ಗೋಕಾಕ:ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ಕೆಎಲ್ಇ ಸಂಸ್ಥೆಯ ಮುಖ್ಯಗುರಿಯಾಗಿದೆ : ಮಹಾಂತೇಶ ಕವಟಗಿಮಠ
ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ಕೆಎಲ್ಇ ಸಂಸ್ಥೆಯ ಮುಖ್ಯಗುರಿಯಾಗಿದೆ : ಮಹಾಂತೇಶ ಕವಟಗಿಮಠ
ಗೋಕಾಕ ಮಾ 18 : ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ಕೆಎಲ್ಇ ಸಂಸ್ಥೆಯ ಮುಖ್ಯಗುರಿಯಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕೆಎಲ್ಇ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು.
ಶನಿವಾರದಂದು ನಗರದ ಕೆಎಲ್ಇ ಆಸ್ಪತ್ರೆಯ ಆವರಣದಲ್ಲಿ
ಡಾ. ಪ್ರಭಾಕರ ಕೋರೆ ಅವರ 75ನೇ ಅಮೃತ ಮಹೋತ್ಸವದ ಅಂಗವಾಗಿ ಬೆಳಗಾವಿಯ ಕೆಎಲ್ಇ ಆಸ್ಪತ್ರೆ ತಜ್ಞ ವೈದ್ಯರಿಂದ ಆಯೋಜಿಸಿದ್ದ ಉಚಿತ ತಪಾಸಣೆ ಮೇಘಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೆಎಲ್ಇ ಸಂಸ್ಥೆ ತಜ್ಞ ವೈದ್ಯರಿಂದ ಜನಸಾಮಾನ್ಯರಿಗು ಗುಣಮಟ್ಟದ ಚಿಕಿತ್ಸೆ ನೀಡಿ ಅವರ ಆರೋಗ್ಯ ರಕ್ಷಣೆ ಮಾಡುತ್ತಿದ್ದೆ. ಕೇಂದ್ರ ಸರಕಾರದ ಆಯುಷ್ಯಮಾನ ಭಾರತ, ರಾಜ್ಯ ಸರಕಾರದ ಯಶಸ್ವಿನಿ ಆರೋಗ್ಯ ಮಿಮೆ ಸೇರಿದಂತೆ ಸರಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಬಿ.ಪಿ.ಎಲ್ ಪಡಿತರ ಚೀಟಿ ಬಳಕೆದಾರರಿಗೆ 5 ಲಕ್ಷ, ಎ ಪಿ.ಎಲ್ ಪಡಿತರ ಚೀಟಿ ಬಳಕೆದಾರರಿಗೆ 1.5 ಲಕ್ಷ ರಷ್ಟು ಚಿಕಿತ್ಸಾ ವೆಚ್ಚವನ್ನು ಸರಕಾರವೇ ಬರಿಸುತ್ತದೆ. ಬಹುಮುಖವಾಗಿ ಅಂಗಾಂಗ ಜೋಡಣೆ ಬಗ್ಗೆ ಕೆಎಲ್ಇ ಸಂಸ್ಥೆಯ ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, ಆಕಸ್ಮಿಕ ದುರ್ಘಟನೆಯಲ್ಲಿ ಮೃತಪಟ್ಟವರ ದೇಹವನ್ನು ಅವಸರದಲ್ಲಿ ಅಂತ್ಯಕ್ರಿಯೆ ಮಾಡದೆ ಕೆಎಲ್ಇ ಸಂಸ್ಥೆಗೆ ಮಾಹಿತಿ ನೀಡಿದರೆ ಕೆಎಲ್ಇ ಆಸ್ಪತ್ರೆಯ ತಜ್ಞ ವೈದರಿಗೆ ತಿಳಿಸಿ ಅಂಗಾಂಗದಾನ ಮಾಡಿದರೆ ಸಾವಿನಲ್ಲಿಯೂ ಸಾರ್ಥಕತೆ ಮೆರೆಯಲು ಸಾಧ್ಯ. ಇದರ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಬೇಕು. ಮುಂಬೈ, ಹೈದರಾಬಾದ್ ಬಿಟ್ಟರೆ ಸುಸಜ್ಜಿತ ಸೌಲಭ್ಯಗಳನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಇವೆ. ಇತ್ತೀಚಿಗೆ ಸ್ತ್ರೀಯರು ತಮ್ಮ ಆರೋಗ್ಯದ ಕಡೆ ಗಮನ ಹರಿಸದ ಪರಿಣಾಮ ಹಲವಾರು ಸಮಸ್ಯೆಗಳು ಉದ್ಬವಿಸುತ್ತಿವೆ. ಸ್ತ್ರೀಯರಲ್ಲಿಯೂ ಸಹ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ಕಾರ್ಯ ಕೆಎಲ್ಇ ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಡಾ.ವ್ಹಿ.ಎಸ್.ಸಾಧುನವರ ಅವರು ಕೆಎಲ್ಇ ಆಸ್ಪತ್ರೆ ಕೋರೆ ಅವರ ಕನಸಿನ ಕೂಸು ಬಹಳಷ್ಟು ಜನ ಆಸ್ಪತ್ರೆಗಗಳನ್ನು ಕಟ್ಟಿದ್ದಾರೆ. ಸೂಪರ್ ಸ್ಪೇಶಾಲಿಟಿ ಹಾಗೂ ಎಲ್ಲಾ ರೀತಿಯ ವ್ಯವಸ್ಥೆ ಕೆಎಲ್ಇ ಆಸ್ಪತ್ರೆ ಹೊಂದಿ ಸಮಾಜಮುಖಿ ಕಾರ್ಯ ನಡೆಸುತ್ತದೆ ಎಂದು ಹೇಳಿದರು.
ಖ್ಯಾತ ವೈದ್ಯರಾದ ಡಾ.ವ್ಹಿ. ಡಿ ಪಾಟೀಲ, ಡಾ.ರಿಚರ್ಡ್ ಸಲಧನಹಾ ಮಾತನಾಡಿ ಜನರ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಗದುಗಿನ ಡಾ.ಶ್ರೀ ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಉದ್ಘಾಟಿಸಿದರು. ದಿವ್ಯ ಸಾನ್ನಿಧ್ಯವನ್ನು ನಗರದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆರ್ಶಿವರ್ಚನ ನೀಡಿದರು.
ವೇದಿಕೆಯಲ್ಲಿ ಬಟಕುರ್ಟಿಯ ಬಸವಲಿಂಗ ಮಹಾಸ್ವಾಮಿಗಳು ಜಯಾನಂದ ಮುನವಳ್ಳಿ , ಡಾ.ನಿರಂಜನಾ ಮಹಾಂತೇಶಶೆಟ್ಟಿ, ಡಾ.ರವಿಶಂಕರ್ ನಾಯಿಕ, ಡಾ.ಮಲ್ಲಿಕಾರ್ಜುನ ಖಾನಪೇಠ, ಡಾ.ವರದರಾಜ ಗೋಕಾಕ, ಡಾ.ಆರತಿ ದರ್ಶನ, ಡಾ.ನವೀನ್ ಅಂಗಡಿ, ಡಾ.ಜಯಪ್ರಕಾಶ್ , ಡಾ.ವಿರೇಶ ಮನವಿ, ಡಾ.ಪ್ರಕಾಶ ಮನಶೆಟ್ಟಿ, ಡಾ.ಎಸ.ಸಿ.ಮೇಟಗೌಡರ,ಡಾ.ಪ್ರೀತಿ ಹಜಾರೆ, ಡಾ.ರವಿ ಜತ್ತಿ, ಡಾ.ಮಹೇಶ್ ಕಲ್ಲೋಳಿ, ಡಾ.ಕುಮಾರ್ ಸೇರಿದಂತೆ ಅನೇಕ ತಜ್ಞ ವೈದ್ಯರು ಉಪಸ್ಥಿತರಿದ್ದರು.