RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:2023ಕ್ಕೆ ಬಿಜೆಪಿ ಸಿಎಂ ಆಗಬೇಕು, 2024ಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು : ಶಾಸಕ ರಮೇಶ್ ಜಾರಕಿಹೊಳಿ

ಗೋಕಾಕ:2023ಕ್ಕೆ ಬಿಜೆಪಿ ಸಿಎಂ ಆಗಬೇಕು, 2024ಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು : ಶಾಸಕ ರಮೇಶ್ ಜಾರಕಿಹೊಳಿ 

2023ಕ್ಕೆ ಬಿಜೆಪಿ ಸಿಎಂ ಆಗಬೇಕು, 2024ಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು : ಶಾಸಕ ರಮೇಶ್ ಜಾರಕಿಹೊಳಿ

ಗೋಕಾಕ ಮಾ 25: ಕಳೆದ ಆರು ಚುನಾವಣೆಗಳಲ್ಲಿ ನಾನು ಜಾತಿ ಪಕ್ಷ ಮಾಡಿಲ್ಲ. ನಾನು ಎಂದು ಜಾತಿ ರಾಜಕಾರಣ ಮಾಡಿಲ್ಲ ಪ್ರತಿ ವೇದಿಕೆಯಲ್ಲಿ ಹೇಳಿದ್ದೇನೆ. ಬಿಜೆಪಿ ಮೇಲೆ ವೀರಶೈವ ಸಮಾಜ ಆಶೀರ್ವಾದ ಇರುತ್ತೆ, ಸದಾ ಈ ಆಶೀರ್ವಾದ ಇರಲಿ ಹಂತಹಂತವಾಗಿ ಮುಸ್ಲಿಂ ಸಮಾಜದವರು ಸೇರಿ ಇತರರು ಬಿಜೆಪಿ ಪರ ವಾಲುತ್ತಿದ್ದಾರೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
   ಅವರು, ವೀರಶೈವ ಲಿಂಗಾಯತ ಬಿಜೆಪಿ ಕಾರ್ಯಕರ್ತರ ಸಮಾವೇಶ ಸಮಾವೇಶ ಉದ್ದೇಶಿಸಿ ಮಾತನಾಡಿ, ನಾನು ಐದು ಬಾರಿ ಕಾಂಗ್ರೆಸ್ ಶಾಸಕನಾಗಿದ್ದಾಗ ಬಿಜೆಪಿ ಅಂದ್ರೆ ಕೋಮುವಾದಿ ಪಕ್ಷ ಅಂತಾ ತಲೆಯಲ್ಲಿ ತುಂಬುತ್ತಿದ್ರು ನಿಜವಾದ ಕೋಮುವಾದಿ ಪಕ್ಷ ಅಂದರೆ ಕಾಂಗ್ರೆಸ್ ಎಂದು ಕಾಂಗ್ರೇಸ್ ಪಕ್ಷದ ವಿರುದ್ಧ ಶಾಸಕ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
    ಶ್ರೀಗಳು ಮಾತನಾಡಿದ ಬಳಿಕ ಮಾತನಾಡಲು ಸಂಕೋಚವೆನಿಸುತ್ತಿದೆ. ನಾಗನೂರಲ್ಲಿ ನಡೆದ ಸಮಾವೇಶ ಈಗ ಗೋಕಾಕ್‍ನಲ್ಲಿ ನಡೆದ ಸಮಾವೇಶದಿಂದ ವಿಶೇಷ ಸಂದೇಶ ರವಾಣೆಯಾಗಲಿದೆ. ಎಸ್‍ಸಿ ಎಸ್‍ಸಿಯಲ್ಲಿ, ಒಕ್ಕಲಿಗ ಒಕ್ಕಲಿಗರಲ್ಲಿ ಜಗಳ ಹಚ್ಚಿ ಲಾಭ ಪಡೆಯುವ ಪಕ್ಷ ಕಾಂಗ್ರೆಸ್. ನೀವು ಎಲ್ಲರೂ ಆಶೀರ್ವಾದ ಮಾಡಬೇಕು, ಮಾದರಿ ಕ್ಷೇತ್ರ ಮಾಡಲು ನನಗೆ ಅನುಕೂಲ ಮಾಡಬೇಕು.
    ನಾನು ಕಾಂಗ್ರೆಸ್‍ನಲ್ಲಿ ಮಂತ್ರಿ ಇದ್ದಾಗ ಹೈದರಾಬಾದ್‍ಗೆ ತೆರಳಿದ್ದೆ. ಆಗ ಪ್ರಮುಖ ನಾಯಕರು ಹೈದರಾಬಾದ್ ನಲ್ಲಿ ಇದ್ದರು. ಆಗ ನಾನು ಬಾಲಚಂದ್ರ ಜಾರಕಿಹೊಳಿ, ಬಿ.ವೈ.ವಿಜಯೇಂದ್ರ ಇದ್ದರು. ಯಡಿಯೂರಪ್ಪರನ್ನು ಸಿಎಂ ಮಾಡುವಾಗ ಬಹಳಷ್ಟು ಸಲ ಶ್ರೀಗಳ ಜೊತೆ ಮಾತನಾಡಿದ್ದೇನೆ. ನಾನು ಬಿಜೆಪಿ ಬರ್ತೀನಿ ಯಡಿಯೂರಪ್ಪ ಸಿಎಂ ಮಾಡಬೇಕು ಅಂತಾ ಕಂಡೀಷನ್ ಹಾಕಿದೆ. ಬಿಜೆಪಿ ಪಕ್ಷದಲ್ಲಿ ಬಿಜೆಪಿಯಲ್ಲಿ 75 ವರ್ಷ ಇದ್ದವರಿಗೆ ಸಿಎಂ ಮಾಡಲ್ಲ, ಆಗ ಬಿಎಸ್‍ವೈ ಸಿಎಮ್ ಮಾಡಿದರು.
    ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಉತ್ತಮ ಭವಿಷ್ಯ ಇದೆ. ವೀರಶೈವ ಲಿಂಗಾಯತ ಸಮಾಜಕ್ಕೆ ಸಿಎಂ ಸ್ಥಾನ ನೀಡುವ ಪಕ್ಷ ಬಿಜೆಪಿ ಮಾತ್ರ. ವೀರಶೈವ ಸಮಾಜ, ಮುಸಲ್ಮಾನ ಸಮಾಜ ಗಟ್ಟಿಯಾಗಿ ನಿಂತ್ರೆ ನಿಮ್ಮ ಅನಿಸಿಕೆ ಸಫಲ ಆಗುತ್ತೆ. ತಾವುಗಳು ಯಾವುದೇ ಸುಳ್ಳು ಪ್ರಚಾರಕ್ಕೆ ಕಿವಿಗೊಡಬೇಡಿ ಕಾಂಗ್ರೆಸ್ ಪಕ್ಷದವರ ಗ್ಯಾರಂಟಿ ಕಾರ್ಡ್ ಗೆ. ತೆಲೆಕೇಡಿಸಿಕೊಳ್ಳದಿರಿ ಅವರು ರಾಜಸ್ಥಾನ ಛತ್ತೀಸ್ಗಢದಲ್ಲಿ ಹಲವು ಭರವಸೆ ಕೊಟ್ಟಿದ್ರು ಆದರೆ ಈಡೇರಿಸಿಲ್ಲ. ಅವರ ಗ್ಯಾರಂಟಿಯಲ್ಲಿ ಅಕ್ಕಿ ಒಂದು ಮಾತ್ರ ಕೊಡ್ತಾರೆ, ಏಕಂದ್ರೆ ಅದನ್ನ ಕೇಂದ್ರ ಸರಕಾರ ಕೊಡುತ್ತೆ ಎಂದು ಕಾಂಗ್ರೇಸ್ ವಿರುದ್ಧ ಹರಿಹಾಯ್ದರು.
    ಏಳನೇ ಬಾರಿ ಶಾಸಕನಾಗಿ ಆಯ್ಕೆಯಾಗಿ ಸೇವೆ ಮಾಡುತ್ತೇನೆ. ದಿ.28 ರಂದು ಗೋಕಾಕ ನಗರಕ್ಕೆ ಸಿಎಂ ಬೊಮ್ಮಾಯಿ ಬರುತ್ತಿದ್ದಾರೆ. ಪ್ರವಾಹ ತಡೆಯಲು ತಡೆಗೋಡೆ, ಡ್ಯಾಂ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಅಲ್ಲದೇ ಗೋಕಾಕ್ ಫಾಲ್ಸ್‍ನಲ್ಲಿ ಗ್ಲಾಸ್ ಬ್ರಿಡ್ಜ್ ಮಾಡಲಿದ್ದೇವೆ. ಗೋಕಾಕ ತಾಲೂಕನ್ನು 2023ಕ್ಕೆ ವಿಶ್ವವಿಖ್ಯಾತ ಪ್ರವಾಸಿ ತಾಣ ಮಾಡಲು ಪ್ರಯತ್ನ ಮಾಡುತ್ತಿದ್ದೇನೆ. ಈ ಎಲ್ಲ ಯೋಜನೆಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೋಕಾಕ ಬೆಳೆಯುತ್ತದೆ. 2023ಕ್ಕೆ ಬಿಜೆಪಿ ಸಿಎಂ ಆಗಬೇಕು, 2024ಕ್ಕೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು ಎಂದು ಶಫತಗೈದಿದ್ದೇನೆ. 2023ರ ಚುನಾವಣೆಯಲ್ಲಿ ಮತ್ತೊಮ್ಮೆ ನಮಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
   ಘಟಪ್ರಭಾ ಪ್ರಭಾ ಶುಗರ್ಸ ಕಾರ್ಖಾನೆ ಅಧ್ಯಕ್ಷ ಅಶೋಕ ಪಾಟೀಲ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಬೆಂಬಲಿಸಲು ಇಲ್ಲಿನ ವೀರಶೈವ ಲಿಂಗಾಯತ ಸಮಾಜ ನಿರ್ಧರಿಸಿದೆ ಎಂದು ನಿರ್ಧಾರ ಪ್ರಕಟಿಸಿದರು.
