರೀ ಅಡವಿ ಸಿದ್ದೇಶ್ವರಮಠದ ಬಳಿಯ ಹೈಸ್ಕೂಲ್ ಮೈದಾನದಲ್ಲಿ ಮಾರ್ಚ್ 12 ರಂದು (ಭಾನುವಾರ) ಸಂಜೆ 5 ಕ್ಕೆಬಿಜೆಪಿಯ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ.
ಕಳೆದ ವಿಧಾನಸಭಾ ಉಪಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರು ಬಿಜೆಪಿ ಸೇರಿದ ನಂತರ ಇಡೀ ಕುಂದರ ನಾಡು ಇದೀಗ ಕಮಲಮಯವಾಗಿ ಪರಿವರ್ತನೆಯಾಗಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಗೋಕಾಕ ತಾಲೂಕಿನ ಪ್ರಧಾನ ಭಾಗವಾಗಿರುವ ಇಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರ ಪ್ರಭಾವದಿಂದಾಗಿ ಕಮಲದ ಭದ್ರಕೋಟೆ ನಿರ್ಮಾಣವಾಗಿದೆ. ಪ್ರತಿ ಚುನಾವಣೆಯಲ್ಲಿ ರಮೇಶ ಜಾರಕಿಹೊಳಿ ಅವರಿಗೆ ಕುಂದರನಾಡಿನ ಈ ಭಾಗದಲ್ಲಿ ಅತಿ ಹೆಚ್ಚು ಮತ ಸಿಗುತ್ತದೆ. ಭಾರೀ ಪ್ರಮಾಣದಲ್ಲಿ ಅವರು ಲೀಡ್ ಗಳಿಸುವ ಮೂಲಕ ಜಯಭೇರಿ ಬಾರಿಸುತ್ತಾರೆ. ಈ ಭಾಗದ ಜನತೆಗೆ ಶಾಸಕ ರಮೇಶ ಜಾರಕಿಹೊಳಿ ಎಂದರೆ ಮೊದಲಿನಿಂದಲೂ ಅಚ್ಚುಮೆಚ್ಚು. ಆದ್ದರಿಂದ ಭಾನುವಾರದ ಸಮಾವೇಶ ಅತ್ಯಂತ ಮಹತ್ವದ್ದಾಗಿದ್ದು, ಭಾರೀ ಸಂಖ್ಯೆಯಲ್ಲಿ ಜನ ಸಾಕ್ಷಿಯಾಗಲಿದ್ದಾರೆ.
ವಿಧಾನಸಭಾ ಚುನಾವಣೆಗೆ ಬೆಳಗಾವಿ ಜಿಲ್ಲೆಯಲ್ಲಿ ಗೋಕಾಕ ಮತಕ್ಷೇತ್ರ ಸಂಪೂರ್ಣವಾಗಿ ಸಜ್ಜಾಗಿದೆ. ಮತಕ್ಷೇತ್ರದ ಎಲ್ಲಾ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಈಗಾಗಲೇ ಸಮಾವೇಶ ನಡೆದಿದೆ. ವಾರದ ಹಿಂದಷ್ಟೆ ಮಕ್ಕಳಗೇರಿ ಮತ್ತು ಮಮದಾಪುರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಸಮಾವೇಶ ನಡೆದಿದ್ದು ಇದೀಗ ಕೊನೆ ಹಂತದಲ್ಲಿ ಅಂಕಲಗಿ, ಅಕ್ಕತಂಗೇರಹಾಳ ಪಟ್ಟಣ ಪಂಚಾಯಿತಿ, ಸುಲದಾಳ, ಗುಜನಾಳ, ಕುಂದರಗಿ, ಬೆಣಚಿನಮರಡಿ-ಉ, ತವಗ, ಮದವಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಮಲ ಪಕ್ಷದ ಬೃಹತ್ ಸಮಾವೇಶ ನಡೆಯಲಿದ್ದು 15 ಸಾವಿರಕ್ಕೂ ಹೆಚ್ಚು ರಮೇಶ ಜಾರಕಿಹೊಳಿಯವರ ಅಭಿಮಾನಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಒಟ್ಟಾರೆ ಭಾನುವಾರ 5:00 ಗಂಟೆಗೆ ನಡೆಯಲಿರುವ ಬಿಜೆಪಿ ಸಮಾವೇಶ ತಾಲೂಕಿನ ಇತಿಹಾಸದಲ್ಲಿ ಬಿಜೆಪಿ ಪರವಾಗಿ ಬಿರುಗಾಳಿ ಬೀಸಲಿದೆ. ಅಂಕಲಗಿ, ಅಕ್ಕತಂಗೇರಹಾಳ ಪಟ್ಟಣ ಪಂಚಾಯಿತಿ ಬಿಜೆಪಿ ಸಮಾವೇಶದ ನಂತರ ಮುಂದಿನ ದಿನಗಳಲ್ಲಿ ಗೋಕಾಕ ನಗರದಲ್ಲಿ ಬಿಜೆಪಿ ಸಮಾವೇಶ ನಡೆಯಲಿದೆ. ಆನಂತರದ ದಿನಗಳಲ್ಲಿ ಚುನಾವಣೆ ಘೋಷಣೆಯಾಗಲಿದ್ದು ಶಾಸಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರ ಪರವಾಗಿ ತಾಲೂಕಿನಲ್ಲಿಡೆ ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಭರ್ಜರಿ ಪ್ರಚಾರ ಮಾಡಲಿದ್ದಾರೆ.

Related posts: