RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಡೀನ್ ಅವರ ಕ್ರಮವನ್ನು ಖಂಡಿಸಿ ಸುಮಾರು 42 ಕ್ಕೂ ಹೆಚ್ಚು ದಿನಗೂಲಿ ನೌಕರರು ಕಾಲೇಜಿನ ಮುಂದೆ ಧರಣಿ ಸತ್ಯಾಗ್ರಹ

ಘಟಪ್ರಭಾ:ಡೀನ್ ಅವರ ಕ್ರಮವನ್ನು ಖಂಡಿಸಿ ಸುಮಾರು 42 ಕ್ಕೂ ಹೆಚ್ಚು ದಿನಗೂಲಿ ನೌಕರರು ಕಾಲೇಜಿನ ಮುಂದೆ ಧರಣಿ ಸತ್ಯಾಗ್ರಹ 

ಡೀನ್ ಅವರ ಕ್ರಮವನ್ನು ಖಂಡಿಸಿ ಸುಮಾರು 42 ಕ್ಕೂ ಹೆಚ್ಚು ದಿನಗೂಲಿ ನೌಕರರು ಕಾಲೇಜಿನ ಮುಂದೆ ಧರಣಿ ಸತ್ಯಾಗ್ರಹ

ಘಟಪ್ರಭಾ ಮಾ 16 : ಸಮೀಪದ ಅರಭಾವಿ ಕಿತ್ತೂರ ರಾಣಿ ಚೆನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ದಿನಗೂಲಿ ನೌಕರರು ಕಾರ್ಮಿಕ ಇಲಾಖೆಯ ನಿಯಮಾನುಸಾರ ಕನಿಷ್ಠ ವೇತನ ನೀಡಬೇಕೆಂದು ಕೋರ್ಟ್ ಮೆಟ್ಟಲೇರಿದ ಪರಿಣಾಮ ಅವರನ್ನು ಕೆಲಸದಿಂದ ವಜಾ ಗೊಳಿಸಿರುವ ಮಹಾವಿದ್ಯಾಲಯದ ಡೀನ್ ಅವರ ಕ್ರಮವನ್ನು ಖಂಡಿಸಿ ಸುಮಾರು 42 ಕ್ಕೂ ಹೆಚ್ಚು ದಿನಗೂಲಿ ನೌಕರರು ಕಾಲೇಜಿನ ಮುಂದೆ 4 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಅರಭಾವಿ ಕಿತ್ತೂರ ರಾಣಿ ಚೆನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಸುಮಾರು 10 ರಿಂದ 15 ವರ್ಷಗಳಿಂದ ಹೆಣ್ಣು ಮಕ್ಕಳು ಸೇರಿದಂತೆ ಸುಮಾರು 42 ಜನ ದಿನಗೂಲಿ ನೌಕರರು ಕಾಲೇಜಿನ ವಿವಿಧ ವಿಭಾಗಳಲ್ಲಿ ಗುತ್ತಿಗೆ ಆಧಾರರದ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಕೆಲವರಿಗೆ ಕಾಲೇಜಿನಿಂದ ಉತ್ತಮ ಕೆಲಸಗಾರರೆಂದು ಪ್ರಮಾಣ ಪತ್ರ ಕೂಡಾ ನೀಡಲಾಗಿದೆ.
ನೌಕರರಿಗೆ ಬಾಗಲಕೋಟ ತೋಟಗಾರಿಕೆ ವಿಜ್ಷಾನಗಳ ವಿಶ್ವವಿದ್ಯಾಲಯ ಕುಲಪತಿಗಳಿಂದ ನೇರವಾಗಿ ವೇತನÀ ನೀಡಲಾಗುತ್ತಿದ್ದು, ವೇತನ ಹೆಚ್ಚಿಸಿ ಸರ್ಕಾರದ ಆದೇಶದಂತೆ ಕನಿಷ್ಠ ವೇತನ ನೀಡಬೇಕೆಂದು ದಿನಗೂಲಿ ನೌಕರರು ಬಾಗಲಕೋಟ ವಿಶ್ವವಿದ್ಯಾಲಯದ ಕುಲಪತಿಗಳಿಗೂ ಅನೇಕ ಬಾರಿ ಮನವಿ ಮಾಡಿಕೊಂಡಿದ್ದಾರೆ. ಮನವಿಗೆ ಯಾವುದೇ ಮನ್ನನೆ ಸಿಗದ ಕಾರಣ ಅನಿವಾರ್ಯವಾಗಿ ದಿ:23-02-2021 ರಂದು ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ ಹುಬ್ಬಳ್ಳಿ ಇದರ ಅಧ್ಯಕ್ಷರಾದ ಡಾ.ಕೆ.ಎಸ್.ಶರ್ಮಾ ಅವರ ನೇತೃತವದಲ್ಲಿ ಉಪ ಕಾರ್ಮಿಕ ಆಯುಕ್ತರು ಪ್ರಾದೇಶಿಕ ಬೆಳಗಾವಿ ಇವರಿಗೆ ಕನಿಷ್ಠ ವೇತನ ನೀಡುವಂತೆ ಆದೇಶಿಸುವಂತೆ ಕೋರಿ ಅರ್ಜಿ ಸಲಿಸಿದ್ದಾರೆ.
ಸುಮಾರು ಒಂದು ವರ್ಷಗಳ ಕಾಲ ವಾದ ಆಲಿಸಿದ ಉಪ ಕಾರ್ಮಿಕ ಆಯುಕ್ತರು ಪ್ರಾದೇಶಿಕ ಬೆಳಗಾವಿ ಇವರು 04-02-2023 ರಂದು ಈ ಅರ್ಜಿ ಸಲ್ಲಸಿದ ನೌಕರರಿಗೆ ಸಂಬಂದಿಸಿದಂತೆ ಬಾಕಿ ವೇತನ ಮೊತ್ತ ಮತ್ತು ಪರಿಹಾರ ಮೊತ್ತ ಸೇರಿ ಒಟ್ಟು 30,12,431-00 ರೋಪಾಯಿಗಳನ್ನು ಪಾವತಿಸಬೇಕೆಂದು ಆದೇಶಿಸಿದ್ದಾರೆ.
ಉಪ ಕಾರ್ಮಿಕ ಆಯುಕ್ತರಿಂದ ನೌಕರರ ಪರವಾಗಿ ಆದೇಶ ಬಂದಿದ್ದರಿಂದ ಕುಪಿತಗೊಂಡ ಅರಭಾವಿ ಕಿತ್ತೂರ ರಾಣಿ ಚೆನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಡೀನ ಅವರು ಕೋರ್ಟ್ ಮೆಟ್ಟಲೇರಿದ ಎಲ್ಲ ಕಾರ್ಮಿಕರನ್ನು ಯಾವುದೇ ನೋಟೀಸ ನೀಡದೆ ಸೋಮವಾರ ದಿ:13-03-2023 ರಿಂದ ಕೆಲಸಕ್ಕೆ ಬರಬೇಡಿ ಎಂದು ಡೀನ ಅವರು ಮೌಕೀಕವಾಗಿ ಹೇಳಿದ್ದಾರೆಂದು ದಿನಗೂಲಿ ನೌಕರರ ಆರೋಪವಾಗಿದೆ. 
ಡೀನ ಅವರಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟಕ್ಕೆ ಇಳಿದಿರುವ ದಿನಗೂಲಿ ನೌಕರರು ಸುಮಾರು ನಾಲ್ಕು ದಿನಗಳಿಂದ ಕಾಲೇಜಿನ ಮುಂದೆ ಧರಣಿ ನಡೆಸುತ್ತಿದ್ದಾರೆ. ಸ್ವತಹ ಬಾಗಲಕೋಟ ವಿಶ್ವವಿದ್ಯಾಲಯದ ಕುಲಪತಿಗಳು ನಮ್ಮ ಬೇಡಿಕೆಗಳನ್ನು ಈಡೇರಿರುವರೆಗೂ ನಾವು ಧರಣಿ ಸತ್ಯಾಗ್ರಹವನ್ನು ಮುಂದೆ ವರೆಸುತ್ತೇವೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಧರಣಿ ನಿರತ ದಿನಗೂಲಿ ನೌಕರ ಸುರೇಶ ಇಂಚಲಕರಂಜಿ, ನಾವು ಸುಮಾರು 10 ರಿಂದ 15 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದು, ನಮಗೆ ಅತೀ ಕಡಿಮೆ ವೇತನ ನೀಡಲಾಗುತ್ತಿದೆ. ಸರ್ಕಾರದ ಕಾರ್ಮಿಕ ಇಲಾಖೆಯ ನಿಯಂದಂತೆ ನಮಗೆ ಕನಿಷ್ಠ ವೇತನ ನೀಡುವಂತೆ ನಾವು ಕೋರ್ಟಗೆ ಹೋಗಿದ್ದೇವೆ. ನಮಗೆ ಬಾಕಿ ವೇತನ ಮತ್ತು ಪರಿಹಾರ ಮೊತ್ತ ಪಾವತಿಸಬೇಕೆಂದು ಆದೇಶವಾದರೂ ಸಹ ನಮಗೆ ಯಾವುದೇ ನೋಟೀಸ ನೀಡದೇ ಕೆಲಸದಿಂದ ವಜಾ ಮಾಡಲಾಗಿದೆ. ಇದರಿಂದ 42 ಕುಟುಂಬಗಳು ಬೀದಿಗೆ ಬಂದಿವೆ ಎಂದು ಡೀನ್ ಅವರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. 
ಈ ಕುರಿತು ವಿಶ್ವವಿದ್ಯಾಲಯದ ಡೀನ್ ಎಮ್.ಜಿ.ಕೆರುಟಗಿಯವನ್ನು ಪತ್ರಕರ್ತರು ಕೇಳಿದಾಗ ಧರಣಿ ಮಾಡುತ್ತಿರುವವರು ನಮ್ಮ ನೌಕರರಲ್ಲ. ಅವರಿಗೆ ನಾವು ಗುತ್ತಿಗೆ ಆಧಾರದಲ್ಲಿ ಕೆಲಸ ನೀಡಿದ್ದು, ನಮ್ಮ ಬಾಗಲಕೋಟ ವಿಶ್ವವಿದ್ಯಾಲಯದ ಕುಲಪತಿಗಳು ಅವರ ಖಾತೆಗೆ ನೇರವಾಗಿ ವೇತನ ಸಂದಾಯ ಮಾಡುತ್ತಾರೆ. ಕೋರ್ಟ್ ಕೇಸಿಗೆ ವಿಶ್ವವಿದ್ಯಾಲಯದಿಂದ ಒಬ್ಬ ನ್ಯಾಯವಾದಿಗಳನ್ನು ನೀಮಕ ಮಾಡಲಾಗಿತ್ತು, ಆದರೆ ಅವರು ಕೊರ್ಟಿಗೆ ಹಾಜರಾಗದ ಕಾರಣ ಒನ್ ಸೈಡ ತೀರ್ಪು ನೀಡಲಾಗಿದೆ. ಈ ತೀರ್ಪನ್ನು ನಾನು ಒಪ್ಪುವದಿಲ್ಲ ಎಂದು ಖಡಾಖಂಡಿತವಾಗಿ ಡೀನ್ ಅವರು ಹೇಳಿದರು. ನೌಕರರನ್ನು ಕುಲಪತಿಗಳ ಮೌಕೀಕ ಆದೇಶದ ಮೇರೆಗೆ ಕೆಲಸದಿಂದ ತೆಗೆಯಲಾಗಿದೆ ಎಂದು ತಿಳಿಸಿದರು.


Related posts: