ಗೋಕಾಕ:ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಯೋಗ್ಯಕ್ಷೇಮ ಹಾಗೂ ಹಿತರಕ್ಷಣಾ ಕುಂದುಕೊರತೆ ಸಭೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಯೋಗ್ಯಕ್ಷೇಮ ಹಾಗೂ ಹಿತರಕ್ಷಣಾ ಕುಂದುಕೊರತೆ ಸಭೆ
ಗೋಕಾಕ ಮಾ 14 : ತಾಲೂಕಾಡಳಿತ, ತಾಲೂಕು ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರದಂದು ನಗರದ ತಾ.ಪಂ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನರ ಯೋಗ್ಯಕ್ಷೇಮ ಹಾಗೂ ಹಿತರಕ್ಷಣಾ ಕುಂದುಕೊರತೆ ಸಭೆ ತಹಸೀಲ್ದಾರ್ ಶ್ರೀಧರ ಮುಂದಲಮನಿ ಅವರ ಅಧ್ಯಕ್ಷೆತೆಯಲ್ಲಿ ಜರುಗಿತು.
ಈ ಸಭೆಯಲ್ಲಿ ಕುಡಿಯುವ ನೀರಿನ ಪೂರೈಕೆ, ಗ್ರಾಮಗಳ ಸ್ವಚ್ಛತೆ, ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಎಸ್.ಸಿ., ಎಸ್.ಟಿ ಕಾಲೋನಿಗಳಿಗೆ ಪೊಲೀಸರ ಭೇಟಿನೀಡಿ ಮಾಹಿತಿ ಸಂಗ್ರಹ, ನೀರಾವರಿ ಮೋಟಾರುಗಳ ಕಳ್ಳತನ ತಡೆಗಟ್ಟಲು ಕ್ರಮ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವಾಗಿ ಸಮಸ್ಯೆಗಳನ್ನು ಪರಿಹರಿಸುವಂತೆ ತಿಳಿಸಲಾಯಿತು.
ಸಮಾಜ ಭಾಂಧವರು ತಮ್ಮ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ಸಮಿತಿಗೆ ನೀಡಿ ಪರಿಹಾರ ಕಂಡುಕೊಳ್ಳುವಂತೆ ತಹಶೀಲ್ದಾರ ತಿಳಿಸಿದರು.
ಈ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ವ್ಹಿ. ಕಲ್ಲಪ್ಪನವರ, ಗ್ರೇಡ್ 2 ತಹಸೀಲ್ದಾರ ಎಲ್ .ಎಚ್.ಭೋವಿ, ಬಿಇಒ ಜಿ.ಬಿ.ಬಳಗಾರ, ಸಮಿತಿ ಸದಸ್ಯರಾದ ಗೋವಿಂದ ಕಳ್ಳಿಮನಿ, ಓಂಕಾರಪ್ಪ ಬಂಡಿವಡ್ಡರ, ಅಜೀತ ಹರಿಜನ ಇದ್ದರು.