     ಕಳೆದ 40 ವರ್ಷಗಳಿಂದ ರಮೇಶ ಜಾರಕಿಹೊಳಿಯವರು ಲಿಂಗಾಯತ ಸಮಾಜದ ಅಭ್ಯುದಯಕ್ಕೆ ಶ್ರಮಿಸುತ್ತಾ ಬಂದಿದ್ದಾರೆ. ಸಮಾಜದ ಯಾವುದೇ ಕೆಲಸ ಕಾರ್ಯಗಳಿಗೆ ತಕ್ಷಣ ಸ್ಪಂದಿಸುತ್ತಾ ಬಂದಿರುವ ರಮೇಶ ಜಾರಕಿಹೊಳಿ ಅವರು ಲಿಂಗಾಯತ ಸಮಾಜದ ಬಗ್ಗೆ ಅಪಾರ ಕಾಳಜಿ ಹಾಗೂ ಕಳಕಳಿ ಹೊಂದಿದ್ದಾರೆ. ಈ ದಿಸೆಯಲ್ಲಿ ರಮೇಶ ಜಾರಕಿಹೊಳಿ ಅವರು ರಾಜ್ಯದ ಇತರ ಶಾಸಕರಿಗೆ ಮೇಲ್ಪಂಕ್ತಿಯಾಗಿ ನಿಂತಿದ್ದಾರೆ. ಈ ಸಲವೂ ಅವರನ್ನು ಅತ್ಯಂತ ದೊಡ್ಡ ಅಂತರದಿಂದ ಗೆಲ್ಲಿಸಬೇಕು ಎಂದು ಸಮಾಜದ ಮುಖಂಡ ಅಶೋಕ ಪಾಟೀಲ ಮನವಿ ಮಾಡಿದರು.
    ರಮೇಶ ಜಾರಕಿಹೊಳಿ ಅವರು ಲಿಂಗಾಯತ ಸಮಾಜದ ಕಟ್ಟಾಳುವಿನಂತೆ ಕೆಲಸ ಮಾಡುತ್ತಿದ್ದಾರೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಒದಗಿಸುವಲ್ಲಿ ಅವರು ತೋರುತ್ತಿರುವ ಕಾಳಜಿ ಅನನ್ಯವಾವಾದದ್ದು. ಅವರು ಈ ಬಾರಿಯೂ ಅತ್ಯಂತ ದೊಡ್ಡ ಅಂತರದಿಂದ ಗೆಲ್ಲುವುದು ಎಲ್ಲರ ಕನಸಾಗಿದೆ. ಈ ನಿಟ್ಟಿನಲ್ಲಿ ಗೋಕಾಕ ಮತಕ್ಷೇತ್ರದ ಲಿಂಗಾಯತ ಸಮಾಜ ಬಾಂಧವರು ಒಗ್ಗಟ್ಟಾಗಿ ನಿಂದು ರಮೇಶ ಜಾರಕಿಹೊಳಿ ಅವರನ್ನು ಗೆಲ್ಲಿಸಬೇಕು. ಈ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರಕಾರ ಬರಲು ಮುನ್ನುಡಿ ಬರೆಯಬೇಕು. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಸದಾ ವೀರಶೈವ ಲಿಂಗಾಯತ ಸಮಾಜದ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದು ಈ ಬಾರಿಯೂ ಸಮಾಜ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದರು.
     ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಸ್ವಾಮಿಜಿ ಲಿಂಗಾಯತ ಸಮುದಾಯಕ್ಕೆ 2ಆ ಪ್ರವರ್ಗದಡಿ ಶೇ.7ರಷ್ಟು ಮೀಸಲಾತಿ ವಿಚಾರ ಸರ್ಕಾರದ ನಿರ್ಧಾರ ಸ್ವಾಗತಿಸಿದ ಅವರು ಕರ್ನಾಟಕ ಘನ ಸರ್ಕಾರ ಸಿಎಂ ಅಖಂಡ ಲಿಂಗಾಯತ ಸಮುದಾಯಕ್ಕೆ 7 ಪರಸೆಂಟ್  ಮೀಸಲಾತಿ ನೀಡಿದೆ. ಸರ್ಕಾರ ಮೀಸಲಾತಿ ಘೋಷಣೆ ಮಾಡಿದ್ದಕ್ಕೆ ಖುಷಿಯಾಗಿದೆ ಎಂದರು.
    ಕುಂದರಗಿಯ ಶ್ರೀ ಅಮರಸಿದ್ಧೇಶ್ವರ ಸ್ವಾಮಿಜಿ ಮಾತನಾಡಿ ಶಾಸಕ ರಮೇಶ ಜಾರಕಿಹೊಳಿ ಕಾಯಕ ಜೀವಿ ಅವರು ಕಾಯಕವನ್ನೆ ತಮ್ಮ ನಾಯಕರೆಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಕ್ಷೇತ್ರದ ಮಠಗಳ ಅಭಿವೃದ್ಧಿಯಲ್ಲೂ ಅವರ ಪಾತ್ರ ಮಹತ್ವದ್ದಾಗಿದೆ. ಕ್ಷೇತ್ರದ ಜನರಿಗೆ ಅವರು ನಾಯಕರಾದರೇ ಅವರಿಗೆ ಕಾಯಕವೇ ನಾಯಕ ಎಂದು ಬಣ್ಣಿಸಿದರು.
    ವೇದಿಕೆಯ ಮೇಲೆ ಘಟಪ್ರಭಾ ಗುಬ್ಬಲಗುಡ್ಡದ ಶ್ರೀ ಮಲ್ಲಿಕಾರ್ಜುನ ಸ್ವಾಮಿಜಿ, ಮುಪ್ಪಯ್ಯನ ಮಠದ ಶ್ರೀ ರಾಚೋಟೇಶ್ವರ ಸ್ವಾಮಿಜಿ, ತವಗದ ಶ್ರೀ ಬಾಳಯ್ಯ ಅಜ್ಜನವರು, ಮಮದಾಪುರದ ಶ್ರೀ ಚರಮೂರ್ತೇಶ್ವರ ಸ್ವಾಮಿಜಿ, ವೀರಶೈವ ಸಮುದಾಯ ಮುಖಂಡರುಗಳಾದ ಬಸನಗೌಡ ನಿರ್ವಾಣಿ, ಅಡಿವೆಪ್ಪ ನಾವಲಗಟ್ಟಿ, ಶಂಕರ ಬೂಸನ್ನವರ, ಚನ್ನಗೌಡ ಪಾಟೀಲ, ಶಶಿಧರ ದೇಮಶೆಟ್ಟಿ, ಶಂಕರಗೌಡ ಪಾಟೀಲ, ಬಸಪ್ಪ ಹಮ್ಮಿನ, ಎಮ್ ಎಸ್ ಹಿತ್ತಲಮನಿ, ಬಸವರಾಜ ಕಲ್ಯಾಣಶೆಟ್ಟಿ, ಸುರೇಶ ಕಾಡದವರ, ಡಿ ಸಿ ಬಿದರಿ, ಚಂದ್ರಕಾಂತ ಕುರಬೇಟ, ನಿಂಗಪ್ಪ ಬಂಬಲಾಡಿ, ಗುರು ಕಡೇಲಿ, ಐ ಎಸ್ ಮಟಗಾರ, ಮಲ್ಲಿಕಾರ್ಜುನ ಕಬಾಡಗಿ, ಈಶ್ವರ ಮಾಳಗಿ, ಬಾಳಪ್ಪ ಗಿಡ್ಡನವರ, ನಚಿದಾ ಗಣಾಚಾರಿ, ಪುಂಡಲೀಕ ಲಟ್ಟಿ, ದುಂಡಪ್ಪ ಪರವನ್ನಿ, ರಮೇಶ ತುಕ್ಕಾನಟ್ಟಿ, ಶಿವನಗೌಡ ಪಾಟೀಲ, ಜಯಾನಂದ ಹುಣಚ್ಯಾಳ, ಬಾಳೇಶ ಗಿಡ್ಡನವರ, ಜಗದೀಶ ವಣ್ಣೂರ, ಬಸವಂತಪ್ಪ ಉಳ್ಳಾಗಡ್ಡಿ, ಧರೇಪ್ಪ ಉಳ್ಳಾಗಡ್ಡಿ, ರಾಜೇಶ ಉಳ್ಳಾಗಡ್ಡಿ, ಮಂಜು ಪ್ರಭುಹಟ್ಟಿ, ಚಿದಾನಂದ ಶಿರಗಾಂವ ಇದ್ದರು.

Related posts: